ಮಂಗಳೂರು, ಆಗಸ್ಟ್ 28: ಮಂಗಳೂರಿನ ಇತಿಹಾಸ ಪ್ರಸಿದ್ದ ಶ್ರೀ ವೆಂಕಟರಮಣ ದೇವಳದ ವತಿಯಿಂದ ಸಮುದ್ರ ಪೂಜೆ ವಿಜೃಂಭಣೆಯಿಂದ ಜರುಗಿತು.ಸಮುದ್ರ ಪೂಜೆ ಪ್ರಯುಕ್ತ ಇಂದು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ವತಿಯಿಂದ ವಿಶೇಷ ಸಮುದ್ರ ಪೂಜೆ ಕಾರ್ಯಕ್ರಮವು ಅತ್ಯಂತ ಧಾರ್ಮಿಕ ಶ್ರದ್ಧೆಯಿಂದ ಜರಗಿತು.
ಪೂಜಾ ಪ್ರಯುಕ್ತ ಶ್ರೀ ದೇವಳದಿಂದ ಭವ್ಯ ಮೆರವಣಿಗೆ ಹೊರಟು, ಬಂದರು ಮುಖಾಂತರ ಬೆಂಗರೆ ಮೂಲಕ ಸಾಗಿತು. ಈ ಧಾರ್ಮಿಕ ವಿಧಿವಿಧಾನಗಳಲ್ಲಿ ಶ್ರೀ ದೇವಳದ ಮೊಕ್ತೇಸರರು ಹಾಗೂ ಅನೇಕ ಸ್ವಯಂಸೇವಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.