ಮಂಗಳೂರು, ಸೆ 29 : ಕರ್ನಾಟಕದಲ್ಲಿ ಗುರುನಾನಕ್ ಜಯಂತಿಯನ್ನು (ಗುರುನಾನಕ್ ಗುರ್ಪುರಬ್) ರಾಜ್ಯ ಸರ್ಕಾರಿ ರಜಾದಿನವೆಂದು ಘೋಷಿಸಬೇಕೆಂದಯ ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಕಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ NSUI ಜಿಲ್ಲಾ ಉಪಾಧ್ಯಕ್ಷಕ ಸುಖ್ವಿಂದರ್ ಸಿಂಗ್ ರಾಥೋಡ್ ಸಿಖ್ ಧರ್ಮದ ಸಂಸ್ಥಾಪಕರಾದ ಗುರುನಾನಕ್ ದೇವ್ ಜಿ ಅವರು ಮಹಾನ್ ಆಧ್ಯಾತ್ಮಿಕ ನಾಯಕರು ಮತ್ತು ಸಮಾಜ ಸುಧಾರಕರಾಗಿದ್ದರು. ಅವರ ಸಮಾನತೆ, ಭ್ರಾತೃತ್ವ, ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ ಮತ್ತು ಸಾಮುದಾಯಿಕ ಸೌಹಾರ್ದತೆಯ ಬೋಧನೆಗಳು ಕೋಟ್ಯಂತರ ಜನರಿಗೆ ಸ್ಫೂರ್ತಿ ನೀಡುತ್ತಿವೆ. ಅವರ "ಇಕ್ ಓಂಕಾರ್" ಸಂದೇಶ ಮತ್ತು ಲಂಗರ್ ಪರಂಪರೆಯು ಸಮಾಜದ ಎಲ್ಲಾ ವರ್ಗಗಳಲ್ಲಿ ಐಕ್ಯತೆ ಮತ್ತು ಸಮಾನತೆಯನ್ನು ಉತ್ತೇಜಿಸುತ್ತವೆ. ಗುರುನಾನಕ್ ಜಯಂತಿಯಂದು ರಾಜ್ಯ ರಜಾದಿನವನ್ನು ಘೋಷಿಸುವುದು ಅವರ ಸಾರ್ವತ್ರಿಕ ಮೌಲ್ಯಗಳಿಗೆ ತಕ್ಕ ಗೌರವವಾಗುತ್ತದೆ ಮತ್ತು ವೈವಿಧ್ಯತೆ, ಸಾಮಾಜಿಕ ಸೌಹಾರ್ದತೆ ಮತ್ತು ಎಲ್ಲಾ ಸಮುದಾಯಗಳಿಗೆ ಗೌರವ ನೀಡುವ ಕರ್ನಾಟಕದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ Mangaluru ಗುರುನಾನಕ್ ಜಯಂತಿಯನ್ನು ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ರಜಾದಿನವೆಂದು ಘೋಷಿಸಬೇಕೆಂದು ಅವರು ಮನವಿ ಮಾಡಿದ್ದಾರೆ.