BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

suratkal ರಾಹುಲ್ ಗಾಂಧಿಯನ್ನು ಸನಾತನಿಗಳೇ ಭಿಕ್ಷೆ ಬೇಡುವಂತೆ ಮಾಡುತ್ತಾರೆ ; ಡಾ. ಭರತ್ ಶೆಟ್ಟಿ


ಸುರತ್ಕಲ್,ಆಗಸ್ಟ್ 01 : ಸಂಸತ್ ಭವನದ ಮುಂದೆ ರಾಹುಲ್ ಗಾಂಧಿ ಸನಾತನ ಹಿಂದೂ ಧರ್ಮಕ್ಕೆ ನೇರ ಅವಮಾನ ಮಾಡಿದ್ದಾರೆ. ಸನಾತನ ಹಿಂದೂಗಳ ಸಹನೆ ಪರೀಕ್ಷಿಸುತ್ತಿರುವ ರಾಹುಲ್ ಗಾಂಧಿಯನ್ನು ಮುಂದಿನ ದಿನಗಳಲ್ಲಿ ಸನಾತನಿಗಳೇ ರಸ್ತೆಗೆ ಇಳಿಸಿ ಭಿಕ್ಷೆ ಬೇಡುವ ಸ್ಥಿತಿಗೆ ತರುತ್ತಾರೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕೆ ಹೇಳಿಕೆ ನೀಡಿರುವ ಡಾ. ಭರತ್ ಶೆಟ್ಟಿ ರಾಹುಲ್ ಗಾಂಧಿ ಹಾಗೂ ಅವರ ತಂಡ ಹಿಂದೂ ಧರ್ಮದ ಪವಿತ್ರ ಕಾವಿ ವಸ್ತ್ರವನ್ನು ಅಪಮಾನಿಸುವ ರೀತಿಯಲ್ಲಿ ವೇಷ ಧರಿಸಿ ನಾಟಕವಾಡಿದ್ದಲ್ಲದೆ, ರಾಮ ಮಂದಿರಕ್ಕೆ ಹಣ ಹಾಕುವಂತೆ ನಟಿಸಿ ಕೋಟ್ಯಂತರ ಹಿಂದೂಗಳ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು.

ರಾಮ ಮಂದಿರ ನಿರ್ಮಾಣಕ್ಕೆ ಹಂತ ಹಂತವಾಗಿ ಅಡ್ಡಿ ಆತಂಕ ಸೃಷ್ಟಿಸಿದ ಕಾಂಗ್ರೆಸ್, ಈಗ ಮಂದಿರ ನಿರ್ಮಾಣವಾದ ಬಳಿಕ ಅದನ್ನು ಸಹಿಸದೆ ತೇಜೋವಧೆಗೆ ಇಳಿದಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಸಾವಿರ ವರ್ಷ ಕಳೆದರೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರಲಿಲ್ಲ. ಹಿಂದೂ ವಿರೋಧಿ ಮನಸ್ಥಿತಿಯೇ ಕಾಂಗ್ರೆಸ್‌ನ ರಕ್ತದಲ್ಲಿ ಇದೆ ಎಂದು ಟೀಕಿಸಿದ್ದಾರೆ.


ಪೇಪರ್ ಲೀಕ್ ಮತ್ತಿತರ ಶೈಕ್ಷಣಿಕ ಅಕ್ರಮಗಳಿಗೆ ಕೇಂದ್ರ ಅಂಕುಶ, 'ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಕಾಯ್ದೆ 2026’ಕ್ಕೆ ರಾಷ್ಟ್ರಪತಿ ಅಂಕಿತ

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!