BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

South Western Railway registers record freight traffic and robust revenue, crosses Rs 3,850 crore milestone in August 2026 ನೈಋತ್ಯ ರೈಲ್ವೆ ಸಾಧನೆ: ಆಗಸ್ಟ್‌ನಲ್ಲಿ ದಾಖಲೆಯ ₹805.70 ಕೋಟಿ ಆದಾಯ, ಸಾರ್ವಕಾಲಿಕ ಗರಿಷ್ಠ ಸರಕು ಸಾಗಣೆ.!

 


ಹುಬ್ಬಳ್ಳಿ, ಸೆಪ್ಟೆಂಬರ್ 01 : ನೈಋತ್ಯ ರೈಲ್ವೆಯು (SWR) 2026ರ ಆಗಸ್ಟ್ ತಿಂಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿದ್ದು, ಸಾರ್ವಕಾಲಿಕ ದಾಖಲೆಯ ಸರಕು ಸಾಗಣೆ ಹಾಗೂ ಭರ್ಜರಿ ಆದಾಯ ಗಳಿಸುವ ಮೂಲಕ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ. ಆಗಸ್ಟ್ ತಿಂೊಂದರಲ್ಲೇ ಒಟ್ಟು ₹805.70 ಕೋಟಿ ಆದಾಯ ಗಳಿಸಿದ್ದು, ಪ್ರಸಕ್ತ ಹಣಕಾಸು ವರ್ಷದ ಆಗಸ್ಟ್ ಅಂತ್ಯದವರೆಗೆ ಸಂಚಿತ ಆದಾಯವು ₹3,850 ಕೋಟಿಯ ಗಡಿ ದಾಟಿದೆ.

ದಾಖಲೆ ಮಟ್ಟದ ಸರಕು ಸಾಗಣೆ:

ನೈಋತ್ಯ ರೈಲ್ವೆಯ ಸ್ಥಾಪನೆಯ ನಂತರದ ಆಗಸ್ಟ್ ತಿಂಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ ಸರಕು ಸಾಗಣೆ ದಾಖಲಾಗಿದೆ. ಆಗಸ್ಟ್ 2026ರಲ್ಲಿ ಒಟ್ಟು 4.48 ದಶಲಕ್ಷ ಟನ್ (MT) ಸರಕು ಸಾಗಿಸಲಾಗಿದ್ದು, ಮುಂಚಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 6.3ರಷ್ಟು ಬೆಳವಣಿಗೆ ಕಂಡಿದೆ. 2026-27ನೇ ಸಾಲಿನ ಆಗಸ್ಟ್ ಅಂತ್ಯದವರೆಗೆ ಒಟ್ಟು ಸರಕು ಸಾಗಣೆ 21.67 MTಗೆ ತಲುಪಿದೆ.

ಕಲ್ಲಿದ್ದಲು ಸಾಗಣೆಯಲ್ಲಿ ಶೇ. 37.4ರಷ್ಟು (1.03 MT), ಉಕ್ಕಿನ ಉತ್ಪನ್ನಗಳಲ್ಲಿ ಶೇ. 18.1ರಷ್ಟು (1.11 MT), ಸಿಮೆಂಟ್ ಶೇ. 25, ಕಂಟೈನರ್ ಶೇ. 13.6 ಮತ್ತು ಖನಿಜ ತೈಲ ಸಾಗಣೆಯಲ್ಲಿ ಶೇ. 6.9ರಷ್ಟು ಪ್ರಗತಿ ದಾಖಲಾಗಿದೆ. ಇದರೊಂದಿಗೆ ಆಹಾರ ಧಾನ್ಯಗಳ ಸಾಗಣೆಯಲ್ಲಿ ಶೇ. 118.4ರಷ್ಟು ಭಾರಿ ಏರಿಕೆ ಕಂಡುಬಂದಿದೆ.

ಒಟ್ಟು ಆದಾಯ: ಆಗಸ್ಟ್ 2026ರಲ್ಲಿ ₹805.70 ಕೋಟಿ ಮಾಸಿಕ ಆದಾಯ ಬಂದಿದ್ದು, ಪ್ರಸಕ್ತ ಸಾಲಿನ ಆಗಸ್ಟ್ ಅಂತ್ಯದವರೆಗೆ ಒಟ್ಟು ಸಂಚಿತ ಆದಾಯವು ₹3,850.05 ಕೋಟಿಗೆ (ಶೇ. 2.45ರಷ್ಟು ಬೆಳವಣಿಗೆ) ಏರಿಕೆಯಾಗಿದೆ.

ಆಗಸ್ಟ್‌ನಲ್ಲಿ ₹417.08 ಕೋಟಿ ಹಾಗೂ ಸಂಚಿತ ಆದಾಯವು ₹2,074.36 ಕೋಟಿಗೆ ತಲುಪಿದೆ.

 ಆಗಸ್ಟ್ ತಿಂಗಳಲ್ಲಿ 1.5 ಕೋಟಿ ಪ್ರಯಾಣಿಕರಿಂದ ₹348.97 ಕೋಟಿ ಆದಾಯ ಬಂದಿದೆ. ಆಗಸ್ಟ್ ಅಂತ್ಯದವರೆಗೆ ಒಟ್ಟು 7.6 ಕೋಟಿ ಪ್ರಯಾಣಿಕರು ರೈಲು ಸೇವೆ ಬಳಸಿದ್ದು, ಸಂಚಿತ ಆದಾಯವು ₹1,552.70 ಕೋಟಿಗೆ (ಶೇ. 13.51ರಷ್ಟು ಹೆಚ್ಚಳ) ತಲುಪಿದೆ.

ಕಾರ್ಯಾಚರಣಾ ದಕ್ಷತೆ ಮತ್ತು ಆದಾಯ ವೃದ್ಧಿಯಲ್ಲಿ ಶ್ಲಾಘನೀಯ ಪ್ರಗತಿ ಸಾಧಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪ್ರಯತ್ನಗಳನ್ನು ನೈಋತ್ಯ ರೈಲ್ವೆಯ ಮಹಾಪ್ರಬಂಧಕರಾದ ಶ್ರೀ ಪಿ. ಅನಂತ್ ಅವರು ಅಭಿನಂದಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!