BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Reliance Consumer Products launches 'Bombay Creamery', ಐಸ್‌ಕ್ರೀಮ್ ಮಾರುಕಟ್ಟೆಗೆ ರಿಲಯನ್ಸ್ ಲಗ್ಗೆ ‘ಬಾಂಬೆ ಕ್ರೀಮರಿ’ ಬ್ರ್ಯಾಂಡ್ ಲಾಂಚ್, ಐಸ್‌ಕ್ರೀಮ್‌ನ ಆರಂಭಿಕ ಬೆಲೆ ಕೇವಲ 10 ರೂ..!


ಬೆಂಗಳೂರು,ಸೆಪ್ಟೆಂಬರ್ 01: ಐಸ್‌ಕ್ರೀಮ್ ಮಾರುಕಟ್ಟೆಗೆ ರಿಲಯನ್ಸ್ ಲಗ್ಗೆಇಟ್ಟಿದ್ದು‘ಬಾಂಬೆ ಕ್ರೀಮರಿ’ ಬ್ರ್ಯಾಂಡ್ ಲಾಂಚ್ ಮಾಡಿದೆ. ಗ್ರಾಹಕರ ಅಭಿರುಚಿಯಂತೆ ಗುಣಮಟ್ಟದೊಂದಿಗೆ ಕೈಗೆಟಕುವ ದರದಲ್ಲಿ ಈ ಐಸ್‌ಕ್ರೀಂ ಗಳು ಲಭ್ಯವಾಗಲಿವೆ. 

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (RIL) ಎಫ್‌ಎಂಸಿಜಿ ವಿಭಾಗವಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL) ದೇಶದ ವೇಗವಾಗಿ ಬೆಳೆಯುತ್ತಿರುವ ಐಸ್‌ಕ್ರೀಮ್ ಮಾರುಕಟ್ಟೆಗೆ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದು, ‘ಬಾಂಬೆ ಕ್ರೀಮರಿ’ (Bombay Creamery) ಹೊಸ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಧಿಕೃತ ಹಾಲಿನ ಪದಾರ್ಥಗಳಿಂದ (Real Dairy Cream) ತಯಾರಿಸಲ್ಪಟ್ಟಿರುವ ಬಾಂಬೆ ಕ್ರೀಮರಿ, ಭಾರತದ ಪ್ರಥಮ ಸುಲಭವಾಗಿ ಲಭ್ಯವಿರುವ ಪ್ರೀಮಿಯಂ ಡೈರಿ ಬ್ರ್ಯಾಂಡ್ ಎಂದು ಕಂಪನಿ ತಿಳಿಸಿದೆ.

ದೀರ್ಘಕಾಲಿಕ ಬದ್ಧತೆ ಮತ್ತು ಕೈಗೆಟುಕುವ ಬೆಲೆ:

RCPL ನ ರಾಷ್ಟ್ರೀಯ ವಿತರಣಾ ಜಾಲ, ಬೃಹತ್ ರಿಟೇಲ್ ಮಾರುಕಟ್ಟೆ ಮತ್ತು ಗ್ರಾಹಕರ ಅಭಿರುಚಿಯ ಬಲದೊಂದಿಗೆ ಈ ಹೊಸ ಬ್ರ್ಯಾಂಡ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ‘ಜಾಗತಿಕ ಗುಣಮಟ್ಟವನ್ನು ಕೈಗೆಟುಕುವ ಬೆಲೆಗೆ’ (Global Quality at Affordable Price) ತಲುಪಿಸುವ ತನ್ನ ಮಾತಿಗೆ ಬದ್ಧವಾಗಿ, ಬಾಂಬೆ ಕ್ರೀಮರಿಯ ಪ್ರತಿಯೊಂದು ಉತ್ಪನ್ನವನ್ನೂ ಅಪ್ಪಟ ಹಾಲಿನ ಕೆನೆಯಿಂದ ತಯಾರಿಸಲಾಗಿದೆ.

ಈ ಕುರಿತು ಮಾತನಾಡಿರುವ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ನಿರ್ದೇಶಕ ಟಿ. ಕೃಷ್ಣಕುಮಾರ್, “ಡೈರಿ ಉತ್ಪನ್ನಗಳಲ್ಲಿ ಯಾವುದೇ ಶಾರ್ಟ್‌ಕಟ್‌ಗಳು ಇರಬಾರದು ಎಂಬ ಸರಳ ಯೋಚನೆಯೊಂದಿಗೆ ನಾವು ಬಾಂಬೆ ಕ್ರೀಮರಿಯನ್ನು ರೂಪಿಸಿದ್ದೇವೆ. RCPL ಕೇವಲ ಐಸ್‌ಕ್ರೀಮ್ ಮಾರುಕಟ್ಟೆಗೆ ಪ್ರವೇಶಿಸುತ್ತಿಲ್ಲ, ಬದಲಾಗಿ ಈ ವಿಭಾಗದಲ್ಲಿ ದೀರ್ಘಕಾಲಿಕವಾಗಿ ತೊಡಗಿಸಿಕೊಳ್ಳಲಿದೆ. ಅಪ್ಪಟ ಹಾಲಿನ ಕೆನೆಯಿಂದ ತಯಾರಾಗುವ ಬಾಂಬೆ ಕ್ರೀಮರಿ, ಪ್ರತಿ ಬಾರಿಯೂ ಅಸಲಿ ಐಸ್‌ಕ್ರೀಮ್‌ನ ನಿಜವಾದ ರುಚಿಯನ್ನು, ಪ್ರತಿಯೊಂದು ಭಾರತೀಯ ಕುಟುಂಬಕ್ಕೂ ಕೈಗೆಟುಕುವ ಬೆಲೆಯಲ್ಲಿ ಖಾತ್ರಿಪಡಿಸುತ್ತದೆ” ಎಂದು ತಿಳಿಸಿದ್ದಾರೆ.

ಉತ್ಪನ್ನಗಳ ವೈವಿಧ್ಯ ಹಾಗೂ ಲಭ್ಯತೆ:

ಬಾಂಬೆ ಕ್ರೀಮರಿ ಐಸ್‌ಕ್ರೀಮ್ ಶ್ರೇಣಿಯು ಕೋನ್‌ಗಳು, ಕಪ್‌ಗಳು, ಟಬ್‌ಗಳು, ಬಾರ್‌ಗಳು ಮತ್ತು ಸ್ಟಿಕ್‌ಗಳಂತಹ ಜನಪ್ರಿಯ ಮಾದರಿಗಳಲ್ಲಿ ಲಭ್ಯವಿರಲಿದೆ. ಕೇವಲ 10 ರೂ. ನಿಂದ ಇದರ ಬೆಲೆಗಳು ಆರಂಭವಾಗುತ್ತವೆ. ಮೊದಲ ಹಂತವಾಗಿ ಪಶ್ಚಿಮ ಭಾರತದಲ್ಲಿ ತಕ್ಷಣವೇ ಲಭ್ಯವಾಗಲಿರುವ ಈ ಐಸ್‌ಕ್ರೀಮ್‌ಗಳು, ಶೀಘ್ರದಲ್ಲೇ ದೇಶಾದ್ಯಂತ (Pan-India) ಬಿಡುಗಡೆಯಾಗಲಿವೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!