Mangaluru ಮಂಗಳೂರು ದಕ್ಷಿಣ ಮತ್ತು ಮಂಗಳೂರು ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ
ಸುದ್ದಿವಾಣಿ
7/25/2026 11:17:00 AM
ಮಂಗಳೂರು,ಜುಲೈ 25 :ಮಂಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳೂರು ದಕ್ಷಿಣ ಮತ್ತು ಮಂಗಳೂರು ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಅಧ್ಕಕ್ಷರಾದ ಸತೀಶ್ ಕುಂಪಲ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉಧ್ಘಾಟಿಸಿ, ಪ್ರಸ್ತುತ ಕಾನೂನು ಪ್ರಕೋಷ್ಠದ ಅವಶ್ಯಕತೆಯನ್ನು ಉದಾಹರಣೆಗಳ ಮೂಲಕ ಸಭೆಗೆ ತಿಳಿಸಿದರು. ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀಧರ ಶೆಟ್ಟಿ ಪುಳಿಂಚ ಪ್ರಸ್ತಾವನೆಯನ್ನು ಮಾಡಿದರು. ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಶೆ ಯವರು ಕಾನೂನು ಪ್ರಕೋಷ್ಠದ ಮುಂದಿನ ಕಾರ್ಯ ಯೋಜನೆಯನ್ನು ವಿವರಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಜಿಲ್ಲಾ ಪ್ರಕೋಷ್ಟಗಳ ಸಹ ಸoಯೋಜಕರಾದ ಪ್ರಸನ್ನ ದರ್ಬೆ ಹಾಗೂ ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನರಾಜ್ ಕೆ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎರಡು ಮಂಡಲಗಳ ಸದಸ್ಯರಾಗಿ ಜಯರಾಮ ಎ, ಪವನಂಜಯ, ರೇಖಾ ಕೆ, ರಾಜಿ ಸಿ ನಾಯರ್ , ಶಿವರಾಜ್ ಸರಿಪಳ್ಳ, ಪ್ರಜ್ವಲ್ ಕುಮಾರ್ ರವರನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಮಿತಿಯ ಸದಸ್ಯರಾದ ಎಂ ಪುರುಷೋತ್ತಮ ಭಟ್, ವೇಣು ಕುಮಾರ್, ಕುಮಾರಿ ಅಕ್ಷತಾ ಮಂಗಳೂರು ಮಂಡಲದ ಸಹ ಸಂಚಾಲಕ ಅಭಿಲಾಶ್ ಶಾಸ್ರಿ ಉಪಸ್ಥಿತರಿದ್ದರು. ಮಂಗಳೂರು ಮಂಡಲದ ಸಂಚಾಲಕರಾದ ಬಾಲಕ್ರಷ್ಣ ಎ ಉಳ್ಳಾಲ ಬೈಲು ಸ್ವಾಗತಿಸಿದರು. ಮಂಗಳೂರು ದಕ್ಷಿಣದ ಸಹ ಸಂಚಾಲಕರಾದ ದಿನೇಶ್ ಎನ್ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ದಕ್ಷಿಣ ಮಂಡಲದ ಸಂಚಾಲಕರಾದ ಚಂದ್ರಹಾಸ ಕೊಟ್ಟಾರಿ ಧನ್ಯವಾದ ಸಲ್ಲಿಸಿದರು.
ಟ್ಯಾಗ್ಗಳು:
ದಕ್ಷಿಣ ಕನ್ನಡ
