BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಮಂಗಳೂರು: ಕ್ಯಾಂಪ್ಕೋ ವಾರ್ಷಿಕ ಮಹಾಸಭೆಯಲ್ಲಿ ದೇಶಾದ್ಯಂತ ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಬೃಹತ್ ಸಹಿ ಸಂಗ್ರಹ ಅಭಿಯಾನ



ಮಂಗಳೂರು, ಸೆಪ್ಟೆಂಬರ್ 12 : ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ, ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ 'ಕ್ಯಾಂಪ್ಕೋ' ಸಂಸ್ಥೆಯ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ವಿಶೇಷ ಸಹಿ ಸಂಗ್ರಹ ಅಭಿಯಾನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಮಂಗಳೂರಿನಲ್ಲಿ ನಡೆದ ಕೃಷಿಕರ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ 'ಕ್ಯಾಂಪ್ಕೋ' ವಾರ್ಷಿಕ ಮಹಾಸಭೆಯು ಈ ಬಾರಿಯ ಸಭೆಯಲ್ಲಿ ಕೇವಲ ವ್ಯವಹಾರಿಕ ವಿಷಯಗಳಷ್ಟೇ ಅಲ್ಲದೆ, ಪ್ರಮುಖ ಸಾಮಾಜಿಕ ಹಾಗೂ ಧಾರ್ಮಿಕ ಕಾಳಜಿಯ ವಿಷಯಕ್ಕೂ ಸಾಕ್ಷಿಯಾಯಿತು.

ಈ ಅಭಿಯಾನದಲ್ಲಿ ಆರೆಸ್ಸೆಸ್ ಪ್ರಮುಖ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಶ್ರೀಮತಿ ಕಮಲಾ ಪ್ರಭಾಕರ್ ಭಟ್, ರಾಜ್ಯದ ಮಾಜಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಸತೀಶ್ ಚಂದ್ರ ಅವರು ಉಪಸ್ಥಿತರಿದ್ದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸುಮಾರು 2500ಕ್ಕೂ ಅಧಿಕ ಗೋಭಕ್ತರು ಹಾಗೂ ಕೃಷಿಕರು ಅತ್ಯಂತ ಉತ್ಸಾಹದಿಂದ ಈ ಅಭಿಯಾನದಲ್ಲಿ ಭಾಗವಹಿಸಿ, ಗೋಹತ್ಯೆ ನಿಷೇಧದ ಪರವಾಗಿ ಸಹಿ ಹಾಕಿ ತಮ್ಮ ಬಲವಾದ ಬೆಂಬಲವನ್ನು ಸೂಚಿಸಿದರು.

ಗೋವಿನ ರಕ್ಷಣೆ ಮತ್ತು ಸಂರಕ್ಷಣೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕೃಷಿಕರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಈ ಅಭಿಯಾನವನ್ನು ನಡೆಸಲಾಯಿತು.

ಗೋಹತ್ಯೆ ನಿಷೇಧ ಕಾಯ್ದೆಯನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬ ಧ್ವನಿ ಈ ಮಹಾಸಭೆಯ ಮೂಲಕ ಮತ್ತಷ್ಟು ಗಟ್ಟಿಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಈ ಅಭಿಯಾನದ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!