BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

PM Modi Birthday Celebration ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ವಿವಿಧ ದೇವಳಗಳಲ್ಲಿ ವಿಶೇಷ ಪೂಜೆ


ಬೆಳ್ತಂಗಡಿ, ಸೆಪ್ಟೆಂಬರ್ 17 :  ಪ್ರಧಾನಿ ನರೇಂದ್ರ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ವಿವಿಧ ದೇವಳಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದುವು. ಶಾಸಕ ಹರೀಶ್ ಪೂಂಜಾ ಸಹಿತ, ಬಿಜೆಪಿ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. 

ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಶಾಸಕರಾದ ಹರೀಶ್ ಪೂಂಜರವರು ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

 ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ  ನವೀನ್ ನೆರಿಯ, ಬಿಜೆಪಿ ಪಕ್ಷದ ಪ್ರಮುಖರು, ಮೋದಿಜೀ ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. 

ಮೊಗ್ರು ಗ್ರಾಮ ಮುಗೇರಡ್ಕ ಮೂವರು ದೈವಗಳ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

 ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಗಳ ದೈವಸ್ಥಾನದಲ್ಲಿ  ಸಂಕ್ರಮಣ ಪರ್ವ ಸೇವೆಯ ಶುಭಗಳಿಗೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರು, ಬಿಜೆಪಿ ಪಕ್ಷದ ಪ್ರಮುಖರು, ಮೋದಿಜೀ ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.


ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವರಿಗೆ ಕಾರ್ತಿಕ ಪೂಜೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಲಾಯಿತು. 

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ವಸಂತಿ ಲಕ್ಷ್ಮಣ್ , ಕುವೆಟ್ಟು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ಚಂದ್ರಕಾಂತ ನಿಡ್ಡಾಜೆ, ಮಚ್ಚಿನ ಶಕ್ತಿ ಕೇಂದ್ರ ಅಧ್ಯಕ್ಷ ಶ್ರೀ ನಾರಾಯಣ ಶೆಟ್ಟಿ ನೆತ್ತರ , ಬೂತ್ ಅಧ್ಯಕ್ಷರುಗಳಾದ ಶ್ರೀ ವಿಜಯ್ ಮಡಕ್ಕಿಲ, ಶ್ರೀ ರಮೇಶ್ ಕೊಡ್ಯೇಲು, ನೊಣಯ್ಯ, ಸುಕುಮಾರ್ , ಜಯಶ್ರೀ ಮಚ್ಚಿನ ಚೇತನ ಪಲ್ಲತಳ, ಶ್ರೀ ಶ್ಯಾಮ್ ಸುಂದರ್, ಶ್ರೀ ಚಿತ್ರಂಜನ ಕುರುಡಂಗೆ, ವಿಶ್ವ ಹಿಂದೂ ಪರಿಷತ್ತಿನ ಶ್ರೀ ಪ್ರಭಾಕರ ಮುದಲಡ್ಕ, ಶ್ರೀ ಪುರಂದರ ಶೆಟ್ಟಿ ನೆತ್ತರ  ಹಾಗೂ  ಪ್ರಮುಖರು,ಮೋದಿಜೀ ಅಭಿಮಾನಿಗಳು,ಭಕ್ತಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.


 ಕಣಿಯೂರು ಗ್ರಾಮದ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸೆ 17 ರಂದು ದೀರ್ಘಾಯುಷ್ಯ ಅರೋಗ್ಯ, ದೇಶವನ್ನು ಮುನ್ನಡೆಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಹಾಗೂ ಸರ್ವಸೇವೆಯನ್ನು ಮಾಡಿ ಪ್ರಸಾದ ಸ್ವೀಕರಿಸಲಾಯಿತು..

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ , ಬಿಜೆಪಿ ಪಕ್ಷದ ಪ್ರಮುಖರು, ಮೋದಿಜೀ ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.


ಬಡಕೋಡಿ ಶಕ್ತಿ ಕೇಂದ್ರದ ವತಿಯಿಂದ ಬಡಕೋಡಿ ಗ್ರಾಮದ ಆದಿಶಕ್ತಿ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ

ನಾರಾವಿ ಮಹಾಶಕ್ತಿ ಕೇಂದ್ರದ ಬಡಕೋಡಿ ಶಕ್ತಿ ಕೇಂದ್ರದ ವತಿಯಿಂದ ಬಡಕೋಡಿ ಆದಿಶಕ್ತಿ  ದೇವಸ್ಥಾನದಲ್ಲಿ ಸೆ 17 ರಂದು ದೀರ್ಘಾಯುಷ್ಯ ಅರೋಗ್ಯ, ದೇಶವನ್ನು ಮುನ್ನಡೆಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ  ಪ್ರಸಾದ ಸ್ವೀಕರಿಸಲಾಯಿತು..

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ , ಬಿಜೆಪಿ ಪಕ್ಷದ ಪ್ರಮುಖರು, ಮೋದಿಜೀ ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.


ಪುದುವೆಟ್ಟು ಗ್ರಾಮದ  ಮಿಯಾರು ವನದುರ್ಗಾ ಪರಮೇಶ್ವರಿ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ

ಪುದುವೆಟ್ಟು ಗ್ರಾಮದ ಮಿಯಾರು ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೆ 17 ರಂದು ದೀರ್ಘಾಯುಷ್ಯ ಅರೋಗ್ಯ, ದೇಶವನ್ನು ಮುನ್ನಡೆಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ  ಪ್ರಸಾದ ಸ್ವೀಕರಿಸಲಾಯಿತು..

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ , ಬಿಜೆಪಿ ಪಕ್ಷದ ಪ್ರಮುಖರು, ಮೋದಿಜೀ ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.




📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!