ಮಂಗಳೂರು, ಸೆ 29: 13ನೇ ಡಿವೈಎಫ್ಐ ಕರ್ನಾಟಕ ರಾಜ್ಯ ಸಮ್ಮೇಳನವು 2026 ಸೆಪ್ಟೆಂಬರ್ 26,27,28 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ನಡೆಯಿತು. ಖ್ಯಾತ ಚಿತ್ರನಟರಾದ ಪ್ರಕಾಶ್ ರಾಜ್ ಮತ್ತು ಕಿಶೋರ್ ರವರು ಆಕರ್ಷಕ ರ‍್ಯಾಲಿ ಉದ್ಘಾಟಿಸಿ ಸಮ್ಮೇಳನಕ್ಕೆ ಚಾಲನೆ ಕೊಟ್ಟರು. ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರೂ, ರಾಜ್ಯ ಸಭಾ ಸಂಸದರಾದ ಎ.ಎ. ರಹೀಮ್ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಅಧ್ಯಕ್ಷರಾದ ಲವಿತ್ರ ವಸ್ತ್ರದ್ ರವರು ಧ್ವಜಾರೋಹಣ ನೆರವೇರಿಸಿದರು .ಬಹಿರಂಗ ಸಭೆಯ ನಂತರ ಪ್ರತಿನಿಧಿ ಅಧಿವೇಶನ ಪ್ರಾರಂಭವಾಯಿತು. ಅಧಿವೇಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಸುಮಾರು 215 ಮಂದಿ ಪ್ರತಿನಿಧಿಗಳು ಪಾಲ್ಗೊಂಡು ಕಳೆದ ಮೂರು ವರ್ಷಗಳ ಸಂಘಟನೆಯ ಚಟುವಟಿಗೆಗಳ ಮತ್ತು ಮುಂದಿನ ಮೂರು ವರ್ಷಗಳ ಕಾರ್ಯಯೋಜನೆಯ ಬಗ್ಗೆ ಚರ್ಚಿಸಲಾಯಿತು.
ಸಮ್ಮೇಳನದಲ್ಲಿ ಒಟ್ಟು 16 ಪ್ರಮುಖ ನಿರ್ಣಾಯಗಳನ್ನು ಕೈಗೊಳ್ಳಲಾಯಿತು. ಸಮ್ಮೇಳನದಲ್ಲಿ ನೂತನ ಡಿವೈಎಫ್ಐ ರಾಜ್ಯ ಸಮಿತಿ ಆಯ್ಕೆ ಮಾಡಲಾಯಿತು.ಒಟ್ಟು 45 ಸದಸ್ಯರ ರಾಜ್ಯ ಸಮಿತಿಯನ್ನು ರಚನೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಲವಿತ್ರ ವಸ್ತ್ರದ್ , ಕಾರ್ಯದರ್ಶಿಯಾಗಿ ಸಂತೋಷ್ ಬಜಾಲ್ , ಕೋಶಾಧಿಕಾರಿಯಾಗಿ ದಿಲೀಪ್ ಬೆಂಗಳೂರು ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಅಡ್ವೋಕೇಟ್ ಮನೋಜ್ ವಾಮಂಜೂರು,ರಾಜಶೇಖ ರ್.ಎಸ್ ಬಾಗೇಪಲ್ಲಿ ,ಶಿವಪ್ಪ ಅಂಬ್ಳಿಕಲ್, ಬಸವರಾಜ ಹಾವೇರಿ,ಮಾಧುರಿ ಬೋಳಾರ,ಜೊತೆ ಕಾರ್ಯದರ್ಶಿಗಳಾಗಿ ಹರೀಶ್ ವೈ. ಎನ್,ರಿಯಾಝ್ ಆರ್ತಿ,ಅಮರೇಶ ಕಡಗದ ರಿಝ್ವಾನ್ ಹರೇಕಳ ಆಯ್ಕೆಯಾದರು.
