BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಮಂಗಳೂರಿನ ಪಿವಿಎಸ್‌ ಬಳಿ ಬೃಹತ್ ಮರ ಧರೆಗೆ..! ಆಟೋ ರಿಕ್ಷಾ , ಇ ಸ್ಕೂಟರ್ ಡ್ಯಾಮೇಜ್..!


ಮಂಗಳೂರು,ಸೆಪ್ಟೆಂಬರ್ 07 : ಮಂಗಳೂರು ನಗರದ ಜನನಿಬಿಡ ಪ್ರದೇಶವಾದ ಕರಂಗಲ್ಪಾಡಿಯ ಬಿಜೆಪಿ ಕಚೇರಿ ಬಳಿ ಕೈಬರ್ ಪಾಸ್ ಲೇನ್‌ನಲ್ಲಿ ಸೋಮವಾರ ಸಂಜೆ ಬೃಹತ್ ಗಾತ್ರದ 'ಮೇ ಫ್ಲಾವರ್' (Mayflower) ಮರವೊಂದು ಏಕಾಏಕಿ ಮುರಿದು ಬಿದ್ದಿದೆ.

 ಮರವು ನೇರವಾಗಿ ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ, ಪ್ರಮುಖ ರಸ್ತೆಯಾದ ಪಿ.ವಿ.ಎಸ್ -ಕೈಬರ್ ಪಾಸ್-  ಕೋರ್ಟ್ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಯಿತು. 


ಅದೃಷ್ಟವಶಾತ್ ಘಟನೆ ಸಂಭವಿಸಿದ ಸಮಯದಲ್ಲಿ ಆ ರಸ್ತೆಯಲ್ಲಿ ಯಾವುದೇ ವಾಹನಗಳು ಅಥವಾ ಸಾರ್ವಜನಿಕರು ಇಲ್ಲದ ಕಾರಣ ದೊಡ್ಡ ಪ್ರಾಣಹಾನಿ ಅಥವಾ ಅಚಾತುರ್ಯ ತಪ್ಪಿದೆ.  ಆದ್ರೆ ಅಲದಲೇ ಪಾರ್ಕ್ ಮಾಡಲಾಗಿದ್ದ ಆಟೋ ರಿಕ್ಷಾ ಹಾಗೂ ಇ - ಸ್ಕೂಟರ್ ಮರ ಬಿದ್ದ ಪರಿಣಾಮ ಹಾನಿಗೊಂಡಿದೆ.  ವಿದ್ಯುತ್ ಕಂಬವೊಂದು  ಹಾನಿಗೀಡಾಗಿದೆ. ಸಂಜೆ ವೇಳೆ ಸಂಚಾರ ದಟ್ಟಣೆ ಹೆಚ್ಚಿರುವ ಈ ಮಾರ್ಗದಲ್ಲಿ ಹೆಚ್ಚಿನ ಅನಾಹುತ ತಪ್ಪಿರುವುದು ಸಾರ್ವಜನಿಕರಲ್ಲಿ ನಿರಾಳ ಮೂಡಿಸಿದೆ. 

 ಮರ ಬಿದ್ದ ತಕ್ಷಣ ಎಚ್ಚೆತ್ತ ಸ್ಥಳೀಯ ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರದ ಕೊಂಬೆಗಳನ್ನು ಕತ್ತರಿಸಿ ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಮರ ಬಿದ್ದ ಕಾರಣ ಈ ಮಾರ್ಗದಲ್ಲಿ ಸ್ವಲ್ಪ ಸಮಯ ಸಂಚಾರ ವ್ಯತ್ಯಯ ಉಂಟಾಗಿದ್ದು, ಪೊಲೀಸರು ವಾಹನಗಳನ್ನು ಪರ್ಯಾಯ ರಸ್ತೆಗಳ ಮೂಲಕ ತಿರುಗಿಸುತ್ತಿದ್ದಾರೆ.

ಪದ್ಮಶ್ರೀ ಹರೇಕಳ ಹಾಜಬ್ಬಗೆ ಚುನಾವಣಾ ಆಯೋಗದಿಂದ ನೋಟಿಸ್..!


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!