BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

Udupi Bus Theft ಉಡುಪಿಯಲ್ಲಿ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಖಾಸಗಿ ಬಸ್ ಕಳವು: ಕಾರ್ಕಳದಲ್ಲಿ ಪತ್ತೆ, ಆರೋಪಿಗಳು ಪರಾರಿ..!


ಉಡುಪಿ,ಸೆ 30 : ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸನ್ನು ಅಪರಿಚಿತರು ಕಳವು ಮಾಡಿರುವ ಘಟನೆ ಉಡುಪಿ ನಗರದ ಕಿನ್ನಿಮುಲ್ಕಿಯಲ್ಲಿ ನಡೆದಿದೆ.   

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ಗ್ರಾಂ MDMA ಮಾದಕ ವಸ್ತು ವಶ: ಒಬ್ಬ ಆರೋಪಿ ಬಂಧನ

ಶ್ರೀ ದುರ್ಗಾಂಬ' ಹೆಸರಿನ ಖಾಸಗಿ ಬಸ್ಸನ್ನು ಸೆ.28 ರ ರಾತ್ರಿ ನಗರದ ಕಿನ್ನಿಮುಲ್ಕಿಯ ಹನುಮಾನ್ ಪೆಟ್ರೋಲ್ ಬಂಕ್‌ನ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು.   ಮರುದಿನ ಬೆಳಗ್ಗೆ ಬಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಬಂಕ್‌ನ ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ಬಸ್ ಕಳವು ಮಾಡಿರುವುದು ತಿಳಿದುಬಂದಿದೆ.   ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳವಾದ ಬಸ್ಸನ್ನು ಕಾರ್ಕಳದಲ್ಲಿ ಪತ್ತೆಹಚ್ಚಿದ್ದಾರೆ. ಆರೋಪಿಗಳು  ಬಸ್ ನ್ನೂ ಕಳ್ಳತನ ಮಾಡಿಕೊಂಡು ಹೋಗಿ ಮುದುರಂಗಡಿ ಸಮೀಪದ ಮುದ್ದಾಡಿ ಎಂಬ ಹಾಡಿಯಲ್ಲಿ  ಬಿಟ್ಟು ಹೋಗಿದನ್ನು ಪತ್ತೆ ಮಾಡಿ ಸ್ವಾಧೀನಪಡಿಸಿ ಕೊಂಡಿದ್ದಾರೆ. ಬಸ್ ಕಳವು ಮಾಡಿದ ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.  

https://youtube.com/shorts/_T4Rr-qPitU?feature=share



📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!