BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Shabarimala ಶಬರಿಮಲೆ ಅಯ್ಯಪ್ಪ ಸ್ವಾಮಿಯ ಅಸಲಿ ಬಂಗಾರದ ಕಿರೀಟ ಮಾಯ, ಜಾಗದಲ್ಲಿ ನಕಲಿ ಕಿರೀಟ ಪತ್ತೆ!


ತಿರುವನಂತಪುರ, ಸೆ 24: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಭಂಡಾರದಿಂದ ದೇವರಿಗೆ ಅರ್ಪಿಸಲಾಗಿದ್ದ ಮೌಲ್ಯಯುತ ಬಂಗಾರದ ಕಿರೀಟ ನಾಪತ್ತೆಯಾಗಿದ್ದು, ಆ ಸ್ಥಾನದಲ್ಲಿ ತೂಕ ಕಡಿಮೆ ಇರುವ ನಕಲಿ ಕಿರೀಟವನ್ನು ಇಡಲಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಸಿಸಿಟಿವಿ ಕಣ್ಗಾವಲು ಇಲ್ಲದ ಭಂಡಾರದಲ್ಲಿ ಈ ಗೋಲ್ಮಾಲ್ ನಡೆದಿದ್ದು, ಕೇರಳದಲ್ಲಿ ತೀವ್ರ ಸಂಚಲನ ಮೂಡಿಸಿದೆ.

445 ಗ್ರಾಂ ಬಂಗಾರದ ಜಾಗದಲ್ಲಿ 240 ಗ್ರಾಂ ಕಿರೀಟ!

ವರದಿಗಳ ಪ್ರಕಾರ, ಸುಮಾರು 55.72 ಸವರನ್ ಅಂದರೆ ಅಂದಾಜು 445.78 ಗ್ರಾಂ ತೂಕದ ಚಿನ್ನದ ಕಿರೀಟ ಕಳುವಾಗಿದ್ದು, ಅದರ ಜಾಗದಲ್ಲಿ ಕಡಿಮೆ ತೂಕದ ನಕಲಿ ಕಿರೀಟ ಇಡಲಾಗಿದೆ. ಕೇರಳ ಹೈಕೋರ್ಟ್ ನಿರ್ದೇಶನದಂತೆ ಅಮಿಕಸ್ ಕ್ಯೂರಿ ಜಸ್ಟಿಸ್ ಕೆ.ಟಿ. ಶಂಕರನ್ ನೇತೃತ್ವದಲ್ಲಿ ದೇವಸ್ಥಾನದ ತಿರುವಾಭರಣ ಹಾಗೂ ಅಮೂಲ್ಯ ವಸ್ತುಗಳ ಪರಿಶೋಧನೆ ನಡೆಯುತ್ತಿದ್ದ ವೇಳೆ ಈ ವಂಚನೆ ಪತ್ತೆಯಾಗಿದೆ.

ಈ ಕಿರೀಟವನ್ನು 2012ರಲ್ಲಿ ತಮಿಳುನಾಡಿನ ಚಾರ್ಟರ್ಡ್‌ ಅಕೌಂಟೆಂಟ್‌ಗಳ ಗುಂಪು ಅಯ್ಯಪ್ಪ ಸ್ವಾಮಿಗೆ ಉಡುಗೊರೆಯಾಗಿ ನೀಡಿತ್ತು. ದಾಖಲೆಗಳ ಪ್ರಕಾರ ಇದರ ಒಟ್ಟು ತೂಕ 445.78 ಗ್ರಾಂ ಇರಬೇಕಿತ್ತು. ಆದರೆ ಪ್ರಸ್ತುತ ಭಂಡಾರದಲ್ಲಿ ಸಿಕ್ಕಿರುವ ಕಿರೀಟದ ತೂಕ ಕೇವಲ 240 ಗ್ರಾಂ ಇದ್ದು, ಅಂದಾಜು 205.78 ಗ್ರಾಂ ತೂಕದ ಭಾರಿ ವ್ಯತ್ಯಾಸ ಕಂಡುಬಂದಿದೆ. ಮೂಲ ಕಿರೀಟದ ವಿನ್ಯಾಸದಲ್ಲೇ ಇರುವ ನಕಲಿ ಕಿರೀಟದಲ್ಲಿ ಅಸಲಿ ವಜ್ರಗಳ ಬದಲಿಗೆ ನಕಲಿ ಬಿಳಿ ಕಲ್ಲುಗಳನ್ನು ಜೋಡಿಸಲಾಗಿದೆ. ಇದೇ ವೇಳೆ, ಅರನ್ಮುಲಾ ದೇವಸ್ವಂ ಸ್ಟ್ರಾಂಗ್‌ ರೂಮ್‌ನಿಂದ 4 ಗ್ರಾಂ ತೂಕದ ಚಿನ್ನದ ಹಾರವೂ ಕಾಣೆಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ನಿಯಮ ಉಲ್ಲಂಘನೆ ಮತ್ತು ತನಿಖಾ ಸವಾಲು

ನಿಯಮಗಳ ಪ್ರಕಾರ ಸನ್ನಿಧಾನದ ಭಂಡಾರಕ್ಕೆ ಬರುವ ಇಂತಹ ಬೆಲೆಬಾಳುವ ಕಾಣಿಕೆಗಳನ್ನು ತಾತ್ಕಾಲಿಕವಾಗಿ ಅಲ್ಲಿಟ್ಟು, ನಂತರ ಆರಣ್ಮುಲಾದಲ್ಲಿರುವ ಟ್ರಾವಂಕೂರ್ ದೇವಸ್ವಂ ಮಂಡಳಿಯ (TDB) ಸುರಕ್ಷಿತ ಕೇಂದ್ರೀಯ ಭಂಡಾರಕ್ಕೆ ರವಾನಿಸಬೇಕು. ಆದರೆ 2012ರಲ್ಲಿ ಸ್ವೀಕರಿಸಲಾದ ಈ ಕಿರೀಟವನ್ನು ಆರಣ್ಮುಲಾಗೆ ವರ್ಗಾಯಿಸಿರಲಿಲ್ಲ ಎನ್ನಲಾಗಿದೆ. ವಿಶೇಷವೆಂದರೆ, ಸನ್ನಿಧಾನದ ಈ ಭಂಡಾರದಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಯೂ ಇರಲಿಲ್ಲ. ಪ್ರತಿ ವರ್ಷ ಆಡಳಿತಾಧಿಕಾರಿಗಳು ಬದಲಾಗುತ್ತಿರುವುದರಿಂದ, ಇಷ್ಟು ವರ್ಷಗಳಲ್ಲಿ ಕಿರೀಟವನ್ನು ಅದಲು-ಬದಲು ಮಾಡಿದ್ದು ಯಾರು ಎಂಬುದು ಪೊಲೀಸರಿಗೆ ದೊಡ್ಡ ಸವಾLವಾಗಿ ಪರಿಣಮಿಸಿದೆ.

ದೇವಸ್ವಂ ಮಂಡಳಿ ಸ್ಪಷ್ಟನೆ:

ಈ ಕುರಿತು ಪ್ರತಿಕ್ರಿಯಿಸಿರುವ ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್, "ಮಾಧ್ಯಮಗಳ ಮೂಲಕ ವಿಷಯ ನನ್ನ ಗಮನಕ್ಕೆ ಬಂದಿದೆ. ಸನ್ನಿಧಾನದಿಂದ ವಸ್ತುಗಳನ್ನು ಸ್ಥಳಾಂತರಿಸುವ ವ್ಯವಸ್ಥೆಯಲ್ಲಿ ಲೋಪಗಳಾಗಿವೆಯೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!