ಹುಬ್ಬಳ್ಳಿ, ಅ.02 : ನೈಋತ್ಯ ರೈಲ್ವೆ (SWR) ಸೆಪ್ಟೆಂಬರ್ 2026ರಲ್ಲಿ 4.41 ದಶಲಕ್ಷ ಟನ್‌ಗಳ ಸರಕು ಸಾಗಣೆ (ಲೋಡಿಂಗ್) ದಾಖಲಿಸಿದ್ದು, ಸೆಪ್ಟೆಂಬರ್ 2025ರಲ್ಲಿ ದಾಖಲಾದ 4.17 ದಶಲಕ್ಷ ಟನ್‌ಗಳಿಗೆ ಹೋಲಿಸಿದರೆ ಶೇ. 5.9ರಷ್ಟು ಬೆಳವಣಿಗೆ ಸಾಧಿಸಿದೆ. ಸರಕು ಸಾಗಣೆಯಲ್ಲಿ ಕಬ್ಬಿಣದ ಅದಿರು 1.70 ದಶಲಕ್ಷ ಟನ್‌ಗಳೊಂದಿಗೆ (ಶೇ. 4.0ರ ಬೆಳವಣಿಗೆ) ಅಗ್ರಸ್ಥಾನದಲ್ಲಿದೆ. ನಂತರ ಪಿಗ್ ಐರನ್ ಮತ್ತು ಸಿದ್ಧಪಡಿಸಿದ ಉಕ್ಕು 1.127 ದಶಲಕ್ಷ ಟನ್‌ಗಳು (ಶೇ. 24.4), ಕಲ್ಲಿದ್ದಲು 0.90 ದಶಲಕ್ಷ ಟನ್‌ಗಳು (ಶೇ. 20.8), ಖನಿಜ ತೈಲ 0.217 ದಶಲಕ್ಷ ಟನ್‌ಗಳು (ಶೇ. 79.3), ಇತರ ಸರಕುಗಳು 0.167 ದಶಲಕ್ಷ ಟನ್‌ಗಳು, ಕಂಟೈನರ್ ಸಾಗಣೆ 0.105 ದಶಲಕ್ಷ ಟನ್‌ಗಳು (ಶೇ. 31.3), ಸಿಮೆಂಟ್ 0.037 ದಶಲಕ್ಷ ಟನ್‌ಗಳು (ಶೇ. 23.3) ಮತ್ತು ಆಹಾರ ಧಾನ್ಯಗಳು 0.007 ದಶಲಕ್ಷ ಟನ್‌ಗಳಷ್ಟು ಲೋಡಿಂಗ್ ದಾಖಲಿಸಿವೆ.
ಏಪ್ರಿಲ್–ಸೆಪ್ಟೆಂಬರ್ 2026ರ ಅವಧಿಯಲ್ಲಿ ನೈಋತ್ಯ ರೈಲ್ವೆಯ ಒಟ್ಟು ಸರಕು ಸಾಗಣೆ 26.1 ದಶಲಕ್ಷ ಟನ್‌ಗಳಿಗೆ ತಲುಪಿದ್ದು, 2025ರ ಇದೇ ಅವಧಿಗೆ ಹೋಲಿಸಿದರೆ ಶೇ. 5.8ರಷ್ಟು ಬೆಳವಣಿಗೆ ದಾಖಲಿಸಿದೆ. ಈ ಅವಧಿಯಲ್ಲಿ ಕಬ್ಬಿಣದ ಅದಿರು 10.17 ದಶಲಕ್ಷ ಟನ್‌ಗಳೊಂದಿಗೆ (ಶೇ. 4.7) ಅಗ್ರಸ್ಥಾನದಲ್ಲಿದ್ದು, ಪಿಗ್ ಐರನ್ ಮತ್ತು ಸಿದ್ಧಪಡಿಸಿದ ಉಕ್ಕು 5.95 ದಶಲಕ್ಷ ಟನ್‌ಗಳು (ಶೇ. 10.5), ಕಲ್ಲಿದ್ದಲು 5.36 ದಶಲಕ್ಷ ಟನ್‌ಗಳು (ಶೇ. 11.4), ಇತರ ಸರಕುಗಳು 1.25 ದಶಲಕ್ಷ ಟನ್‌ಗಳು (ಶೇ. 20.0), ಖನಿಜ ತೈಲ 1.24 ದಶಲಕ್ಷ ಟನ್‌ಗಳು (ಶೇ. 15.9), ಕಂಟೈನರ್ ಸಾಗಣೆ 0.55 ದಶಲಕ್ಷ ಟನ್‌ಗಳು (ಶೇ. 13.4), ಸಿಮೆಂಟ್ 0.22 ದಶಲಕ್ಷ ಟನ್‌ಗಳು (ಶೇ. 18.2) ಮತ್ತು ಆಹಾರ ಧಾನ್ಯಗಳು 0.09 ದಶಲಕ್ಷ ಟನ್‌ಗಳು (ಶೇ. 89.4) ದಾಖಲಾಗಿವೆ.
ಆದಾಯದ ವಿಷಯದಲ್ಲಿ, ನೈಋತ್ಯ ರೈಲ್ವೆಯು ಸೆಪ್ಟೆಂಬರ್ 2026ರಲ್ಲಿ ₹870 ಕೋಟಿ ಒಟ್ಟು ಆದಾಯ ಗಳಿಸಿದ್ದು, ಸೆಪ್ಟೆಂಬರ್ 2025ಕ್ಕೆ ಹೋಲಿಸಿದರೆ ₹119 ಕೋಟಿ ಅಥವಾ ಶೇ. 15.91ರಷ್ಟು ಹೆಚ್ಚಳ ದಾಖಲಿಸಿದೆ. ಪ್ರಯಾಣಿಕರ ಆದಾಯವು ₹357.5 ಕೋಟಿಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹75.70 ಕೋಟಿ ಅಥವಾ ಶೇ. 26.87ರಷ್ಟು ಬೆಳವಣಿಗೆ ಸಾಧಿಸಿದೆ. ಪ್ರಯಾಣಿಕರ ಆದಾಯವು ಮಾಸಿಕ ಗುರಿಗಿಂತ ₹36.96 ಕೋಟಿ (ಶೇ. 11.53) ಅಧಿಕವಾಗಿದೆ. ಸೆಪ್ಟೆಂಬರ್ 2026ರಲ್ಲಿ ಒಟ್ಟು 1.5 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 6.83ರಷ್ಟು ಬೆಳವಣಿಗೆ ದಾಖಲಾಗಿದೆ.
ಸೆಪ್ಟೆಂಬರ್ 2026ರಲ್ಲಿ ಸರಕು ಸಾಗಣೆ ಆದಾಯವು ₹465 ಕೋಟಿಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹37.28 ಕೋಟಿ ಅಥವಾ ಶೇ. 8.72ರಷ್ಟು ಹೆಚ್ಚಳವಾಗಿದೆ. ಇತರೆ ಕೋಚಿಂಗ್ ಆದಾಯ ₹28.81 ಕೋಟಿಯಾಗಿದ್ದು, ₹2.74 ಕೋಟಿ ಅಥವಾ ಶೇ. 10.51ರಷ್ಟು ಬೆಳವಣಿಗೆ ದಾಖಲಿಸಿದೆ. ಇತರೆ ಆದಾಯ (Sundry Revenue) ₹18.87 ಕೋಟಿಯಾಗಿದ್ದು, ₹3.67 ಕೋಟಿ ಅಥವಾ ಶೇ. 24.14ರಷ್ಟು ಹೆಚ್ಚಳವಾಗಿದೆ. ಪಾರ್ಸೆಲ್ ಆದಾಯ ₹15.89 ಕೋಟಿಗೆ ತಲುಪಿದ್ದು, ಸೆಪ್ಟೆಂಬರ್ 2025ಕ್ಕೆ ಹೋಲಿಸಿದರೆ ₹1.49 ಕೋಟಿ ಅಥವಾ ಶೇ. 10.35ರಷ್ಟು ಬೆಳವಣಿಗೆ ದಾಖಲಿಸಿದೆ.
ಸೆಪ್ಟೆಂಬರ್ 2026ರವರೆಗಿನ ಅವಧಿಯಲ್ಲಿ, ನೈಋತ್ಯ ರೈಲ್ವೆಯ ಒಟ್ಟು ಆದಾಯವು ₹4,730 ಕೋಟಿಗಳಿಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹221.32 ಕೋಟಿ ಅಥವಾ ಶೇ. 4.91ರಷ್ಟು ಹೆಚ್ಚಳವಾಗಿದೆ. ಪ್ರಯಾಣಿಕರ ಆದಾಯವು ₹1,904.10 ಕೋಟಿಗೆ ಏರಿಕೆಯಾಗಿದ್ದು, ₹254.48 ಕೋಟಿ ಅಥವಾ ಶೇ. 15.43ರಷ್ಟು ಬೆಳವಣಿಗೆ ದಾಖಲಿಸಿದೆ. ಇದೇ ಅವಧಿಯಲ್ಲಿ ಒಟ್ಟು 9.2 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಹಿಂದಿನ ವರ್ಷಕ್ಕೆ
ಹೋಲಿಸಿದರೆ ಶೇ. 4.78ರಷ್ಟು ಹೆಚ್ಚಳವಾಗಿದೆ. ಸರಕು ಸಾಗಣೆ ಆದಾಯವು ₹2,546 ಕೋಟಿಗಳಿಗೆ ತಲುಪಿದೆ. ಪಾರ್ಸೆಲ್ ಆದಾಯವು ₹89.50 ಕೋಟಿಯಾಗಿದ್ದು, ₹4.57 ಕೋಟಿ ಅಥವಾ ಶೇ. 5.38ರಷ್ಟು ಬೆಳವಣಿಗೆ ದಾಖಲಿಸಿದೆ. ಟಿಕೆಟ್ ತಪಾಸಣೆಯಿಂದ ಬಂದ ಆದಾಯವು ₹33.71 ಕೋಟಿಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹0.84 ಕೋಟಿ ಅಥವಾ ಶೇ. 2.56ರಷ್ಟು ಹೆಚ್ಚಳವಾಗಿದೆ.
ಒಟ್ಟಾರೆ, ನೈಋತ್ಯ ರೈಲ್ವೆಯು ಸರಕು ಸಾಗಣೆ, ಪ್ರಯಾಣಿಕರ ಸಂಚಾರ ಮತ್ತು ಆದಾಯ ಗಳಿಕೆಯಲ್ಲಿ ನಿರಂತರ ಬೆಳವಣಿಗೆಯನ್ನು ದಾಖಲಿಸಿದೆ. ಸೆಪ್ಟೆಂಬರ್ 2026ರಲ್ಲಿ ಹಾಗೂ ಏಪ್ರಿಲ್–ಸೆಪ್ಟೆಂಬರ್ 2026ರ ಅವಧಿಯಲ್ಲಿ ಪ್ರಮುಖ ಸರಕು ಸಾಗಣೆ ವಿಭಾಗಗಳು ಮತ್ತು ವಿವಿಧ ಆದಾಯ ಮೂಲಗಳು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ.
ಮಹಾಪ್ರಬಂಧಕರು ಶ್ರೀ ಪಿ. ಅನಂತ್ ಸರಕು ಸಾಗಣೆ ಮತ್ತು ಆದಾಯ ಗಳಿಕೆಯಲ್ಲಿ ಸಾಧಿಸಿದ ಶ್ಲಾಘನೀಯ ಪ್ರಗತಿಗಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪ್ರಯತ್ನಗಳನ್ನು ಅಭಿನಂದಿಸಿದರು.
HighLights
ನೈಋತ್ಯ ರೈಲ್ವೆಯು ಸೆಪ್ಟೆಂಬರ್ 2026ರಲ್ಲಿ 4.41 ದಶಲಕ್ಷ ಟನ್ ಸರಕು ಸಾಗಣೆ ಮತ್ತು ₹870 ಕೋಟಿ ಆದಾಯವನ್ನು ದಾಖಲಿಸಿದೆ; ಒಟ್ಟು ಸರಕು ಸಾಗಣೆಯು 26.1 ದಶಲಕ್ಷ ಟನ್‌ಗೆ ಹಾಗೂ ಆದಾಯವು ₹4,730 ಕೋಟಿಗೆ ತಲುಪಿದೆ.
• ನೈಋತ್ಯ ರೈಲ್ವೆಯು ಸೆಪ್ಟೆಂಬರ್ 2026ರಲ್ಲಿ 4.41 ದಶಲಕ್ಷ ಟನ್‌ಗಳ ಸಾರ್ವಕಾಲಿಕ ಗರಿಷ್ಠ ಸರಕು ಸಾಗಣೆಯನ್ನು ದಾಖಲಿಸಿದ್ದು. ಇದರೊಂದಿಗೆ, ಏಪ್ರಿಲ್–ಸೆಪ್ಟೆಂಬರ್ 2026ರ ಅವಧಿಯ ಒಟ್ಟು ಸರಕು ಸಾಗಣೆ ಪ್ರಮಾಣವು 26.1 ದಶಲಕ್ಷ ಟನ್‌ಗಳಿಗೆ ತಲುಪಿದೆ .
• ಸೆಪ್ಟೆಂಬರ್ 2026ರಲ್ಲಿ ಸರಕು ಸಾಗಣೆಯಿಂದ ₹465 ಕೋಟಿ ಆದಾಯ ಗಳಿಸಲಾಗಿದ್ದು, ಏಪ್ರಿಲ್–ಸೆಪ್ಟೆಂಬರ್ 2026ರ ಅವಧಿಯಲ್ಲಿ ಒಟ್ಟು ಸರಕು ಸಾಗಣೆ ಆದಾಯವು ₹2,546 ಕೋಟಿಗಳಿಗೆ ತಲುಪಿದೆ.
• ಸೆಪ್ಟೆಂಬರ್ 2026ರಲ್ಲಿ ಪ್ರಯಾಣಿಕರ ಆದಾಯವು ₹357.5 ಕೋಟಿಗಳಾಗಿದ್ದು, ಈ ಅವಧಿಯಲ್ಲಿ 1.5 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಏಪ್ರಿಲ್–ಸೆಪ್ಟೆಂಬರ್ 2026ರ ಅವಧಿಯಲ್ಲಿ ಪ್ರಯಾಣಿಕರ ಆದಾಯವು ₹1,904 ಕೋಟಿಗಳಿಗೆ ತಲುಪಿದ್ದು, ಒಟ್ಟು 9.2 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
• ನೈಋತ್ಯ ರೈಲ್ವೆಯು ಸೆಪ್ಟೆಂಬರ್ 2026ರಲ್ಲಿ ಒಟ್ಟು ₹870 ಕೋಟಿ ಆದಾಯ ಗಳಿಸಿದ್ದು, ಏಪ್ರಿಲ್–ಸೆಪ್ಟೆಂಬರ್ 2026ರ ಅವಧಿಯಲ್ಲಿ ಒಟ್ಟು ಆದಾಯವು ₹4,730 ಕೋಟಿಗಳಿಗೆ ತಲುಪಿದೆ.
