BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Mumbai ನಳದುರ್ಗ ಕೋಟೆಯಿಂದ ಹಾರಿ ‘ಮಹಾರಾಷ್ಟ್ರದ ಹೆಣ್ಣು ಹುಲಿ’, ಮೂವರು ಮಕ್ಕಳ ಜತೆ ಕುಸ್ತಿಪಟು ಆತ್ಮಹತ್ಯೆ


ಮುಂಬೈ,ಸೆಪ್ಟೆಂಬರ್ 05: ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಐತಿಹಾಸಿಕ ನಳದುರ್ಗ ಕೋಟೆಯಿಂದ ರಾಷ್ಟ್ರಮಟ್ಟದ ಮಹಿಳಾ ಕುಸ್ತಿಪಟು ತನ್ನ ಮೂವರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ಈ ದುರ್ಘಟನೆಯಲ್ಲಿ ಕುಸ್ತಿಪಟು ಹಾಗೂ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಒಂದು ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಅಶ್ವಿನಿ ಮನೋಹರ್ ಪೌಲ್ (ಮೃತರು) ಹಾಗೂ ಅವರ ಐದೂವರೆ ವರ್ಷದ ಮಗ ಅಜಿಂಕ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಎರಡೂವರೆ ವರ್ಷದ ಅವಳಿ ಹೆಣ್ಣುಮಕ್ಕಳ ಪೈಕಿ ಕ್ರಾಂತಿ ಎಂಬಾಕೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮತ್ತೊಬ್ಬ ಮಗಳು ವೀರಾ ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಧಾರಾಶಿವ್‌ನ ಸರಕಾರಿ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ (ICU) ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆ.

'ಮಹಾರಾಷ್ಟ್ರದ ಹೆಣ್ಣು ಹುಲಿ' ಎಂದೇ ಖ್ಯಾತಿ: ಮೃತರಾದ ಅಶ್ವಿನಿ ಪೌಲ್ ಅವರು ಕುಸ್ತಿ ವಲಯದಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದು, ಅವರನ್ನು ಪ್ರೀತಿಯಿಂದ ‘ಮಹಾರಾಷ್ಟ್ರದ ಹೆಣ್ಣು ಹುಲಿ’ ಎಂದು ಕರೆಯಲಾಗುತ್ತಿತ್ತು. ತಮ್ಮ ಅದ್ಭುತ ಕ್ರೀಡಾ ಜೀವನದಲ್ಲಿ ಅವರು ರಾಷ್ಟ್ರಮಟ್ಟದಲ್ಲಿ 5 ಚಿನ್ನ ಹಾಗೂ 6 ಬೆಳ್ಳಿ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದರು.

ಕೌಟುಂಬಿಕ ಕಿರುಕುಳವೇ ಕಾರಣ?: ಕುಸ್ತಿಪಟು ಅಶ್ವಿನಿ ಅವರ ಪತಿ ಹಾಗೂ ಅತ್ತೆ-ಮಾವಂದಿರು ತಮಗೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಅಶ್ವಿನಿ ಅವರ ತಂದೆ ಗಂಭೀರ ಆರೋಪ ಮಾಡಿದ್ದಾರೆ. ಈ ಕೌಟುಂಬಿಕ ದೌರ್ಜನ್ಯವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ನಳದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಮಗ್ರ ತನಿಖೆ ಮುಂದುವರಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!