BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Tragedy at wedding celebration: 17-year-old youth dies after collapsing while dancing to DJ music ಮದುವೆ ಸಂಭ್ರಮದಲ್ಲಿ ಡಿಜೆ ಹಾಡಿಗೆ ಕುಣಿಯುತ್ತಿದ್ದ ವೇಳೆ ಕುಸಿದುಬಿದ್ದು 17 ವರ್ಷದ ಯುವಕ ಸಾವು..!


ನಾರಾಯಣ ಪೇಟೆ, ಸೆಪ್ಟೆಂಬರ್ 02 : ಕರ್ನಾಟಕ ಮತ್ತು ತೆಲಂಗಾಣದ ಗಡಿ ಭಾಗದ ನಾರಾಯಣಪೇಟೆ ಜಿಲ್ಲೆಯ ಕೊಸ್ಗಿ ಮುನ್ಸಿಪಲ್ ವ್ಯಾಪ್ತಿಯ ಪೋತಿರೆಡ್ಡಿಪಳ್ಳಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮದುವೆ ಸಮಾರಂಭದಲ್ಲಿ ಡಿಜೆ ಸಂಗೀತಕ್ಕೆ ಕುಣಿಯುತ್ತಿದ್ದ 17 ವರ್ಷದ ಯುವಕ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. 

ಮದುವೆ ಸಮಾರಂಭದಲ್ಲಿ ಆಯೋಜಿಸಲಾಗಿದ್ದ ಡಿಜೆ ಸಂಗೀತಕ್ಕೆ ಕುಣಿಯುತ್ತಿದ್ದ 17 ವರ್ಷದ ಯುವಕ ರವಿತೇಜಾ ಕುಣಿಯುತ್ತಿದ್ದ.ಆದ್ರೆ ಏಕಾಏಕಿ ಕುಣಿಯುತ್ತಿರುವಾಗಲೇ ಕುಸಿದು ಬಿದ್ದಾನೆ. ಕೂಡಲೇ ಅವನನ್ನು ಕೊಸ್ಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅತಿಯಾದ ಡಿಜೆ ಶಬ್ದದಿಂದಾಗಿ ಅವರಿಗೆ ಹೃದಯಾಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಯುವಕನ ಅಚಾನಕ್ ಸಾವಿನಿಂದ ಪೋತಿರೆಡ್ಡಿಪಳ್ಳಿ ಗ್ರಾಮದಲ್ಲಿ ಶೋಕಮೂಡಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!