BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಹಿರಿಯ ನ್ಯಾಯವಾದಿ, ನೋಟರಿ, ಜೈನ್ ಸೊಸೈಟಿಯ ಮಾಜಿ ಅಧ್ಯಕ್ಷ ಎಲ್.ಡಿ. ಬಳ್ಳಾಲ್ ವಿಧಿವಶ


ಮಂಗಳೂರು, ಸೆ. 25: ನಗರದ ಹಿರಿಯ ನ್ಯಾಯವಾದಿಗಳು ಹಾಗೂ ನೋಟರಿಯಾಗಿದ್ದ ಶ್ರೀಯುತ ಎಲ್. ಡಿ. ಬಳ್ಳಾಲ್ ಅವರು ಇಂದು (ಶುಕ್ರವಾರ) ನಿಧನರಾಗಿದ್ದಾರೆ.  ಮಂಗಳೂರಿನ ಪ್ರಸಿದ್ಧ ಸಿವಿಲ್ ನ್ಯಾಯವಾದಿಗಳಾಗಿದ್ದು, ಧಾರ್ಮಿಕ-ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು.  ಕಾನೂನು ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದ ಎಲ್. ಡಿ. ಬಳ್ಳಾಲ್  ಮಂಗಳೂರು ಜೈನ್ ಸೊಸೈಟಿಯ ಅಧ್ಯಕ್ಷರಾಗಿರೂ ಕಾರ್ಯ ನಿರ್ವಹಿಸಿದ್ದರು. ಭೂ ಕಾಯ್ದೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮತ್ತು ವಕೀಲರಿಗೆ ಉಪಯುಕ್ತವಾಗುವ "ಎ ಗೈಡ್ ಟು ಲ್ಯಾಂಡ್ ಲೆಜಿಸ್ಲೇಷನ್ಸ್" (A Guide to Land Legislations) ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವನ್ನು 2008ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಕೆ. ಎಲ್. ಮಂಜುನಾಥ್ ಅವರು ಬಿಡುಗಡೆ ಮಾಡಿದ್ದರು. ಅವರ ಅಗಲಿಕೆಗೆ ಕಾನೂನು ವಲಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಲಾಗಿದೆ.

ಮೃತರ ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ಅವರ ಸ್ವಗೃಹವಾದ ಪವಿತ್ರ ಎಯ್ಯಾಡಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಂದು ಸಂಜೆ 4:30 ಗಂಟೆಗೆ ಮೂಡಬಿದ್ರೆಯ ಲಾಡಿಗುತ್ತು ಮನೆಯಲ್ಲಿ ಅಂತ್ಯಸಂಸ್ಕಾರವು ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!