BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Hyderabad ವಾಶ್ ಮಾಡಲು ಕೊಟ್ಟ ಕಾರನ್ನು ಚಲಾಯಿಸಿದ ಅಪ್ರಾಪ್ತನಿಂದ ಸರಣಿ ಅಪಘಾತ, ಇಬ್ಬರು ಗಂಭೀರ..!


ಹೈದ್ರಾಬಾದ್, ಆಗಸ್ಟ್ 03 : ವಾಶ್ ಮಾಡಲು ಕೊಟ್ಟ ಕಾರನ್ನು  ಅಪ್ರಾಪ್ತ ಬಾಲಕನೋರ್ವ ಚಲಾಯಿಸಿ  ಸರಣಿ ವಾಹನ ಅಪಘಾತಗಳು ಸಂಭವಿಸಿದೆ.  ಘಟನೆಯಲ್ಲಿ ಇಬ್ಬರು ದ್ವಿಚಕ್ರ ಸವಾರರು ಗಂಭಿರ ಗಾಯಗೊಂಡಿದ್ದಾರೆ. ಈ ಘಟನೆ ಹೈದರಾಬಾದ್‌ನ ಬೋರಬಂಡಾ ಪ್ರದೇಶದಲ್ಲಿ ಸಂಭವಿಸಿದೆ.  17 ವರ್ಷದ ಬಾಲಕನೊಬ್ಬ ಮಾರುತಿ ಬಲೆನೊ ಕಾರನ್ನು ಚಲಾಯಿಸಿಕೊಂಡು ಬಂದಿದ್ದು, ನಿಲ್ಲಿಸಿದ್ದ ಏಳು ದ್ವಿಚಕ್ರ ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದು, ನಂತರ ಇಬ್ಬರು ಸಹೋದರರನ್ನು ಕರೆದೊಯ್ಯುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಜ್‌ಕುಮಾರ್ (60) ಮತ್ತು ಪ್ರಭಾಕರ್ (55) ಎಂದು ಗುರುತಿಸಲಾಗಿದೆ. ಘಟನೆಯು ಸ್ಥಳೀಯ ಸಿಸಿ ಟಿವಿಗಳಲ್ಲಿ ದಾಖಲಾಗಿದೆ. ಕಾರಿ ಅಡಿಗೆ ಸಿಲುಕಿದವರನ್ನು ಸ್ಥಳೀಯರು ಧಾವಿಸಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಬ್ಬರೂ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಭಾನುವಾರ ವಾಗಿದ್ದರಿಂದ ಈ ಗಾಯಾಳುಗಳು  ಚರ್ಚ್‌ಗೆ ತೆರಳುತ್ತಿದ್ದರು ಎನ್ನಲಾಗಿದೆ.  ಅಪಘಾತದ ನಂತರ ಅಪ್ರಾಪ್ತ ಬಾಲಕನು ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸ್ಥಳೀಯರು ಅವನನ್ನು ಬೆನ್ನಟ್ಟಿ, ಸ್ವಲ್ಪ ದೂರದಲ್ಲಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ಪ್ರಕಾರ, ಅಪ್ರಾಪ್ತ ವಯಸ್ಕ ಶುಚಿಗೊಳಿಸುವ ಕೆಲಸದ ನಂತರ ವಾಹನದೊಳಗೆ ಕಾರಿನ ಕೀಲಿಗಳನ್ನು ಬಳಸಿ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ. ಮಧುರಾನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!