BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

Udupi ಉಡುಪಿ ಅಗ್ನಿಶಾಮಕ ದಳದ ಮಾನವೀಯ ಕಾರ್ಯ: ಬಾವಿಗೆ ಬಿದ್ದಿದ್ದ ರಾಷ್ಟ್ರೀಯ ಪಕ್ಷಿಯ ರಕ್ಷಣೆ..!

ಉಡುಪಿ, ಸೆಪ್ಟೆಂಬರ್ 15 : ಮಾನವ ಜೀವ ರಕ್ಷಣೆಯಷ್ಟೇ ಅಲ್ಲ, ಮೂಕ ಪ್ರಾಣಿ-ಪಕ್ಷಿಗಳ ರಕ್ಷಣೆಯಲ್ಲೂ ಉಡುಪಿ ಅಗ್ನಿಶಾಮಕ ದಳ ಮತ್ತೊಮ್ಮೆ ಮಾದರಿಯಾಗಿದೆ.

ಉಡುಪಿಯ ಕಟಪಾಡಿ ಕೋಟೆ ಪ್ರದೇಶದಲ್ಲಿ ಸೋಮವಾರ ಸಂಜೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ನವಿಲೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ಥಳಕ್ಕೆ ತೆರಳಿದ ಸಿಬ್ಬಂದಿ ಪೈಕಿ ಮಹಾಬಲೇಶ್ವರ ಅವರು ಬಾವಿಗೆ ಇಳಿದು, ಅತ್ಯಂತ ಎಚ್ಚರಿಕೆಯಿಂದ ನವಿಲನ್ನು ರಕ್ಷಿಸಿ ಮೇಲಕ್ಕೆ ತಂದರು.

ಅಶ್ವಿನ್ ಸನಿಲ್, ಮಹಾಬಲೇಶ್ವರ, ನಾಗೇಶ್ ಪೂಜಾರಿ, ಸುಧೀರ್, ಅಮರ್ ಹಾಗೂ ಗಣೇಶ್ ಅವರನ್ನೊಳಗೊಂಡ ತಂಡದ ಸಮಯೋಚಿತ ಸ್ಪಂದನೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!