BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

WIM ಸೌಜನ್ಯ ಪ್ರಕರಣದ ಮರುತನಿಖೆಯ ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ: ವಿಮೆನ್ ಇಂಡಿಯಾ ಮೂವ್ಮೆಂಟ್


ಮಂಗಳೂರು,ಸೆಪ್ಟೆಂಬರ್ 22:  ಧರ್ಮಸ್ಥಳದ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶಿಸಿರುವುದು ನ್ಯಾಯಕ್ಕಾಗಿ ಹೋರಾಡುತ್ತಿರುವ ಸೌಜನ್ಯಾಳ ಕುಟುಂಬದವರಿಗೆ ಹಾಗೂ ನ್ಯಾಯಪ್ರಿಯರಿಗೆ ದೊರೆತ ದೊಡ್ಡ ಜಯವಾಗಿದೆ.ಸುಪ್ರೀಂ ಕೋರ್ಟ್ ನ ಈ ಐತಿಹಾಸಿಕ ಆದೇಶವನ್ನು  ವಿಮೆನ್ ಇಂಡಿಯಾ ಮೂವ್ಮೆಂಟ್ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ವಿಮ್ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಶಿನಿರ ಬಂಟ್ವಾಳ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣವನ್ನು ಈ ಹಿಂದೆ ಸಿಬಿಐ, ಸಿಐಡಿ , ಸಿಟ್ ಹಾಗೂ ಸ್ಥಳೀಯ ಪೊಲೀಸ್ ತನಿಖೆಗಳು ಸೇರಿದಂತೆ ವಿವಿಧ ಹಂತಗಳಲ್ಲಿ ತನಿಖೆಗಳು ನಡೆದಿದ್ದರೂ, ದುರಾದೃಷ್ಟವಶಾತ್ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳನ್ನೆಲ್ಲಾ ವ್ಯವಸ್ಥಿತವಾಗಿ ನಾಶಪಡಿಸಲಾಗಿದೆ. ಈಗ ರಚನೆಯಾಗಲಿರುವ ಹೊಸ ತನಿಖಾ ತಂಡವು ಕೇವಲ ಮೇಲ್ಮೈ ತನಿಖೆಗೆ ಸೀಮಿತವಾಗದೆ, ಈ ಹಿಂದೆ ಸಾಕ್ಷ್ಯಗಳನ್ನು ನಾಶ ಮಾಡಿದವರ ಬೆನ್ನತ್ತಬೇಕು.

ಸಾಕ್ಷ್ಯ ನಾಶ ಮಾಡಿದವರು ಯಾರನ್ನು ರಕ್ಷಿಸಲು ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ಹೊಸ ತನಿಖಾ ತಂಡವು ಕೂಲಂಕಷವಾಗಿ ಪತ್ತೆಹಚ್ಚಬೇಕು. ಸಾಕ್ಷ್ಯ ನಾಶಪಡಿಸಿದವರನ್ನು ಹಾಗೂ ಆ ಮೂಲಕ ಅಪ್ರತ್ಯಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಲಾಭ ಪಡೆದ ಪ್ರಭಾವಿ ಆರೋಪಿಗಳನ್ನು ಪತ್ತೆಹಚ್ಚಿ, ಅವರನ್ನೇ ಈ ಪ್ರಕರಣದ ಪ್ರಮುಖ ಆರೋಪಿಗಳನ್ನಾಗಿ ಮಾಡಿ ತಕ್ಷಣವೇ ಬಂಧಿಸಬೇಕೆಂದು ನಾವು ಬಲವಾಗಿ ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

ಕಳೆದ ಹಲವು ವರ್ಷಗಳಿಂದ ಈ ಅನ್ಯಾಯದ ವಿರುದ್ಧ ಹೋರಾಟ ನಡೆಸಿದ ಸೌಜನ್ಯಾಳ ತಾಯಿ, ಕುಟುಂಬ ವರ್ಗ ಹಾಗೂ ಸಮಸ್ತ ನ್ಯಾಯಪರ ಸಂಘಟನೆಗಳ ನಿರಂತರ ಹೋರಾಟಕ್ಕೆ ನಿಜವಾದ ನ್ಯಾಯ ಸಿಗಬೇಕಾದರೆ ಸಾಕ್ಷ್ಯ ನಾಶದ ಹಿಂದಿರುವ ಕಾಣದ ಕೈಗಳು ಕಾನೂನಿನ ಕಟಕಟೆಗೆ ಬರಲೇಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಸತ್ಯವನ್ನು ಹೊರತಂದು, ಸೌಜನ್ಯಾಳ ಆತ್ಮಕ್ಕೆ ಶಾಂತಿ ಹಾಗೂ ಅವಳ ಕುಟುಂಬಕ್ಕೆ ಸಂಪೂರ್ಣ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸುತ್ತೇವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!