BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

BJP Belthangady ಬೆಳ್ತಂಗಡಿ ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣೆ


ಬೆಳ್ತಂಗಡಿ,ಜುಲೈ 30 : ಬೆಳ್ತಂಗಡಿ ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ಬೆಳ್ತಂಗಡಿ  ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮದಲ್ಲಿ  ಮಂಡಲದ  ಅಧ್ಕಕ್ಷರಾದ  ಶ್ರೀನಿವಾಸ ರಾವ್ ಅಧ್ಯಕ್ಷೀಯ ಭಾಷಣ ಮಾಡುತ್ತಾ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಕಾನೂನು ಪ್ರಕೋಷ್ಠದ  ಸಹಕಾರವನ್ನು ಕೋರಿದರು.  ಜಿಲ್ಲಾ ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀಧರ ಶೆಟ್ಟಿ ಪುಳಿಂಚ  ಪ್ರಸ್ತಾವನೆಯನ್ನು ಮಾಡಿದರು. ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಶೆ ಯವರು ಕಾನೂನು ಪ್ರಕೋಷ್ಠದ ಮುಂದಿನ ಕಾರ್ಯ ಯೋಜನೆಯನ್ನು  ವಿವರಿಸಿದರು. ಜಿಲ್ಲಾ ಸದಸ್ಯರಾದ ಶ್ರೀಧರ ಸುವರ್ಣ ಸಾಂದರ್ಭಿಕವಾಗಿ ಮಾತನಾಡಿದರು. ಮಂಡಲದ  ಸಂಚಾಲಕರಾದ ಶ್ರೀಮತಿ ಸೌಮ್ಯ  ಮಂಡಲದ  ಲೀಗಲ್ ಸೆಲ್ ನ  ಸದಸ್ಯರ ಹೆಸರುಗಳನ್ನು ಘೋಷಿಸಿದರು.  ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಮಂಗಳೂರು ದಕ್ಷಿಣ ಮತ್ತು ಮಂಗಳೂರು ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ

ಮಂಡಲಗಳ ಸದಸ್ಯರಾಗಿ  ಚಿರಾಗ್ ಶೆಟ್ಟಿ, ನಿಶಾಂಕ್ ಬಿ ಎಚ್,  ಸಂದೇಶ್ ಕುಮಾರ, ಅಶೋಕ ಕರಿಯನೆಲ ಮತ್ತು ಜಿತಿನ್ ಜಿಜೋ ರವರನ್ನು ಘೋಷಿಸಲಾಯಿತು. ಮಂಡಲದ  ಸಹ ಸಂಚಾಲಕರಾದ  ಯತೀಶ ಪಣೆಕ್ಕರ್ ಸ್ವಾಗತಿಸಿ ನಂತರ ಧನ್ಯವಾದ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!