BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ತುಳುನಾಡಿನ ಖ್ಯಾತ ನಟ ಅರವಿಂದ್ ಬೋಳಾರ್ ‘ಮುಸ್ಲಿಮರೇ ಮೊದಲು’ ಹೇಳಿಕೆ ವಿವಾದ: ಆಡಿಯೋ ವೈರಲ್, ಪರ-ವಿರೋಧ ಚರ್ಚೆ


ಮಂಗಳೂರು, ಸೆಪ್ಟೆಂಬರ್ 15 : ತುಳುನಾಡಿನ ಖ್ಯಾತ ಹಾಸ್ಯನಟ ಅರವಿಂದ್ ಬೋಳಾರ್ ಅವರ ಹೇಳಿಕೆಯೊಂದು ಸದ್ಯ ಕರಾವಳಿಯಲ್ಲಿ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಆಡಿದ ಮಾತಿನ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿವೆ.

ವೈರಲ್ ಆದ ಭಾಷಣದಲ್ಲಿ "ನನ್ನ ಹಾಸ್ಯ ಏನಿದ್ದರೂ ನನಗೆ ಮುಸ್ಲಿಮರೇ ಮೊದಲು" ಎಂದು ಬೋಳಾರ್ ಹೇಳಿದ್ದರು. ಇದು ಒಂದು ಸಮುದಾಯದ ಓಲೈಕೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಕುಂಬ್ಳೆಯ ಅಭಿಮಾನಿಯೊಬ್ಬರು ನಟನಿಗೆ ನೇರವಾಗಿ ಫೋನ್ ಮಾಡಿ, "ಎಲ್ಲಾ ಧರ್ಮಗಳು ನಮಗೆ ಒಂದೇ ಆಗಿರಬೇಕು, ಈ ಹೇಳಿಕೆಯಿಂದ ನಮಗೆ ನೋವಾಗಿದೆ, ನೀವು ಕ್ಷಮೆ ಕೇಳಬೇಕು" ಎಂದು ತರಾಟೆಗೆ ತೆಗೆದುಕೊಂಡಿರುವ ಆಡಿಯೋ ಕೂಡ ಈಗ ವೈರಲ್ ಆಗಿದೆ.

ಕಲಾವಿದನೊಬ್ಬನ ಈ ಹೇಳಿಕೆ ಬಗ್ಗೆ ಕರಾವಳಿಯಲ್ಲಿ ಪರ ಹಾಗೂ ವಿರೋಧವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.ಕಲಾವಿದನೊಬ್ಬ ಬೆಳೆಯಲು ಎಲ್ಲ ಧರ್ಮದ ಅಭಿಮಾನಿಗಳು ಕಾರಣ. ಹೀಗಿರುವಾಗ ನಿರ್ದಿಷ್ಟವಾಗಿ ಒಂದು ಸಮುದಾಯಕ್ಕೆ ಆದ್ಯತೆ ನೀಡುವಂತೆ ಮಾತನಾಡುವುದು ಸರಿಯಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲ ಅಭಿಮಾನಿಗಳು ನಟ ಅರವಿಂದ್ ಬೋಳಾರ್‌ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಹಾಕುತ್ತಿದ್ದಾರೆ. ಇನ್ನೊಂದೆಡೆ, ಇದನ್ನು ಸೌಹಾರ್ದತೆಯ ಮಾತುಗಳಾಗಿ ಧನಾತ್ಮಕವಾಗಿ ನೋಡಬೇಕೇ ಹೊರತು ವಿವಾದ ಮಾಡಬಾರದು ಎಂದು ಹಲವರು ನಟನ ಪರವಾಗಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!