BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಮಹಾತ್ಮರ ಚಿಂತನೆ ಜೀವನದಲ್ಲಿ ಅಳವಡಿಸೋಣ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಕರೆ

ಮಂಗಳೂರು,ಅ.02: ಮಹಾತ್ಮ ಗಾಂಧಿ ಹಾಗೂ ಶಾಸ್ತ್ರೀಜಿಯವರ ಜೀವನಶೈಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವರ ಸರಳ ಜೀವನ ಹಾಗೂ ಉನ್ನತ ಚಿಂತನೆಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.    

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಸರಳ ಜೀವನದ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಮಹಾತ್ಮ ಗಾಂಧಿ ಅವರು ದೇಶವನ್ನು ಬ್ರಿಟಿಷ್ ದಾಸ್ಯದಿಂದ ಮುಕ್ತಗೊಳಿಸುವುದರ ಜೊತೆಗೆ ಬಡತನ, ಅಸ್ಪೃಶ್ಯತೆ ವಿರುದ್ಧ  ಹೋರಾಡಿದವರು. ಲಾಲ್ ಬಹಾದ್ದೂರ್ ಶಾಸ್ತ್ರಿ ದೇಶಕಂಡ ಪ್ರಾಮಾಣಿಕ ಪ್ರಧಾನಿಯಾಗಿದ್ದರು. ಅವರ ವ್ಯಕ್ತಿತ್ವ, ಸರಳತೆ ಎಲ್ಲರಿಗೂ ಆದರ್ಶ ಎಂದು ಸ್ಮರಿಸಿದರು.

ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್.ಆರ್ ಪೂಜಾರಿ ಮಾತನಾಡಿ, ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವಚ್ಛತೆಯ ಸಂಕಲ್ಪ ಹಾಗೂ ಶಾಸ್ತ್ರಿಯವರ ಪ್ರಾಮಾಣಿಕತೆ, ಸರಳತೆ ಮತ್ತು ಕರ್ತವ್ಯ ನಿಷ್ಠೆಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಾವು ಅವರಿಗೆ ನೀಡುವ ನಿಜವಾದ ಗೌರವ. ಅಧಿಕಾರಕ್ಕಿಂತ ಕರ್ತವ್ಯ ದೊಡ್ಡದು ಎಂಬುದನ್ನು ಬದುಕಿ ತೋರಿಸಿದ ಶಾಸ್ತ್ರೀಜಿಯವರ ತತ್ವಗಳು ಇಂದಿನ ಯುವ ಪೀಳಿಗೆಗೆ ದಾರಿದೀಪ ಎಂದರು. 


ಕಾರ್ಯಕ್ರಮದಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ರಾಜ್ಯಸಭಾ ಮಾಜಿ ಸದಸ್ಯ ಬಿ.ಇಬ್ರಾಹೀಂ, ನಿಗಮ ಮಂಡಳಿ ಅಧ್ಯಕ್ಷರಾದ ಶಾಲೆಟ್ ಪಿಂಟೋ, ಶಹೀದ್ ತೆಕ್ಕಿಲ್, ವಿಶ್ವಾಸ್‌ಕುಮಾರ್ ದಾಸ್, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮುಡಾ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್, ಮ.ನ.ಪಾ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ ಕೋಟ್ಯಾನ್, ಅಬ್ದುಲ್ ಜೆ.ಸಲೀಂ, ಮೋಹನ್ ಕೋಟ್ಯಾನ್,  ಮುಖಂಡರಾದ ಅಬ್ದುಲ್ ರವೂಫ್, ಕೆ.ಪಿ. ಥೋಮಸ್, ಬಶೀರ್ ಬೈಕಂಪಾಡಿ, ಜಯಶೀಲ ಅಡ್ಯಂತಾಯ, ವಸಂತ್ ಬೆರ್ನಾಡ್,  ನೀರಜ್ ಚಂದ್ರಪಾಲ್, ಶುಭೋದಯ ಆಳ್ವ, ವಿಕಾಶ್ ಶೆಟ್ಟಿ, ಟಿ.ಕೆ. ಸುಧೀರ್, ಸತೀಶ್ ಕುಮಾರ್ ಕೆಡಿಂಜೆ, ನವೀನ್ ಡಿಸೋಜಾ, ಸಂಶುದ್ದೀನ್ ಕುದ್ರೋಳಿ, ಯೋಗೀಶ್ ಕುಮಾರ್, ಇಬ್ರಾಹೀಂ ನವಾಝ್, ಎಸ್.ಅಪ್ಪಿ, ಜೋಕಿಂ ಡಿಸೋಜಾ, ಸುಹಾನ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು..


ದೈನಂದಿನ ಸುದ್ದಿಗಾಗಿ  ಲಿಂಕ್ ಕ್ಲಿಕ್ ಮಾಡಿ ಗ್ರೂಪ್ ಜಾಯಿನ್ ಆಗಿ..

https://chat.whatsapp.com/J5GjMrDnaLNAuyGxzPdyNe


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!