BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru CPIM ಕರಾವಳಿ ಅಭಿವೃದ್ಧಿ ನೀತಿ ವಿರೋಧಿಸಿ ಸಿಪಿಎಂ ಬೃಹತ್ ಪ್ರತಿಭಟನೆ: ಪ್ರಜಾಸೌಧಕ್ಕೆ ಮರವಣಿಗೆ ಹೊರಟ ನಾಯಕರು, ಕಾರ್ಯಕರ್ತರು ಪೊಲೀಸ್ ವಶಕ್ಕೆ


ಮಂಗಳೂರು, ಸೆ. 18  ಕರಾವಳಿ ಕರ್ನಾಟಕದ ಅಭಿವೃದ್ಧಿ ನೀತಿಯನ್ನು ಜನಪರವಾಗಿ ರೂಪಿಸಲು ಒತ್ತಾಯಿಸಿ ಸಿಪಿಐಎಂ ವತಿಯಿಂದ ಅಗ್ರಹ ಪತ್ರ ಸಲ್ಲಿಕೆ ಮತ್ತು ಪ್ರತಿಭಟನಾ ಮೆರವಣಿಗೆ ಮಂಗಳೂರಿನಲ್ಲಿ ನಡೆಯಿತು. ಆದ್ರೆ  ಮೆರವಣಿಗೆಯನ್ನು ಅರ್ಧದಲ್ಲೇ ತಡೆದ ಪೊಲೀಸರು ಮುಖಂಡರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿ ನೀತಿಯನ್ನು ಜನಪರ ಹಾಗೂ ಜನಸ್ನೇಹಿಯಾಗಿ ರೂಪಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂ (CPI(M)) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿಗಳ ವತಿಯಿಂದ ನಗರದ  ಬೆಂದೂರು ವೆಲ್ ಜಂಕ್ಷನ್‌ನಿಂದ  ಸಚಿವ ಸಂಪುಟ ಸಭೆ ನಡೆಯಲಿರುವ ಪಡೀಲ್ ಪ್ರಜಾಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಸಲಾಗಿತ್ತು. ಆದ್ರೆ ಪ್ರತಿಭಟನಾ ಜಾಥಾವನ್ನು ಖಾಕಿ ಪಡೆ ಅರ್ಧದಲ್ಲೇ ತಡೆ ಹಿಡಿದು ಕಾರ್ಯಕರ್ತರನ್ನು ಬಂಧಿಸಲು ಮುಂದಾದರು.  ಈ ಸಂದರ್ಭ ರಸ್ತೆಯಲ್ಲೇ ಕುಳಿತುಕೊಂಡ ಕಾರ್ಯಕರ್ತರು ಮತ್ತು ಮುಖಂಡರುಗಳನ್ನು ಪೊಲೀಸರು ಎತ್ತಿಕೊಂಡು ಹೋಗಿ ಪೋಲಿಸ್ ವಾಹನಗಳಿಗೆ ತುಂಬಿಸಿದರು.  ಇದಕ್ಕೂ ಮುನ್ನ ಸಿಪಿಎಂ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ದ.ಕ. ಜಿಲ್ಲಾ ಕಾರ್ಯ ದರ್ಶಿ ಮುನೀರ್ ಕಾಟಿಪಳ್ಳ , ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ಕಾರ್ಪೊರೇಟ್ ಪರವಾದ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಪಿಪಿಪಿ ನೀತಿಯನ್ನು ಕರಾವಳಿಗೆ ಹೇರುವುದನ್ನು ಕೈಬಿಡಬೇಕು.   ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು.  ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ವಸತಿ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ಖಾತರಿಪಡಿಸುವ ನೀತಿ ರೂಪಿಸಬೇಕು.   ಸಂಪ್ರದಾಯಿಕ ಕಸುಬುಗಳ ರಕ್ಷಣೆ: ಕರಾವಳಿ ಜಿಲ್ಲೆಗಳ ಜ್ವಲಂತ ಸಮಸ್ಯೆಗಳಾದ ಮೀನುಗಾರಿಕೆ, ಅಡಿಕೆ ಹಾಗೂ ರಬ್ಬರ್ ಆಧಾರಿತ ಕೈಗಾರಿಕೆಗಳು ಮತ್ತು ಕೃಷಿಯನ್ನು ಅಭಿವೃದ್ಧಿಪಡಿಸಬೇಕು. ಸ್ಥಳೀಯರ ಜೀವನೋಪಾದಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!