BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Virat Kohli Anushka Sharma ಸಾಲದ ಸುಳಿಗೆ ಸಿಕ್ಕಿ ಮುಚ್ಚುವ ಹಂತದಲ್ಲಿದ್ದ ರೆಸ್ಟೋರೆಂಟ್‌ಗೆ ಮರುಜೀವ ನೀಡಿದ ಕೊಹ್ಲಿ- ಅನುಷ್ಕಾರ ಆ ಭೇಟಿ..!


ಮುಂಬೈ, ಸೆ 28 :  ಮುಂಬೈನ ಚೆಂಬೂರಿನಲ್ಲಿರುವ ಕೇವಲ 9 ಆಸನಗಳ ಸಣ್ಣ ರೆಸ್ಟೋರೆಂಟ್ ಆಗಿದ್ದ 'ದೆಹಲಿ ಸೆ', ಸುಮಾರು 18 ಲಕ್ಷ ರೂಪಾಯಿ ಸಾಲದ ಸುಳಿಗೆ ಸಿಲುಕಿ ಮುಚ್ಚುವ ಹಂತ ತಲುಪಿತ್ತು. ಜಸ್ಪಾಲ್ ಸಿಂಗ್ ಖಾಲ್ಸಾ ಮತ್ತು ಮಹೀಂದರ್ ಸಿಂಗ್ ಖಾಲ್ಸಾ ಸಹೋದರರು 2021ರ ಅಕ್ಟೋಬರ್‌ನಲ್ಲಿ ಆರಂಭಿಸಿದ್ದ ಈ ಹೋಟೆಲ್‌ನಲ್ಲಿ ವ್ಯಾಪಾರ ಕುಸಿದು 2022ರ ಸೆಪ್ಟೆಂಬರ್ ವೇಳೆಗೆ ದೊಡ್ಡ ಆರ್ಥಿಕ ಹೊರೆ ಎದುರಾಗಿತ್ತು.

ಆದರೆ, 2022ರ ಸೆಪ್ಟೆಂಬರ್‌ನಲ್ಲಿ ಕಾಮಿಡಿಯನ್ ಅಭಿಷೇಕ್ ಉಪಮನ್ಯು ಅವರು ಇಲ್ಲಿಗೆ ಭೇಟಿ ನೀಡಿ ಚೋಲೆ ಭಟೂರೆ ಸವಿದು ಇನ್‌ಸ್ಟಾಗ್ರಾಂನಲ್ಲಿ ಶಿಫಾರಸು ಮಾಡಿದ ನಂತರ ರೆಸ್ಟೋರೆಂಟ್‌ನ ಅದೃಷ್ಟವೇ ಬದಲಾಯಿತು. ಇದರ ಬೆನ್ನಲ್ಲೇ ನಟಿ ಅನುಷ್ಕಾ ಶರ್ಮಾ ಅವರೂ ಕೂಡ ಜುಹುವಿನ ತಮ್ಮ ಮನೆಗೆ ಎರಡು ಪ್ಲೇಟ್ ಚೋಲೆ ಭಟೂರೆ ಆರ್ಡರ್ ಮಾಡಿದರು. ಅನುಷ್ಕಾ ಶರ್ಮಾ ಅವರು ಇನ್‌ಸ್ಟಾಗ್ರಾಂನಲ್ಲಿ ಇದನ್ನು ಹಂಚಿಕೊಂಡು ಅಭಿಷೇಕ್ ಉಪಮನ್ಯು ಅವರಿಗೆ ಕ್ರೆಡಿಟ್ ನೀಡಿದ ಬಳಿಕ ಈ ಪೋಸ್ಟ್ ವೈರಲ್ ಆಗಿ ರೆಸ್ಟೋರೆಂಟ್‌ಗೆ ಗ್ರಾಹಕರ ದಂಡೇ ಹರಿದುಬಂತು.

ಗ್ರಾಹಕರ ಬೇಡಿಕೆ ವಿಪರೀತ ಹೆಚ್ಚಿದ್ದರಿಂದ ಕೇವಲ ಮೂರು ದಿನಗಳಲ್ಲಿ ಚೋಲೆ ತಯಾರಿಕೆಯ ಪ್ರಮಾಣವು 8 ಕೆ.ಜಿಯಿಂದ 100 ಕೆ.ಜಿಗೆ ಏರಿಕೆಯಾಯಿತು. ಪ್ರಸ್ತುತ ಚೆಂಬೂರು ಮಾತ್ರವಲ್ಲದೆ ಮುಲುಂಡ್, ಅಂಧೇರಿ ವೆಸ್ಟ್ ಮತ್ತು ವಾಶಿ ಸೇರಿದಂತೆ ನಾಲ್ಕು ಕಡೆ ಶಾಖೆಗಳನ್ನು ಹೊಂದಿರುವ ಈ ರೆಸ್ಟೋರೆಂಟ್‌ನಲ್ಲಿ, ಈಗ ದಿನಕ್ಕೆ 3,000ಕ್ಕೂ ಹೆಚ್ಚು ಪ್ಲೇಟ್‌ಗಳು ಮಾರಾಟವಾಗುತ್ತಿವೆ ಹಾಗೂ ಮಾಸಿಕ ಮಾರಾಟವು ಸಂಕಷ್ಟದ ಕಾಲದಲ್ಲಿದ್ದ 1-1.5 ಲಕ್ಷ ರೂಪಾಯಿಯಿಂದ ಸುಮಾರು 2 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.


 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!