BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

Udupi Girl Missing ಉಡುಪಿ: ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗುವುದಾಗಿ ಪತ್ರ ಬರೆದಿಟ್ಟು ಕಾಣೆಯಾದ ಪೂಜಾ..!


ಉಡುಪಿ, ಸೆಪ್ಟೆಂಬರ್ 12: ಉಡುಪಿ ನಗರದ ಕಿನ್ನಿಮುಲ್ಕಿ ವೇಗಸ್ ಟೌನ್‌ಶಿಪ್‌ನಲ್ಲಿ ವಾಸವಾಗಿದ್ದ ಪೂಜಾ (18) ಎಂಬ ಯುವತಿಯು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗುತ್ತಿರುವುದಾಗಿ ತಿಳಿಸಿ, ತನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಸೆಪ್ಟೆಂಬರ್ 6ರಂದು ಮಧ್ಯರಾತ್ರಿ ಮನೆಯಿಂದ ಕಾಣೆಯಾಗಿದ್ದಾರೆ.

ಕಾಣೆಯಾದ ಯುವತಿಯ ವಿವರಗಳು ಹೀಗಿವೆ:

ಹೆಸರು: ಪೂಜಾ (ವಯಸ್ಸು 18)

ಎತ್ತರ: 4 ಅಡಿ 8 ಇಂಚು

ಮೈಬಣ್ಣ: ಗೋಧಿ ಮೈಬಣ್ಣ

ಶರೀರ: ಸಾಧಾರಣ ಶರೀರ

ಮಾತನಾಡುವ ಭಾಷೆಗಳು: ಕನ್ನಡ ಹಾಗೂ ತುಳು

ಯುವತಿಯ ಕುರಿತು ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಕೂಡಲೇ ಕೆಳಗಿನ ಪೊಲೀಸ್ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ಕೋರಿದೆ.

ಉಡುಪಿ ನಗರ ಪೊಲೀಸ್ ಠಾಣೆ: 0820-2520444

ಉಡುಪಿ ಕಂಟ್ರೋಲ್ ರೂಂ: 0820-2526444

ಪೊಲೀಸ್ ನಿರೀಕ್ಷಕರು: 9480805408

ಪೊಲೀಸ್ ಉಪ ನಿರೀಕ್ಷಕರು: 9080805445

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!