BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

Udupi Bus Fire ಉಡುಪಿ ಪೆಟ್ರೋಲ್ ಪಂಪ್ ಸಮೀಪ ನಿಲ್ಲಿಸಿದ್ದ ಬಸ್‌ಗೆ ಬೆಂಕಿ; ಸಿಬ್ಬಂದಿಯ ಸಮಯೋಚಿತ ಕಾರ್ಯದಿಂದ ತಪ್ಪಿತು ದೊಡ್ಡ ದುರಂತ.!


ಉಡುಪಿ, ಸೆ 25:  ಉಡುಪಿ ನಗರದ ಅಲೆವೂರು-ದೆಂದೂರುಕಟ್ಟೆ ಬಳಿ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಪೆಟ್ರೋಲ್ ಪಂಪ್‌ವೊಂದರ ಸಮೀಪ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಶುಕ್ರವಾರ ಬೆಳಗಿನ ಜಾವ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಪಕ್ಕದಲ್ಲೇ ಇತರ ವಾಹನಗಳು ಹಾಗೂ ಪೆಟ್ರೋಲ್ ಬಂಕ್ ಇದ್ದಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಉಡುಪಿಯ ಅಲೆವೂರು-ದೆಂದೂರುಕಟ್ಟೆ ಬಳಿಯ ಪೆಟ್ರೋಲ್ ಪಂಪ್‌ ಸಮೀಪ ಎಂದಿನಂತೆ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಆದರೆ ಶುಕ್ರವಾರ ಬೆಳಗಿನ ಜಾವ, ಅಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಕೆನ್ನಾಲಿಗೆ ಚಾಚಿದೆ.

ಬಸ್ ಹೊತ್ತಿ ಉರಿಯುತ್ತಿದ್ದನ್ನು ಗಮನಿಸಿದ ತಕ್ಷಣ ಎಚ್ಚೆತ್ತ ಪೆಟ್ರೋಲ್ ಪಂಪ್ ಸಿಬ್ಬಂದಿ, ತಡಮಾಡದೆ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಅಕ್ಕಪಕ್ಕದ ಇತರ ಎರಡು ಬಸ್‌ಗಳು ಹಾಗೂ ಒಂದು ಟೆಂಪೋ ಕೂಡ ಅಲ್ಲೇ ನಿಂತಿತ್ತು. ವಿಶೇಷವಾಗಿ ಪಕ್ಕದಲ್ಲೇ ಪೆಟ್ರೋಲ್ ಪಂಪ್ ಇದ್ದ ಕಾರಣ, ಬೆಂಕಿ ತುಸು ನಿಯಂತ್ರಣ ತಪ್ಪಿದ್ದರೂ ಇಡೀ ಪ್ರದೇಶವೇ ಬೆಂಕಿಯ್ವೃತ್ತವಾಗಿ ದೊಡ್ಡ ಪ್ರಮಾಣದ ಸ್ಫೋಟ ಹಾಗೂ ದುರಂತ ಸಂಭವಿಸುವ ಸಾಧ್ಯತೆಯಿತ್ತು.

ಆದರೆ, ಪೆಟ್ರೋಲ್ ಪಂಪ್ ಸಿಬ್ಬಂದಿಯ ಸಮಯೋಚಿತ ಪ್ರದರ್ಶನ ಹಾಗೂ ತ್ವರಿತ ಕಾರ್ಯಚರಣೆಯಿಂದ ಬೆಂಕಿ ಬೇರೆಡೆಗೆ ಹರಡುವುದು ತಪ್ಪಿಸಲ್ಪಟ್ಟಿದೆ. ಸಮಯಕ್ಕೆ ಸರಿಯಾಗಿ ಬೆಂಕಿಯನ್ನು ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಕಿಯ್ವತ್ತಿಗೆ ಸುಟ್ಟುಕರಕಲಾಗಿರುವ ಬಸ್‌ಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!