ಮೈಸೂರು, ಸೆಪ್ಟೆಂಬರ್ 03 : ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು ಮತ್ತು ಅಜ್ಮೇರ್ ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲು ಸೇವೆಯನ್ನು (ರೈಲು ಸಂಖ್ಯೆ 06281/06282) ಭಾರತೀಯ ರೈಲ್ವೆ ಮಂಡಳಿಯು ನಿಯಮಿತ (ಕಾಯಂ) ಸೇವೆಯನ್ನಾಗಿ ಕ್ರಮಬದ್ಧಗೊಳಿಸಲಾಗಿದ್ದು, ಹೊಸ ರೈಲು ಸಂಖ್ಯೆಗಳೊಂದಿಗೆ (16281/16282) ವಾರಕ್ಕೊಮ್ಮೆ ಸಂಚರಿಸಲು ಅನುಮೋದನೆ ನೀಡಿದೆ. ರೈಲು ಸಂಖ್ಯೆ 16281 ಮೈಸೂರು–ಅಜ್ಮೇರ್ ಸಾಪ್ತಾಹಿಕ ಎಕ್ಸ್’ಪ್ರೆಸ್ 05.09.2026 ರಿಂದ ಜಾರಿಗೆ ಬರುವಂತೆ ಪ್ರತಿ ಶನಿವಾರ ಸಂಚರಿಸಲಿದ್ದು, ರೈಲು ಸಂಖ್ಯೆ 16282 ಅಜ್ಮೇರ್–ಮೈಸೂರು ಸಾಪ್ತಾಹಿಕ ಎಕ್ಸ್’ಪ್ರೆಸ್ 07.09.2026 ರಿಂದ ಜಾರಿಗೆ ಬರುವಂತೆ ಪ್ರತಿ ಸೋಮವಾರ ಸಂಚರಿಸಲಿದೆ.
ರೈಲು ಸಂಖ್ಯೆ 16281 ಮೈಸೂರು–ಅಜ್ಮೇರ್ ಸಾಪ್ತಾಹಿಕ ಎಕ್ಸ್’ಪ್ರೆಸ್ ಪ್ರತಿ ಶನಿವಾರ 08.00 ಗಂಟೆಗೆ ಮೈಸೂರಿನಿಂದ ಹೊರಟು, ಸೋಮವಾರ 04.35 ಗಂಟೆಗೆ ಅಜ್ಮೇರ್ ತಲುಪಲಿದೆ. ಈ ರೈಲು ಅಜ್ಮೇರ್ ತಲುಪುವ ಮೊದಲು ಕೃಷ್ಣರಾಜನಗರ (08.34/08.35), ಹೊಳೆ ನರಸೀಪುರ (09.28/09.30), ಹಾಸನ (10.23/10.25), ಅರಸೀಕೆರೆ (11.10/11.20), ಕಡೂರು (11.48/11.50), ಚಿಕ್ಕಜಾಜೂರು (12.50/13.00), ದಾವಣಗೆರೆ (13.38/13.40), ಕೊಟ್ಟೂರು (14.53/14.55), ತುಂಗಭದ್ರಾ ಡ್ಯಾಮ್ (16.40/16.45), ಕೊಪ್ಪಳ (17.48/17.50), ಗದಗ (18.48/18.50), ಎಸ್ಎಸ್ಎಸ್ ಹುಬ್ಬಳ್ಳಿ (20.10/20.20), ಧಾರವಾಡ (20.43/20.45), ಲೋಂಡಾ (21.58/22.00), ಬೆಳಗಾವಿ (23.05/23.10), ಘಟಪ್ರಭಾ (23.55/23.57), ಮಿರಜ್ (02.35/02.40), ಸಾಂಗ್ಲಿ (02.52/02.55), ಕರಾಡ್ (03.52/03.55), ಸತಾರಾ (04.57/05.00), ಲೊನಾಂಡ್ (06.03/06.05), ಪುಣೆ (08.10/08.15), ಲೋನಾವಳ (09.23/09.25), ಕಲ್ಯಾಣ್ (10.35/10.38), ವಸೈ ರೋಡ್ (12.00/12.05), ಸೂರತ್ (14.43/14.48), ವಡೋದರಾ (16.25/16.30), ರತ್ಲಾಮ್ (20.10/20.20), ಮಂದಸೌರ್ (21.25/21.27), ನೀಮಚ್ (22.18/22.20), ಚಿತ್ತೋರ್ಗಢ್ (00.05/00.20), ಭಿಲ್ವಾರ (01.30/01.35), ಬಿಜೈನಗರ (02.38/02.40) ಮತ್ತು ನಸಿರಾಬಾದ್ (03.26/03.28) ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆಗಳನ್ನು ಹೊಂದಿರುತ್ತದೆ.
ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 16282 ಅಜ್ಮೇರ್–ಮೈಸೂರು ಸಾಪ್ತಾಹಿಕ ಎಕ್ಸ್’ಪ್ರೆಸ್ ಪ್ರತಿ ಸೋಮವಾರ 18.50 ಗಂಟೆಗೆ ಅಜ್ಮೇರ್ನಿಂದ ಹೊರಟು, ಬುಧವಾರ 19.00 ಗಂಟೆಗೆ ಮೈಸೂರು ತಲುಪಲಿದೆ. ಈ ರೈಲು ಮೈಸೂರು ತಲುಪುವ ಮೊದಲು ನಸಿರಾಬಾದ್ (19.34/19.36), ಬಿಜೈನಗರ (20.18/20.20), ಭಿಲ್ವಾರ (21.30/21.35), ಚಿತ್ತೋರ್ಗಢ್ (23.35/23.45), ನೀಮಚ್ (00.57/00.59), ಮಂದಸೌರ್ (01.44/01.49), ರತ್ಲಾಮ್ (03.50/04.00), ವಡೋದರಾ (07.40/07.50), ಸೂರತ್ (10.05/10.10), ವಸೈ ರೋಡ್ (13.15/13.20), ಕಲ್ಯಾಣ್ (15.30/15.33), ಲೋನಾವಳ (17.27/17.30), ಪುಣೆ (18.35/18.40), ಲೊನಾಂಡ್ (20.53/20.55), ಸತಾರಾ (22.42/22.45), ಕರಾಡ್ (23.42/23.45), ಸಾಂಗ್ಲಿ (00.42/00.45), ಮಿರಜ್ (01.25/01.30), ಘಟಪ್ರಭಾ (02.23/02.25), ಬೆಳಗಾವಿ (03.45/03.50), ಲೋಂಡಾ (04.38/04.40), ಧಾರವಾಡ (06.28/06.30), ಎಸ್ಎಸ್ಎಸ್ ಹುಬ್ಬಳ್ಳಿ (07.25/07.35), ಗದಗ (08.28/08.30), ಕೊಪ್ಪಳ (09.18/09.20), ತುಂಗಭದ್ರಾ ಡ್ಯಾಮ್ (09.55/10.00), ಕೊಟ್ಟೂರು (12.08/12.10), ದಾವಣಗೆರೆ (13.13/13.15), ಚಿಕ್ಕಜಾಜೂರು (13.53/13.55), ಕಡೂರು (14.50/14.52), ಅರಸೀಕೆರೆ (15.22/15.25), ಹಾಸನ (16.10/16.12), ಹೊಳೆ ನರಸೀಪುರ (16.45/16.47) ಮತ್ತು ಕೃಷ್ಣರಾಜನಗರ (17.38/17.40) ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆಗಳನ್ನು ಹೊಂದಿರುತ್ತದೆ.
ಈ ರೈಲು ಒಟ್ಟು 18 ಬೋಗಿಗಳನ್ನು ಹೊಂದಿರಲಿದೆ, ಇದರಲ್ಲಿ 01 ಎಸಿ ಫಸ್ಟ್ ಕ್ಲಾಸ್, 02 ಎಸಿ 2-ಟೈರ್, 02 ಎಸಿ 3-ಟೈರ್, 07 ಸ್ಲೀಪರ್ ಕ್ಲಾಸ್, 04 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 02 ಲಗೇಜ್-ಕಮ್-ಬ್ರೇಕ್ ವ್ಯಾನ್/ದಿವ್ಯಾಂಗಜನ್ ಬೋಗಿಗಳು ಇರಲಿವೆ.