BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mani accident ಮಾಣಿ: ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ನಡುವೆ ಭೀಕರ ಅಪಘಾತ - ಓರ್ವ ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ


ಬಂಟ್ವಾಳ, ಸೆ 28 : ಸೋಮವಾರ ಮುಂಜಾನೆ ಮಾಣಿಯ ಹಳೀರ ಫ್ಲೈ ಓವರ್ ಬಳಿ ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು, ಮೂವರು ಮಹಿಳೆಯರು ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ಮಡಿಕೇರಿ ನಿವಾಸಿ ನಫೀಸಾ (55) ಎಂದು ಗುರುತಿಸಲಾಗಿದೆ . ಅಪಘಾತದ ಸಮಯದಲ್ಲಿ ಚಾಲಕ ಸೇರಿದಂತೆ 5 ಜನರು ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು, ಇವರಲ್ಲಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಚಾಲಕ ಸೇರಿದ್ದಾರೆ. ಉಮ್ರಾ ತರಗತಿ ಮುಗಿಸಿ ಮಡಿಕೇರಿಗೆ ವಾಪಸ್ ಆಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಪುತ್ತೂರು, ಮಡಿಕೇರಿ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ಹಳೀರ ಫ್ಲೈ ಓವರ್‌ನ ಸರ್ವಿಸ್ ರಸ್ತೆಯಲ್ಲಿ ಸಂಚಾರಿ ದಟ್ಟಣೆ ಮತ್ತು ಅವೈಜ್ಞಾನಿಕ ವಿನ್ಯಾಸದಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೊರಗಿನಿಂದ ಬರುವ ವಾಹನ ಸವಾರರಿಗೆ ಈ ಸರ್ವಿಸ್ ರಸ್ತೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ, ಮಡಿಕೇರಿ ಮತ್ತು ಮೈಸೂರು ಕಡೆಗೆ ಹೋಗುವ ರಸ್ತೆಯ ಬಗ್ಗೆ ಗೊಂದಲ ಉಂಟಾಗಿ ಅಪಘಾತಗಳು ಹೆಚ್ಚಾಗುತ್ತಿವೆ . ಕಿರಿದಾದ ಪ್ರವೇಶ ರಸ್ತೆಗಳು ಮತ್ತು ಸೂಚನಾ ಫಲಕಗಳ ಕೊರತೆಯು ಈ ಗೊಂದಲಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಸ್ಥಳೀಯರು ದೂರಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!