ಉಳ್ಳಾಲ, ಸೆಪ್ಟೆಂಬರ್ 13: ಮುಡಾ (ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಅವರು ಶನಿವಾರ ಇತಿಹಾಸ ಪ್ರಸಿದ್ದ ಪವಿತ್ರ ಧಾರ್ಮಿ ಕ್ಷೇತ್ರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದರ್ಗಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜನಾಬ್ ಹನೀಫ್ ಹಾಜಿ, ಸಮಿತಿಯ ಸದಸ್ಯರು ಹಾಗೂ ಮುಸ್ತಫಾ ಉಳ್ಳಾಲ ಮತ್ತಿತರರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಶಾಲು ಹೊದಿಸಿ ಗೌರವಿಸಿದರು.