ಹಳೆಯಂಗಡಿ,ಸೆ 30 : ಬುಧವಾರ ಸಂಭವಿಸಿದ್ದ ಎಂಆರ್‌ಪಿಎಲ್ ದುರಂತದಲ್ಲಿ ಪ್ರಾಣ ಕಳಕೊಂಡ ಹಳೆಯಂಗಡಿಯ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚ್‌ನ ಯುವ ಸದಸ್ಯ ಮನೀಶ್ ಕರ್ಕಡ ಅವರ ಅಗಲಿಕೆಗೆ ಚರ್ಚ್ ಸಮುದಾಯ ಹಾಗೂ ಕುಟುಂಬ ವರ್ಗವು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಜನವರಿ 01, 2003 ರಂದು ಜನಿಸಿದ್ದ ಮನೀಶ್ ಕರ್ಕಡ ಅವರು ಸೆಪ್ಟೆಂಬರ್ 30, 2026 ರಂದು ನಿಧನರಾಗಿದ್ದಾರೆ. ಆಲ್ಬರ್ಟ್ ಕರ್ಕಡ ಮತ್ತು ಸುನಿತಾ ಕರ್ಕಡ ದಂಪತಿಯ ಪ್ರೀತಿಯ ಪುತ್ರ ಹಾಗೂ ಅನಿಶ್ ಕರ್ಕಡ ಅವರ ಸಹೋದರರಾಗಿರುವ ಮನೀಶ್ ಅವರ ಅಕಾಲಿಕ ನಿಧನವು ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ಇಡೀ ಚರ್ಚ್ ಸಮುದಾಯಕ್ಕೆ ಆಘಾತ ತಂದಿದೆ.
"ಮನೀಶ್ ಅವರನ್ನು ಪ್ರೀತಿ ಮತ್ತು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಅವರ ತಂದೆ-ತಾಯಿ, ಸಹೋದರ ಹಾಗೂ ಶೋಕತಪ್ತ ಕುಟುಂಬವರ್ಗಕ್ಕೆ ದೇವರು ಶಕ್ತಿ, ಸಾಂತ್ವನ ಮತ್ತು ಶಾಂತಿಯನ್ನು ನೀಡಲಿ" ಎಂದು ಚರ್ಚ್ ಸಮುದಾಯ ಪ್ರಾರ್ಥಿಸಿದೆ. "ಕರ್ತನಲ್ಲಿ ಮೃತಪಡುವವರು ಇನ್ನುಮುಂದೆ ಧನ್ಯರು" (ಪ್ರಕಟನೆ 14:13) ಎಂಬ ವಚನದೊಂದಿಗೆ ಮೃತರ ಆತ್ಮಕ್ಕೆ ಶಾಂತಿ ಕೋರಲಾಗಿದೆ.