BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

World Record ದೆಹಲಿಯಿಂದ ಬೆಂಗಳೂರಿಗೆ ನಿರಂತರ ಕಾರು ಪ್ರಯಾಣ - ವಿಶ್ವದಾಖಲೆ ಬರೆದ ಕೇಶವ ಪ್ರಸಾದ್ ಮುಳಿಯ ಮತ್ತು ಡಾ. ಅನಿಲ್ ಬೈಪಾಡಿತ್ತಾಯ



ಪುತ್ತೂರು, ಸೆಪ್ಟೆಂಬರ್ 09:ದೆಹಲಿಯಿಂದ ಬೆಂಗಳೂರಿಗೆ ಲ್ಯಾಂಡ್ ರೋವರ್ ಡಿಫೆಂಡರ್ ಕಾರಿನಲ್ಲಿ ನಿರಂತರವಾಗಿ ಸುಮಾರು 2,075 ಕಿ.ಮೀ. ದೂರವನ್ನು ಕ್ರಮಿಸುವ ಮೂಲಕ, ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಕೇಶವ ಪ್ರಸಾದ್ ಮುಳಿಯ ಮತ್ತು ಡಾ. ಅನಿಲ್ ಎಸ್. ಬೈಪಾಡಿತ್ತಾಯ ಅವರು “ಒಂದೇ ದೇಶದಲ್ಲಿ ಕಾರಿನ ಮೂಲಕ ಅತಿ ದೀರ್ಘ ನಿರಂತರ ಪ್ರಯಾಣ” ವಿಭಾಗದಲ್ಲಿ ಜಂಟಿಯಾಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಪ್ರಯಾಣದ ಆರಂಭ ಹಾಗೂ ಅಂತ್ಯ: ಸೆಪ್ಟೆಂಬರ್ 7ರಂದು ಬೆಳಿಗ್ಗೆ 5:50ಕ್ಕೆ ದೆಹಲಿಯ ಇಂಡಿಯಾ ಗೇಟ್‌ನಿಂದ ಆರಂಭವಾದ ಈ ಸಾಹಸಯಾನವು, ಸೆಪ್ಟೆಂಬರ್ 8ರಂದು ಬೆಳಿಗ್ಗೆ 10:51ಕ್ಕೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಸಮಯ ಮತ್ತು ದಾಖಲೆ: ಕೇವಲ 29 ಗಂಟೆ 01 ನಿಮಿಷಗಳಲ್ಲಿ ಇಬ್ಬರೂ ಸುರಕ್ಷಿತವಾಗಿ ಈ ಸುಮಾರು 2,075 ಕಿ.ಮೀ ದೂರವನ್ನು ಕ್ರಮಿಸಿದ್ದಾರೆ. ವಿಶೇಷವೆಂದರೆ, ದೆಹಲಿಯಿಂದ ಬೆಂಗಳೂರಿಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲು ತಲುಪಲು ಸುಮಾರು 36 ಗಂಟೆಗಳು ಬೇಕಾಗುತ್ತವೆ!

ವಿಶ್ವದಾಖಲೆಯ ಮಾನ್ಯತೆ: ಈ ಐತಿಹಾಸಿಕ ಸಾಧನೆಯನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಅಧಿಕೃತವಾಗಿ ಪ್ರಮಾಣೀಕರಿಸಿದ್ದು, ಸಂಸ್ಥೆಯ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವಿಷ್ಣೋಯಿ ಅವರು ಈ ವಿಶ್ವದಾಖಲೆಯನ್ನು ದೃಢಪಡಿಸಿದ್ದಾರೆ.

“ಕಾರು ಚಾಲನೆ ನನ್ನ ಬಹುಕಾಲದ ಆಸಕ್ತಿ. ಪ್ರಯಾಣದುದ್ದಕ್ಕೂ ಏಕಾಗ್ರತೆ, ಸಹನೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದೆವು. ಈ ವಿಶ್ವದಾಖಲೆ ನಮ್ಮ ತಂಡದ ಸಹಕಾರದ ಫಲ” ಎಂದು ಕೇಶವ ಪ್ರಸಾದ್ ಮುಳಿಯ ಹರ್ಷ ವ್ಯಕ್ತಪಡಿಸಿದ್ದಾರೆ.

 “ಈ ಸವಾಲಿನ ಪ್ರಯಾಣದಲ್ಲಿ ಶಿಸ್ತು, ಸಮನ್ವಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಈ ಸಾಧನೆ ನಮ್ಮಿಬ್ಬರಿಗೂ ಸದಾ ಸ್ಮರಣೀಯ” ಡಾ. ಅನಿಲ್ ಎಸ್. ಬೈಪಾಡಿತ್ತಾಯ ಎಂದಿದ್ದಾರೆ.

ಈ ಸಾಹಸವು ಕನ್ನಡಿಗರಿಗೆ ಮತ್ತು ಮುಳಿಯ ಗೋಲ್ಡ್ & ಡೈಮಂಡ್ಸ್ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!