BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

Udupi Girl Missing ಉಡುಪಿ: ಟೈಲರಿಂಗ್ ತರಬೇತಿಗೆ ತೆರಳಿದ್ದ ಯುವತಿ ನಾಪತ್ತೆ


ಉಡುಪಿ, ಸೆ 23 :ಉಡುಪಿ ನಗರದ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ 21 ವರ್ಷದ ಭಾಗ್ಯಶ್ರೀ ಶರಣಪ್ಪ ಮಾದರ ಎಂಬ ಯುವತಿ ನಾಪತ್ತೆಯಾಗಿದ್ದಾಳೆ. ಈ  ಕುರಿತು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ಹೊರಡಿಸಿದೆ.

ನಗರದ ಎಂ.ಜಿ.ಎಂ ಬಳಿ ವಾಸವಿದ್ದ ಭಾಗ್ಯಶ್ರೀ ಅವರು ಸೆಪ್ಟೆಂಬರ್ 12 ರಂದು ಬೆಳಗ್ಗೆ 11.30 ರ ಸುಮಾರಿಗೆ ಟೈಲರಿಂಗ್ ಕ್ಲಾಸ್‌ಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದವರು ವಾಪಸ್ ಬಾರದೆ ನಾಪತ್ತೆಯಾಗಿರುತ್ತಾರೆ.

ಯುವತಿಯ ವಿವರಗಳು:

ಹೆಸರು: ಭಾಗ್ಯಶ್ರೀ ಶರಣಪ್ಪ ಮಾದರ (ವಯಸ್ಸು 21)

ಮೈಕಟ್ಟು: 5 ಅಡಿ ಎತ್ತರ, ಸಪೂರ ಶರೀರ

ಬಣ್ಣ: ಗೋಧಿ ಮೈಬಣ್ಣ

ಭಾಷೆ: ಕನ್ನಡ ಭಾಷೆ ಮಾತನಾಡುತ್ತಾರೆ

ಕಾಣೆಯಾದ ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ:

ಉಡುಪಿ ನಗರ ಪೊಲೀಸ್ ಠಾಣೆ: 0820-2520444, ಉಡುಪಿ ಕಂಟ್ರೋಲ್ ರೂಂ: 0820-2526444

ಪೋಲಿಸ್ ನಿರೀಕ್ಷಕರು: 9480805408,  ಪೊಲೀಸ್ ಉಪ ನಿರೀಕ್ಷಕರು: 9080805445

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!