ಮಂಗಳೂರು, ಸೆ23: ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾದಿಂದ ಮೋದಿಯವರ 76 ನೇ ಜನ್ಮದಿನದ ಪ್ರಯುಕ್ತ ಸರಕಾರಿ ವೈನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ ಮತ್ತು ಅವರೊಂದಿಗೆ ಉಳಕೊಳ್ಳಲು ಬಂದಂತಹಾ ಜನರಿಗೆ ಆಹಾರವನ್ನು ಕೊಡುವ ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲರವರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ದ.ಕ ಜಿಲ್ಲೆಯ ಅಲ್ಪಸಂಖ್ಯಾತ ಮೋರ್ಚಾ ಪ್ರತೀ ಸಂದರ್ಭದಲ್ಲೂ ಜಿಲ್ಲೆಯ ಬಿಜೆಪಿ ಗೆಲುವಿಗೆ ಶ್ರಮಿಸುವ ಮೂಲಕ ಇಂತಹಾ ಅನೇಕ ಜನಪರ ಕಾರ್ಯವನ್ನು ಮಾಡುತ್ತಿದ್ದು ,ಮೋದೀಜಿಯ ಹುಟ್ಟುಹಬ್ಬವನ್ನು ಬಡವರ ಒಪ್ಪೊತ್ತಿನ ಆಹಾರ ನೀಡುವ ಮೂಲಕ ರೋಗಿಗಳ ಹೃದಯ ಗೆದ್ದಿದ್ದಾರೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಅಲ್ಪಸಂಖ್ಯಾತ ಮೋರ್ಚಾ ದ.ಕ ಜಿಲ್ಲಾ ಅದ್ಯಕ್ಷರಾದ ಶಾನವಾಜ಼್ ಹುಸೈನ್ ರವರು ಮಾತನಾಡಿ ಸತತ 12 ವರ್ಷ ಈ ದೇಶದ ಪ್ರಧಾನಮಂತ್ರಿ ಯಾಗಿ ಈ ದೇಶವನ್ನು ಅತ್ಯುತ್ತಮ ರೀತಿಯ ಆಡಳಿತ ನಡೆಸಿ ಮುನ್ನಡೆಸಿದ ಮೋದೀಜಿಯವರ ಹುಟ್ಟು ಹಬ್ಬ ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಈ ನಿಟ್ಟಿನಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಮೋರ್ಚಾ ದಿಂದ ರೋಗಿಗಳಿಗೆ ಆಹಾರ ಕೊಡುವ ಕಾರ್ಯವನ್ನು ನಡೆಸುತ್ತಿದ್ದೆವೆ ಎಂದರು.
ಯುವ ಮೋರ್ಚಾ ಜಿಲ್ಲಾ ಅದ್ಯಕ್ಷರಾದ. ನಂದನ್ ಮಲ್ಯ ರವರು ಮಾತನಾಡಿ ಗುಜರಾತ್ ನ ಮುಖ್ಯಮಂತ್ರಿ ಆಗಿ ದೇಶದ ಪ್ರಧಾನಿಯಾಗಿ ಕಳೆದ 25 ವರ್ಷಗಳಿಂದ ದೇಶ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟಿರುವ ಜನಸೇವಕ ನಮ್ಮ ಪ್ರಧಾನಿ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ದಕ್ಷಿಣ ಮಂಡಳದ ಅಧ್ಯಕ್ಷರಾಗಿರುವ ಶ್ರೀಯುತ ರಮೇಶ್ ಕಂಡೆಟ್ಟು ಉಪಾಧ್ಯಕ್ಷರುಗಳಾದ ರಮೇಶ್ ಹೆಗ್ಡೆ ಲಲ್ಲೇಶ್ ,ಹಾಗೂ ಪ್ರವೀಣ್ ಉಪಸ್ಥಿತರಿದ್ದರು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ ಜೆಸ್ಸೆಲ್ ಡಿಸೋಜ,ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷರಾದ ,ರಫೀಕ್ ದರ್ಬೆ , ಫ್ರೆಡ್ರಿಕ್ ಪೌಲ್,ಮಹಮ್ಮದ್ ಶಾಕೀರ್ ಕಣ್ಣೂರ್, ಸುಪ್ರಿಯಕ್ರಿಸ್ತಬೆಲ್ ,ಜೊಯಿಲೆಸ್ ಡಿ.ಸೋಜಾ, ಅಶ್ರಫ್ ಹರೇಕಳ, ಹರ್ಷದ್ ಪೋಪಿ,ಸಿದ್ದೀಕ್ ತಲಪಾಡಿ,ಎಂ.ಸಲೀಂ ಬೆಂಗ್ರೆ,A. R. ಬೊಲರ್,ರಹಮತ ಅಲಿ,ಟೀನಾ ಪಿರೇರ,ಹ್ಯಾರೀಸ್ ಸುರಿಬೈಲ್, ಫ್ರೆಡ್ರಿಕ್, ನೆಲ್ಸನ್, ದೀಪಕ್ ಡಿ ಸೋಜಾ ಹಮೀದ್ ಕುಲೂರ್, ಸಾದಿಕ್,ಸಾಲಿ,ಅಬ್ದುಲ್ ಖಾದರ್, ಸುಶೀಲ್ ಮತ್ತಿತರರು ಉಪಸ್ತಿತರಿದ್ದರು.
ಎಂ ಫ್ರೆಂಡ್ಸ್ ಮಾಜಿ ಅಧ್ಯಕ್ಷರಗಳಾದ ಹನೀಫ್ ಹಾಜಿ, ರಶೀದ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಆರಿಫ್ ಪಡುಬಿದ್ರೆ, ಪದಾಧಿಕಾರಿಗಳಾದ ಇಸಾಕ್ ಶೇಕ್ ವಕೀಲರು ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಜಿಲ್ಲೆಯ ಅಲ್ಪಸಂಖ್ಯಾತರ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎ.ಕೆ ಜಮಾಲ್ ಸ್ವಾಗತಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ಮಹಮ್ಮದ್ ಅಸ್ಗರ್, ವಕೀಲರು ಕಾರ್ಯಕ್ರಮವನ್ನು ನಿರೂಪಿಸಿದರು.
.jpeg)
