ಮಂಗಳೂರು, ಸೆಪ್ಟೆಂಬರ್ 11: ಮೂರು ದಶಕಗಳಿಗೂ ಹೆಚ್ಚುಕಾಲ ಸುಧೀರ್ಘ ಸೇವೆ ಸಲ್ಲಿದ್ದ ಮಾಜಿ IAS ಅಧಿಕಾರಿಯೊಬ್ಬರಿಗೆ ನೀಡಿರುವ ಚುನಾವಣಾ ಅಥವಾ ಇತರೆ ಆಡಳಿತಾತ್ಮಕ ನೋಟಿಸ್ ನೀಡಿರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಈ ಬಗ್ಗೆ ನಿವೃತ್ತ ಅಧಿಕಾರಿ ಎ ಬಿ ಇಬ್ರಾಹಿಂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 2003 ರಿಂದ 2006 ರವರೆಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಹಾಗೂ ಇಆರ್‌ಒ ಆಗಿ, ಹಾಗೂ 2013 ರಿಂದ 2016 ರವರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ, ಸದ್ಯ ಕಳೆದ 6 ವರ್ಷಗಳಿಂದ ಮೈಸೂರಿನಲ್ಲಿ ನಿವಾಸಿಯಾಗಿರುವ ಹಿರಿಯ ಅಧಿಕಾರಿ ಎ ಬಿ ಇಬ್ರಾಹಿಂ ರ ಆಕ್ರೋಶದ ನುಡಿಗಳು ಈಗ ವೈರಲ್ ಆಗಿವೆ.
35 ವರ್ಷಗಳ ಕಾಲ ರಾಜ್ಯದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ, ನಿವೃತ್ತಿ ಜೀವನ ನಡೆಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಇಂತಹ ಬೆದರಿಕೆ ದಾಟಿಯ ನೋಟಿಸ್‌ಗಳು ಬರುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಅವರು ಎಚ್ಚರಿಸಿದ್ದಾರೆ.
ಅವರಿಗೆ ನೀಡಲಾದ ನೋಟಿಸ್ ನಲ್ಲಿ ' ನಿಮ್ಮನ್ನು ಜೈಲಿಗೆ ಶಿಕ್ಷೆಗೆ ಗುರಿಪಡಿಸುವಂತಹ ಕ್ರಿಮಿನಲ್ ಅಪರಾಧ; ಎರಡನೆಯದರಲ್ಲಿ, ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ಗುರಿಯಾಗಬಹುದು; ಮೂರನೆಯದರಲ್ಲಿ, ಘೋಷಣೆ, ನಕಲಿ, ಸುಳ್ಳು, ಕಟ್ಟುಕಥೆ ಅಥವಾ ಉದ್ದೇಶಪೂರ್ವಕವಾಗಿ ತಪ್ಪಾಗಿದೆ ಅಂತ ಹೇಳಿ ಒಂದು ಕಂಡುಬಂದಲ್ಲಿ, ಕಾನೂನಿನಲ್ಲಿ ಕ್ರಮ ಜರುಗಿಸಲಾಗುವುದು ಎಂದಿದೆ.
ಈ ಬಗ್ಗೆ ಪ್ರತಿಕ್ರೀಯಿಸಿರುವ ಈ ರೀತಿ ಒಂದು ನೋಟಿಸ್ ಕೊಟ್ಟು ನಮಗೆ ಒಂದು ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಯಾಕೆಂದರೆ ಎಲ್ಲೋ ಒಂದು ಕಡೆಯಲ್ಲಿ ಕಳೆದ 35 ವರ್ಷ ನಾವು ರಾಜ್ಯದಲ್ಲಿ ಸರ್ಕಾರಿ ಸೇವೆ ಮಾಡಿ, ಈಗ ನಿವೃತ್ತಿ ಜೀವನ ನಡೆಸುವಂತಹ ಸಂದರ್ಭದಲ್ಲಿ, ಈ ರೀತಿ ಒಂದು ಆತಂಕ ಹುಟ್ಟಿಸುವಂತಹ ಒಂದು ನೋಟಿಸ್ ಅನ್ನು ನೀಡುವ ಮೂಲಕ ಎಲ್ಲೋ ಒಂದು ಕಡೆಯಲ್ಲಿ ನಮ್ಮನ್ನು ಈ ಒಂದು ಸಮಾಜದಿಂದ ಹೊರದಬ್ಬುವಂತೆ ಆಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿವೃತ್ತ ಹಿರಿಯ ಅಧಿಕಾರಿಗಳಿಗೆ, ತೆರಿಗೆದಾರರಿಗೆ ಹಾಗೂ ಹಿರಿಯ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಈ ಧೋರಣೆ ವಿರುದ್ಧ ಎಲ್ಲೆಡೆ ಚರ್ಚೆ ಆರಂಭವಾಗಿದೆ.