BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಮಂಗಳೂರು ಸಚಿವ ಸಂಪುಟ ಸಭೆ: ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ ಎಸ್‌ಡಿಪಿಐ ಕಾರ್ಯಕರ್ತರು ವಶಕ್ಕೆ



ಮಂಗಳೂರು,ಸೆ18 : ರಹ್ಮಾನ್ ಕೊಳತ್ತಮಜಲು ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಗಲು ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿ, ನಗರದ ಸ್ಟೇಟ್ ಬ್ಯಾಂಕ್ ಬಳಿಯ ರಾವ್ & ರಾವ್ ವೃತ್ತದಲ್ಲಿ ಶುಕ್ರವಾರ ಮುಖ್ಯಮಂತ್ರಿಗಳ ಬೆಂಗಾವಲು ವಾಹನ ಸಾಗುವ ಮಾರ್ಗದಲ್ಲಿ ಎಸ್‌ಡಿಪಿಐ ದಿಢೀರ್ ಕರಿಪತಾಕೆ ಪ್ರತಿಭಟನೆ ನಡೆಸಿತು.



ಮಂಗಳೂರು ನಗರದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಮಿಸಿದ ಮುಖ್ಯಮಂತ್ರಿಗಳಿಗೆ ಇಂದು ಬೆಳಗ್ಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಪುಟ ಸಭೆಗೆ ಮುಖ್ಯಮಂತ್ರಿಗಳು ಹಾಗೂ ಸಚಿವರು ತೆರಳುತ್ತಿದ್ದ ಮಾರ್ಗದಲ್ಲೇ ಏಕಾಏಕಿ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು, ಸರ್ಕಾರದ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಪ್ಪು ಬಾವುಟ ಬೀಸಲು ಮುಂದಾದರು.

ಸ್ಥಳದಲ್ಲೇ ಮುಖಂಡರ ವಶ, ಬಸ್‌ನೊಳಗೆ ಆಕ್ರೋಶದ ಕೂಗು:

ಮುಖ್ಯಮಂತ್ರಿಗಳ ಭದ್ರತಾ ದೃಷ್ಟಿಯಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಪ್ರತಿಭಟನಾಕಾರರನ್ನು ಸುತ್ತುವರಿದು ವಶಕ್ಕೆ ಪಡೆದರು. ಎಸ್‌ಡಿಪಿಐ ಮುಖಂಡರಾದ ಅನ್ವರ್ ಸಾದತ್, ರಿಯಾಜ್ ಕಡಂಬು, ಮುನೀಶ್ ಅಲಿ ಸೇರಿದಂತೆ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ರಸ್ತೆಯಲ್ಲೇ ತಡೆದು ಪೊಲೀಸ್ ಬಸ್ ಹತ್ತಿಸಿ ಕರೆದೊಯ್ದರು. ಪೊಲೀಸ್ ವಾಹನದಲ್ಲಿ ಕರೆದೊಯ್ಯುವ ವೇಳೆಯೂ ಮುಖಂಡರು ಬಸ್‌ನ ಕಿಟಕಿಗಳ ಮೂಲಕ ಕೈಬೀಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆ ಕೂಗಿದರು.

ರಹ್ಮಾನ್ ಕೊಳತ್ತಮಜಲು ಹತ್ಯೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸರಿಯಾಗಿ ವಾದ ಮಂಡಿಸಿಲ್ಲ ಹಾಗೂ ಪ್ರಕರಣವನ್ನು ಗೃಹ ಇಲಾಖೆ ಅತ್ಯಂತ ನಿರ್ಲಕ್ಷ್ಯದಿಂದ ನಿರ್ವಹಿಸಿದೆ. ಸರ್ಕಾರದ ಈ ವೈಫಲ್ಯದಿಂದಾಗಿಯೇ ಎಲ್ಲ ಕೊಲೆ ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರೆಯುವಂತಾಗಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ಎಚ್ಚರಿಕೆ ರವಾನಿಸಲು ಸಂಪುಟ ಸಭೆಯ ಸಂದರ್ಭದಲ್ಲೇ ಈ ಕರಿಪತಾಕೆ ಪ್ರದರ್ಶನ ನಡೆಸಲಾಯಿತು ಎಂದು ಎಸ್‌ಡಿಪಿಐ ಮುಖಂಡ ಶಾಕೀರ್ ತಿಳಿಸಿದ್ದಾರೆ.



📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!