BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Monti Fest ಕರಾವಳಿ ಕರ್ನಾಟಕದ ಮನೆಮನೆಗಳಲ್ಲಿ ಇಂದು ಮೋಂತಿ ಫೆಸ್ತ್ ಸಂಭ್ರಮ ಸಡಗರ




ಮಂಗಳೂರು, ಸೆಪ್ಟೆಂಬರ್ 08: ಕರಾವಳಿ ಕರ್ನಾಟಕದ ಮನೆಮನೆಗಳಲ್ಲಿ ಇಂದು ಮೋಂತಿ ಫೆಸ್ತ್ ಸಂಭ್ರಮದ ಸಡಗರ. ಹೊಸ ಬೆಳೆಯ ಘಮಲು, ಹೂವುಗಳ ಸೌಂದರ್ಯ ಮತ್ತು ಕುಟುಂಬದ ಒಗ್ಗಟ್ಟಿನ ಪ್ರತೀಕವಾದ ಕೊಂಕಣಿ ಕ್ರೈಸ್ತರ ಮಹತ್ವದ ಹಬ್ಬ 'ಮೊಂತಿ ಫೆಸ್ತ್' ಇಂದು ಕರಾವಳಿಯ ಕ್ರೈಸ್ತ ಸಮುದಾಯಗಳ  ಮನೆಗಳಲ್ಲಿ ಕಳೆಗಟ್ಟಿದೆ.

ಪ್ರತಿವರ್ಷ ಸೆಪ್ಟೆಂಬರ್ 8 ರಂದು ಆಚರಿಸಲಾಗುವ ಈ ಹಬ್ಬ, ಕನ್ಯಾ ಮರಿಯಮ್ಮನವರ ಜನ್ಮದಿನದ ನೆನಪಷ್ಟೇ ಅಲ್ಲ; ಇದು ಕೃಷಿಯನ್ನು ಗೌರವಿಸುವ ಸುಗ್ಗಿ ಹಬ್ಬವೂ ಹೌದು. ಕಥೋಲಿಕ್ ಕ್ರೈಸ್ತರ ಕೇಂದ್ರ ಸ್ಥಾನ ಮಂಗಳೂರಿನಲ್ಲೂ ಮೋಂತಿ ಫೆಸ್ತ್ ಸಂಭ್ರಮ ಮುಗಿಲು ಮುಟ್ಟಿದೆ. ಇಂದು ಬೆಳಗಿನಿಂದಲೇ ಇಲ್ಲಿ ಚರ್ಚುಗಳಲ್ಲಿ ವಿಶೇಷ ಬಲಿ ಪೂಜೆ, ಪಾರ್ಥನೆಗಳು ನಡೆಯುತ್ತಿವೆ, ಮಾತೆ ಮರಿಯಮ್ಮಳ ಜನ್ಮ ದಿನ ಪ್ರಯುಕ್ತ ವಿಶೇಷ ಮೆರಣಿಗೆಗಳು ಮತ್ತು ಹೂವುಗಳ ಅರ್ಪಣಾ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ನಗರದ ಲೇಡಿ ಹಿಲ್ , ಮಿಲಾಗ್ರಿಸ್, ಬೆಂದೂರು ಸೇರಿದಂತೆ ಎಲ್ಲಾ ಚರ್ಚುಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

 ಈ ಹಬ್ಬದ ಅತ್ಯಂತ ಪ್ರಮುಖ ಆಚರಣೆ ಎಂದರೆ 'ನೊವೆಂ' ಅಂದರೆ ಹೊಸ ಬೆಳೆ. ಹೊಲದಲ್ಲಿ ಬೆಳೆದ ಭತ್ತದ ಹೊಸ ತೆನೆಗಳನ್ನು ದೇವಳಕ್ಕೆ  ತಂದು ಆಶೀರ್ವದಿಸಿ, ಪ್ರಸಾದವಾಗಿ ಮನೆಗೆ ಕೊಂಡೊಯ್ಯಲಾಗುತ್ತದೆ. ಬಳಿಕ ಕುಟುಂಬದ  ಎಲ್ಲಾರೂ ಸೇರಿ ಭೋಜನ ಸ್ವೀಕರಿಸುತ್ತಾರೆ.  ಜಾತಿ, ಮತಗಳ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವ ಈ ಹಬ್ಬ ಕರಾವಳಿಯ ಸೌಹಾರ್ದತೆಯ ಪ್ರತೀಕವಾಗಿದೆ.  

https://youtu.be/CTK22BkrScQ



📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!