ಮಂಗಳೂರು, ಸೆ 30 : ಎಂಆರ್‌ಪಿಎಲ್ (MRPL) ಪ್ರದೇಶದಲ್ಲಿ ಭಾರಿ ಸ್ಪೋಟ ಸಂಭವಿಸಿದೆ. ಆಕಾಶದೆತ್ತರಕ್ಕೆ ಕಪ್ಪು ಹೊಗೆ ಚಿಮ್ಮುತ್ತಿದೆ. ಪರಿಸರದ ಸುತ್ತಮುತ್ತಲಿನ ಮನೆಗಳು ಅಲುಗಾಡಿವೆ. ಸ್ಫೋಟದ ತೀವ್ರತೆಗೆ ಮನೆಗಳ ಬಾಗಿಲು ಹಾಗೂ ಕಿಟಕಿಗಳು ಉದುರಿಹೋಗಿದ್ದು, ಆಕಾಶದಲ್ಲಿ ದಟ್ಟ ಹೊಗೆ ಎದ್ದಿದೆ. ಸುರತ್ಕಲ್ ಪ್ರದೇಶ ಹಾಗೂ ಖಾನಾಪುರದಲ್ಲೂ ಮನೆಗಳು ಅಲುಗಿ, ದೊಡ್ಡ ಶಬ್ದದ ಸದ್ದು ಕೇಳಿಬಂದಿದ್ದು . ಪೊಲೀಸ್ ಅಧಿಕಾರಿಗಳ ಸಹಿತ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಹೆಚ್ಚಿನ ಮಾಹಿತಿ ನೀರೀಕ್ಷಿಸಲಾಗುತ್ತಿದೆ.
ಪ್ರಾರ್ಥಮಿಕ ಮಾಹಿತಿ ಪ್ರಕಾರ MRPl ನಲ್ಲಿ ಬಾಯ್ಲರ್ ಸ್ಪೋಟಗೊಂಡಿದೆ ಎನ್ನಲಾಗಿದೆ. ಪರಿಸರದ ಗ್ರಾಮಗಳಲ್ಲಿ ಮನೆಗಳು ಅದುರಿವೆ ಕಿಟಕಿಗಳ ಗಾಜು ಒಡೆದಿದೆ, ಭೀಕರ ಸ್ಫೋಟದ ಶಬ್ದಕ್ಕೆ ಸುತ್ತಮುತ್ತಲಿನ ಗ್ರಾಮಗಳ ಜನ ಭಯಭೀತಿಗೊಂಡಿದ್ದಾರೆ.
MRPL ಘಟಕದಲ್ಲಿ ಸ್ಫೋಟದ ಹಿನ್ನೆಲೆ ಅಧಿಕೃತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸ್ಥಳಕ್ಕೆ ಭೇಟಿMRPL ಸ್ಪಷ್ಟಣೆ:
ಎಂಆರ್‌ಪಿಎಲ್ ಆವರಣದ ಒಳಗಡೆ ಸ್ಫೋಟ ಸಂಭವಿಸಿರುವುದನ್ನು ಕಂಪನಿಯ ಪಿಆರ್‌ಒ ರುಡಾಲ್ಫ್ ನೊರೊನ್ಹಾ ಖಚಿತಪಡಿಸಿದ್ದು, ತಾಂತ್ರಿಕ ದೋಷ ಅಥವಾ ಘಟಕದಲ್ಲಿನ ಒತ್ತಡದಿಂದ ಈ ದುರ್ಘಟನೆ ಸಂಭವಿಸಿದೆಯೇ ಎಂಬ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಎಂಆರ್‌ಪಿಎಲ್‌ನ ಆಂತರಿಕ ಅಗ್ನಿಶಾಮಕ ದಳ ಹಾಗೂ ಸುರಕ್ಷತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
https://youtube.com/shorts/7OkepWoQfVg?feature=share