BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

VHP Mangaluru ಅಶೋಕ್ ಸಿಂಘಾಲ್ ಜೀ ಶತಮಾನೋತ್ಸವ: ಅ. 2 ರಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದಿಂದ ಉದ್ಘಾಟನಾ ಸಮಾರಂಭ


ಮಂಗಳೂರು,ಸೆ.30 : ರಾಮಜನ್ಮಭೂಮಿ ಹೋರಾಟದ ರೂವಾರಿ ಪೂಜನೀಯ ಅಶೋಕ್ ಸಿಂಘಾಲ್ ಜೀಯವರ ಶತಮಾನೋತ್ಸವದ ಪ್ರಯುಕ್ತ, ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ವತಿಯಿಂದ ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ಅಕ್ಟೋಬರ್ 02, 2026 ರ ಶುಕ್ರವಾರದಂದು ಅಪರಾಹ್ನ 3:30 ಕ್ಕೆ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಭೂವರಾಹ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.

ದಿವ್ಯ ಸಾನಿಧ್ಯ ಹಾಗೂ ಅಧ್ಯಕ್ಷತೆ:

ಶ್ರೀಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂನ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರು, ಗುರುಪುರದ ಶ್ರೀ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಪರಮಪೂಜ್ಯ ಸಾಧ್ವಿ ಮಾತಾನಂದಮಯೀ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮೂತ್ರರೋಗ ತಜ್ಞರು ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮಂಗಳೂರು ಅಧ್ಯಕ್ಷರಾದ ಡಾ. ಸದಾನಂದ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಉದ್ಘಾಟನೆ ಹಾಗೂ ಅತಿಥಿಗಳು:

ಸಾಮಾಜಿಕ ಮುಖಂಡರಾದ  ವೆಂಕಣ್ಣ ಕೊಯ್ಯೂರು ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘ ಚಾಲಕರಾದ ಡಾ. ವಾಮನ ಶೆಣೈ ಹಾಗೂ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾರ್ಯಕಾರಿಣಿ ಸದಸ್ಯರು ಮತ್ತು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಬಿ. ಪುರಾಣಿಕ್ ಅವರು ಅಭ್ಯಾಗತರಾಗಿ ಆಗಮಿಸಲಿದ್ದಾರೆ. ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷರಾದ  ಟಿ.ಎ.ಪಿ. ಶೆಣೈ ಅವರು ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ.

ಈ ಶ್ರೇಷ್ಠ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವಿನಂತಿಸಲಾಗಿದೆ.


ಉನ್ನತ ಅಧಿಕಾರಿಗಳ ಕುಟುಂಬದಲ್ಲಿ ಜನಿಸಿದ  ಅಶೋಕ್ ಸಿಂಘಾಲ್ ಜೀ ಅವರು ಬಿ.ಟೆಕ್ ಪದವಿ ಪಡೆದ ನಂತರ, 1940ರ ದಶಕದಲ್ಲೇ ಆರ್‌ಎಸ್ಎಸ್ (RSS) ಜೊತೆ ಸಂಪರ್ಕ ಹೊಂದಿದರು. ಪೂಜನೀಯ ಗುರೂಜಿ, ಪರಮಪೂಜ್ಯ ಶ್ರೀ ಬಾಳಾಸಾಹೇಬ್ ದೇವರಸ್ ಮತ್ತು ಪರಮಪೂಜ್ಯ ಪ್ರೊಫೆಸರ್ ರಾಜೇಂದ್ರ ಸಿಂಗ್ (ರಜ್ಜು ಭೈಯ್ಯಾ) ಅವರ ಮಾರ್ಗದರ್ಶನದಲ್ಲಿ ಪೂರ್ಣಕಾಲಿಕ ಪ್ರಚಾರಕರಾಗಿ ಸಂಘಟನಾ ಕೆಲಸ ನಿರ್ವಹಿಸಿದರು.  

​ವಿಶ್ವ ಹಿಂದೂ ಪರಿಷತ್‌ನಲ್ಲಿ  1980ರಲ್ಲಿ  ನಿಯೋಜಿತರಾಗಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ, 1984ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನಂತರ ದೀರ್ಘಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ವೇದಗಳ ಪ್ರಚಾರ, ಗೋ ಸಂರಕ್ಷಣೆ, ಮತಾಂತರ ತಡೆಗೆ ಯುವಶಕ್ತಿಯ ಜಾಗೃತಿ, ಸಾಲು ಸಾಲು ಸೇವಾ ಕಾರ್ಯಗಳಲ್ಲಿ ಹಿಂದೂ ಸಮಾಜವು ಸಕ್ರಿಯವಾಗುವಂತೆ ಪ್ರೇರಣೆ ನೀಡಿದರು.  

​ರಾಮ ಜನ್ಮಭೂಮಿ ಚಳವಳಿಯಲ್ಲಿ 1984ರಲ್ಲಿ ದೆಹಲಿಯಲ್ಲಿ ನಡೆದ ಮೊದಲ ಧರ್ಮ ಸಂಸತ್ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ರಾಮ ಜನ್ಮಭೂಮಿ ವಿಚಾರವನ್ನು ಮುಂಚೂಣಿಗೆ ತಂದರು. 1989ರ ನಂತರ ರಾಮಮಂದಿರ ನಿರ್ಮಾಣದ ವೇದಿಕೆಯನ್ನು ಮುನ್ನಡೆಸಿಕೊಂಡು ಹೋದರು. ಶಂಕುಸ್ಥಾಪನೆ, ಶಿಲಾನ್ಯಾಸ ಹಾಗೂ ಕರಸೇವಾ ಚಳವಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಶೋಕ್ ಸಿಂಘಾಲ್ ಜೀ ಅವರು ಸಾಂಸ್ಕೃತಿಕ ಜಾಗೃತಿ ಮತ್ತು ರಾಮಮಂದಿರ ಚಳವಳಿಗೆ ಜೀವನ ಸಮರ್ಪಿಸಿದ ಶ್ರೇಷ್ಠ ನಾಯಕರಾಗಿದ್ದಾರೆ. 


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!