BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

MRPL ಸ್ಫೋಟದ ಬೆನ್ನಲ್ಲೇ ಮುನ್ನೆಲೆಗೆ ಬಂದ ನೆಲ್ಲಿದಡಿ ಜುಮಾದಿ ದೈವಸ್ಥಾನದ ನುಡಿ; ತುಳುನಾಡಿನಲ್ಲಿ ವ್ಯಾಪಕ ಚರ್ಚೆ!

ಮಂಗಳೂರು,ಅ.01: ಮಂಗಳೂರು ಎಂಆರ್‌ಪಿಎಲ್ (MRPL) ಘಟಕದಲ್ಲಿ ಬುಧವಾರ ಸಂಭವಿಸಿದ ಭೀಕರ ಸ್ಫೋಟದ ಬೆನ್ನಲ್ಲೇ, ಐತಿಹಾಸಿಕ ನೆಲ್ಲಿದಡಿ ಜುಮಾದಿ ದೈವಸ್ಥಾನಕ್ಕೆ ಸಂಬಂಧಿಸಿದ ದೈವದ ನುಡಿಯೊಂದು ಈಗ ತುಳುನಾಡಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೈವಸ್ಥಾನದ ಜಾಗದ ವಿವಾದ ಹಾಗೂ ಇತ್ತೀಚಿನ ದುರ್ಘಟನೆಯನ್ನು ಸ್ಥಳೀಯರು ಜೋಡಿಸಿ ನೋಡುತ್ತಿದ್ದಾರೆ.


ಹಿನ್ನೆಲೆ ಏನು?

ನೂರಾರು ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾದ ನೆಲ್ಲಿದಡಿ ಜುಮಾದಿ ದೈವಸ್ಥಾನದ ಜಾಗವನ್ನು ಎಂಆರ್‌ಪಿಎಲ್ ಸಂಸ್ಥೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು ಎಂಬ ಆರೋಪವಿತ್ತು. ಈ ಜಾಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮಸ್ಥರು ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರು. ಕೊನೆಗೆ ಬೇರೆ ದಾರಿಯಿಲ್ಲದೆ ಗ್ರಾಮಸ್ಥರು ದೈವದ ಮೊರೆ ಹೋಗಿದ್ದರು.


ದೈವ ನೀಡಿದ್ದ ಅಭಯ ನುಡಿ

2026ರ ಮೇ ತಿಂಗಳಲ್ಲಿ ನಡೆದ ದೈವಾರಾಧನೆಯ ಸಂದರ್ಭದಲ್ಲಿ ದೈವವು ನುಡಿ ನೀಡಿತ್ತು ಎಂದು ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಿದ್ದಾರೆ.

"ನನ್ನ ಮಣ್ಣನ್ನು ಉಳಿಸಿಕೊಳ್ಳಲು ನನಗೆ ಗೊತ್ತಿದೆ. ನೀವು ಯಾರೂ ಭಯಪಡಬೇಡಿ. ಒಂದು ವರ್ಷದಲ್ಲಿ ನಾನು ಏನು ಮಾಡುತ್ತೇನೆ ನೋಡಿ" ಹಾಗೂ "ನೆಲ್ಲಿದಡಿ ಜಾಗವನ್ನು ಉಳಿಸಿಕೊಡುತ್ತೇನೆ. ನನ್ನ ಜಾಗವನ್ನು ನಾನೇ ಉಳಿಸಿಕೊಳ್ಳುತ್ತೇನೆ" ಎಂದು ದೈವವು ವರ್ಷಾವಧಿ ನೇಮೋತ್ಸವದ ಸಂದರ್ಭದಲ್ಲಿ ಅಭಯ ನೀಡಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸದ್ಯ ಎಂಆರ್‌ಪಿಎಲ್ ಘಟಕದಲ್ಲಿ ಸ್ಫೋಟ ಸಂಭವಿಸಿದ ಬಳಿಕ, ವರ್ಷದ ಹಿಂದೆ ದೈವ ನುಡಿದಿದ್ದ ಮಾತುಗಳನ್ನು ದೈವಾರಾಧಕರು ಹಾಗೂ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ  ಸ್ಥಳೀಯ ಮಟ್ಟದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದೈವದ ಆ ನುಡಿಗೂ ಮತ್ತು ಇತ್ತೀಚಿನ ಎಂಆರ್‌ಪಿಎಲ್ ಸ್ಫೋಟಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಚರ್ಚೆಗಳು ಈಗ ತುಳುನಾಡಿನಾದ್ಯಂತ ಜೋರಾಗಿ ಕೇಳಿಬರುತ್ತಿವೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!