BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಪಣಂಬೂರು ಬೀಚಿಗೆ ಬಂದ ಯುವಕ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲು..!


ಮಂಗಳೂರು, ಸೆಪ್ಟೆಂಬರ್ 15 : ಪ್ರವಾಸಕ್ಕೆಂದು ಬಂದಿದ್ದ ಯುವಕನೊಬ್ಬ ಸಮುದ್ರದಲ್ಲಿ ಈಜಲು ಇಳಿದು, ಬೃಹತ್ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರಪಾಲಾದ ಘಟನೆ ಸೋಮವಾರ  ಪಣಂಬೂರು ಬೀಚ್‌ನಲ್ಲಿ ಸಂಭವಿಸಿದೆ.

ವೈಬೊಯಿನ ನಾಗಬಾಬು (24) ಸಮುದ್ರಪಾಲಾದ ಯುವಕ. ಸೋಮವಾರ  ಬೆಳಿಗ್ಗೆ ನಾಗಬಾಬು ಮತ್ತು ಸ್ನೇಹಿತರು ಬೆಮಗಳೂರಿನಿಂದ ಪಣಂಬೂರು ಬೀಚ್‌ಗೆ ಪ್ರವಾಸಕ್ಕಾಗಿ ಬಂದಿದ್ದರು. ಈ ವೇಳೆ   ನಾಗಬಾಬು ತನಗೆ ಈಜು ಬರುತ್ತದೆ ಎಂದು ಹೇಳಿ ಸಮುದ್ರದ ನೀರಿಗೆ ಇಳಿದಿದ್ದ ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ಭಾರಿ ಅಲೆ ಮತ್ತು ನೀರಿನ ಸೆಳೆತಕ್ಕೆ ಸಿಲುಕಿದ ನಾಗಬಾಬು ಸಮುದ್ರಪಾಲಾಗಿದ್ದಾನೆ. ಆತನ ಜೊತೆಗಿದ್ದ ಸ್ನೇಹಿತರು ಮತ್ತು ಲೈಫ್ ಗಾರ್ಡ್‌ಗಳ ಸಹಾಯ ಪಡೆದು ರಕ್ಷಿಸಲು ಕೂಡಲೇ ಪ್ರಯತ್ನಿಸಿದರೂ, ಅಲೆಗಳ ರಭಸದಿಂದಾಗಿ ಸಾಧ್ಯವಾಗಿಲ್ಲ ಎನ್ನಲಾಗಿದೆ.  ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!