BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru; Online-purchased eggs found with worms; Officials seal 'Blinkit' store in Falnir..! ಮಂಗಳೂರು: ಆನ್‌ಲೈನ್‌ನಲ್ಲಿ ಖರೀದಿಸಿದ ಮೊಟ್ಟೆಯಲ್ಲಿ ಹುಳುಗಳು ಪತ್ತೆ; ಫಳ್ನೀರ್‌ನಲ್ಲಿರುವ 'ಬ್ಲಿಂಕ್‌ಇಟ್' ಮಳಿಗೆ ಸೀಲ್ ಮಾಡಿದ ಅಧಿಕಾರಿಗಳು..!


ಮಂಗಳೂರು, ಸೆಪ್ಟೆಂಬರ್ 03 : ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಖರೀದಿಸಿದ ಮೊಟ್ಟೆಗಳು ಒಡೆದುಹೋಗಿದ್ದು, ಅದರಲ್ಲಿ ಹುಳುಗಳು ಕಂಡುಬಂದಿರುವ ಕುರಿತು ಗ್ರಾಹಕರೊಬ್ಬರು ಗೌರವಾನ್ವಿತ ಆರೋಗ್ಯ ಸಚಿವರಿಗೆ ನೇರವಾಗಿ ದೂರು ನೀಡಿದ್ದರು. ಈ ಗಂಭೀರ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಮಂಗಳೂರು ನಗರದ ಫಳ್ನೀರ್ (Falnir) ಪ್ರದೇಶದ ಫಳ್ನೀರ್ ಸ್ಕ್ವೇರ್' (Falnir Square) ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ 'ಬ್ಲಿಂಕ್‌ಇಟ್' (Blinkit) ಆನ್‌ಲೈನ್ ಮಾರಾಟ ಮಳಿಗೆಯ ಮೇಲೆ ಅಧಿಕಾರಿಗಳು  ಡಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದರು.

ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ಒಡೆದ ಮೊಟ್ಟೆಗಳು ಇರುವ ಪ್ಯಾಕೆಟ್‌ಗಳು ಮಳಿಗೆಯಲ್ಲಿ ಪತ್ತೆಯಾಗಿವೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಆ ಪ್ಯಾಕೆಟ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.



ಸಂಗ್ರಹಣ ಕೋಣೆಗೆ ಸೀಲ್ ಹಾಗೂ ನೋಟಿಸ್:

ಆಹಾರ ಸಾಮಗ್ರಿಗಳ ಸಂಗ್ರಹಣಾಗಾರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ, ಮಳಿಗೆಯ ಆಹಾರ ಸಂಗ್ರಹಣಾ ಕೋಣೆಯನ್ನು ತಾತ್ಕಾಲಿಕವಾಗಿ ಮುಚ್ಚಿಸಿ ಸೀಲ್ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದರೊಂದಿಗೆ, ನಿಯಮ ಉಲ್ಲಂಘನೆ ಮತ್ತು ಆಹಾರ ಸುರಕ್ಷತಾ ಲೋಪದ ಕುರಿತು 'ಫಳ್ನೀರ್ ಸ್ಕ್ವೇರ್' ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ 'ಬ್ಲಿಂಕ್‌ಇಟ್' ಆನ್‌ಲೈನ್ ಮಾರಾಟ ಸಂಸ್ಥೆಗೆ  ಅಧಿಕೃತ ನೋಟಿಸ್ ಜಾರಿಗೊಳಿಸಿ, ಈ ಬಗ್ಗೆ ಸೂಕ್ತ ಸಮಜಾಯಿಸಿ ನೀಡುವಂತೆ ಸೂಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

https://youtu.be/vQBj4oyK_TU

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!