BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Palakkad ಪಾಲಕ್ಕಾಡ್‌ನಲ್ಲಿ ಜಲಪಾತಕ್ಕೆ ಬಿದ್ದು ತಮಿಳುನಾಡು ಮಹಿಳಾ ಪ್ರವಾಸಿ ಮೃತ್ಯು..!


ಪಾಲಕ್ಕಾಡ್, ಆಗಸ್ಟ್ 03 : ಕಾಲು ಜಾರಿದ ಪರಿಣಾಮ ತಮಿಳುನಾಡಿನ ಕೋಯಮತ್ತೂರಿನ ಪ್ರವಾಸಿ ಮಹಿಳೆಯೊಬ್ಬರು ಪಾಲಕ್ಕಾಡ್‌ನ ಕಿತ್ತನ್‌ಚೇರಿ ಸಮೀಪದ ಪಾಸ್‌ಕುಳಿ ಜಲಪಾತಕ್ಕೆ ಬಿದ್ದು ದಾರುಣ ಅಂತ್ಯ ಕಂಡಿದ್ದಾರೆ. ಮೃತರನ್ನು ಕೊಯಮತ್ತೂರು ನಿವಾಸಿ ಬಾನುಪ್ರಿಯಾ 35 ಎಂದು ಗುರುತಿಸಲಾಗಿದೆ. ಜಲಪಾತಕ್ಕೆ ಭೇಟಿ ನೀಡಿದ್ದ ಐದು ಜನರ ಪ್ರವಾಸಿ ತಂಡದೊಂದಿಗೆ ಅವರು ಬಂದಿದ್ದರು. 

ಮಧ್ಯಾಹ್ನದ ಸುಮಾರಿಗೆ ಜಲಪಾತವನ್ನು ವೀಕ್ಷಿಸುತ್ತಿದ್ದಾಗ ಬಾನುಪ್ರಿಯಾ ಅಕಸ್ಮಿಕ ಕಾಲುಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ.  ಈ ಸಂದರ್ಭ ಅವರ ಜತೆಗಿದ್ದ ಭರತ್ ಎಂಬವರು ಅವರನ್ನು ರಕ್ಷಿಸಲು ನೀರಿನೊಳಗೆ ಇಳಿದರಾದರೂ, ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆ. ಸ್ಥಳೀಯರಾದ ಸೆಬಾಸ್ಟಿಯನ್ ಮತ್ತು ಜೋಜಿ ಅವರು ಹಗ್ಗ ಕಟ್ಟಿ ಕೆಳಕ್ಕಿಳಿದು ಬಂಡೆಯ ಸಂದುಗಳಲ್ಲಿ ಬಿದ್ದಿದ್ದ ಭರತ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಬದಲಾಯಿಸಿದರು. ನಂತರ ಅಗ್ನಿಶಾಮಕ ದಳವು ಸ್ಥಳಕ್ಕಾಗಮಿಸಿ ಐದು ಗಂಟೆಗಳ ಕಾಲ ಶ್ರಮಿಸಿ ಭರತ್ ಅವರನ್ನು ಮೇಲಕ್ಕೆ ಕರೆತಂದಿತು.

 ಕಾಲು ಹಾಗೂ ಬೆನ್ನುಹುರಿಗೆ ಗಂಭೀರ ಗಾಯಗೊಂಡಿರುವ ಭರತ್ ಅವರನ್ನು ಇರಟ್ಟುಕುಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಬಾನುಪ್ರಿಯಾ ಅವರ ಮೃತದೇಹವು ಅವರು ಬಿದ್ದ ಸ್ಥಳದಿಂದ ಸುಮಾರು 500 ಅಡಿ ಕೆಳಭಾಗದಲ್ಲಿ ಜಲಪಾತದ ತಳದಲ್ಲಿ ಪತ್ತೆಯಾಗಿದೆ.

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕಿತ್ತನ್‌ಚೇರಿ ಸಮೀಪದ ಪಾಸ್‌ಕುಳಿ ಜಲಪಾತವು ಕೇರಳ ಮತ್ತು ನೆರೆಯ ತಮಿಳುನಾಡಿನ ಪ್ರವಾಸಿಗರಿಗೆ ಜನಪ್ರಿಯ ವಾರಾಂತ್ಯದ ತಾಣವಾಗಿದೆ. ಆದರೆ, ಮಳೆಗಾಲದಲ್ಲಿ ಜಾರುವ ಬಂಡೆಗಳು ಮತ್ತು ನೀರಿನ ಹರಿವಿನ ಹಠಾತ್ ಹೆಚ್ಚಳದಿಂದಾಗಿ ಈ ಪ್ರದೇಶವು ಅತ್ಯಂತ ಅಪಾಯಕಾರಿಯಾಗುತ್ತದೆ.

ಅಧಿಕಾರಿಗಳು ಎಚ್ಚರಿಕೆ ಫಲಕಗಳನ್ನು ಹಾಕಿದ್ದರೂ ಈ ಸ್ಥಳದಲ್ಲಿ ಅಪಘಾತಗಳು ಸರ್ವೇ ಸಾಮನ್ಯವಾಗಿದೆ. ಮಳೆಗಾಲದಲ್ಲಿ ಈ ಪ್ರದೇಶ ಅತ್ಯಂತ ದುರ್ಗಮವಾಗಿದ್ದು ಎಚ್ಚರಿಕೆ ವಹಿಸುವಂತೆ ಪ್ರವಾಸಿಗರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!