BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Kalaburgi ಕಲಬುರಗಿ: ಅಕ್ರಮ ಪಡಿತರ ಅಕ್ಕಿ ವಾಹನ ಬಿಡಲು ಲಂಚ: ಆಳಂದ ಪಿಐ ಸೇರಿ ನಾಲ್ವರು ಪೊಲೀಸರು ಅಮಾನತು


ಕಲಬುರಗಿ,ಅ.02: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ ಬಳಿಕ ಪ್ರಕರಣ ದಾಖಲಿಸದೆ ಹಣ ಪಡೆದು ಬಿಟ್ಟು ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಆಳಂದ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶರಣಬಸಪ್ಪ ಕೊಡ್ಲಾ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಪಿಐ ಶರಣಬಸಪ್ಪ ಕೊಡ್ಲಾ ಹಾಗೂ ಪೊಲೀಸ್ ಪೇದೆಗಳಾದ ಹಣಮಂತ, ಮಲ್ಲಿಕಾರ್ಜುನ ಮತ್ತು ಸಾಯಬಣ್ಣ ಅಮಾನತುಗೊಂಡ ಸಿಬ್ಬಂದಿ.

₹1 ಲಕ್ಷಕ್ಕೆ ‘ಡೀಲ್’ ನಡೆಸಿದ್ದ ಆರೋಪ:

ಗೃಹ ಸಚಿವರ ತವರೂರಿನಲ್ಲೇ ಈ ಕೃತ್ ನಡೆದಿದೆ. ಕಳೆದ ಸೋಮವಾರ ಮಧ್ಯರಾತ್ರಿ 112 ಸಹಾಯವಾಣಿಗೆ ಬಂದ ಮಾಹಿತಿಯನ್ನಾಧರಿಸಿ ಆಳಂದ ಪೊಲೀಸರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ್ದರು ಎನ್ನಲಾಗಿದೆ. ಆದರೆ, ವಾಹನವನ್ನು ಠಾಣೆಗೆ ತಂದ ಬಳಿಕ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಬದಲು, ಸುಮಾರು ₹1 ಲಕ್ಷಕ್ಕೆ 'ಡೀಲ್' ನಡೆಸಿ ವಾಹನವನ್ನು ಬಿಡುಗಡೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಈ ಕುರಿತು ಮಾಧ್ಯಮಗಳಲ್ಲಿ ನಿರಂತರ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಬಳಿಕ ನಡೆಸಿದ ಇಲಾಖಾ ತನಿಖೆಯಲ್ಲಿ ಕರ್ತವ್ಯ ಲೋಪ ಹಾಗೂ ನಿಯಮಬಾಹಿರ ನಡೆ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಪಿಐ ಸೇರಿದಂತೆ ನಾಲ್ವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅಮಾನತುಗೊಳಿಸಿ ಆದೇಶಿಸಲಾಗಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!