BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಸಂಘನಿಕೇತನ 79ನೇ ವರ್ಷದ ಗಣೇಶೋತ್ಸವಕ್ಕೆ ಕ್ಷಣಗಣನೆ : ವೈಭವದ ಮೃತ್ತಿಕಾ ವಿಗ್ರಹ ಮೆರವಣಿಗೆ

ಚಿತ್ರ : ಮಂಜು ನೀರೇಶ್ವಾಲ್ಯ

ಮಂಗಳೂರು, ಸೆಪ್ಟೆಂಬರ್ 13 : ಮಂಗಳೂರು ನಗರದ ಪ್ರತಾಪ ನಗರದಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ 79ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಭಾನುವಾರ ಶ್ರೀ ದೇವರ ಮೃತ್ತಿಕಾ (ಮಣ್ಣಿನ) ವಿಗ್ರಹದ ವೈಭವದ ಮೆರವಣಿಗೆಯನ್ನು ನಡೆಯಿತು.

ಸಂಘನಿಕೇತನದಲ್ಲಿ ಐದು ದಿನಗಳ ಪರ್ಯಂತ ಗಣೇಶೋತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು, ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ದಿವಂಗತ ಮೋಹನ್ ರಾವ್ ಅವರ ಮನೆಯಲ್ಲಿ ಮೃತ್ತಿಕಾ ಮೂರ್ತಿ ರಚನೆಗೊಂಡಿದ್ದು, ಅಲ್ಲಿಂದ ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿಯ ಸ್ವಯಂಸೇವಕರು ಭುಜ ಸೇವೆಯ ಮೂಲಕ ಮೂರ್ತಿಯನ್ನು ಮೆರವಣಿಗೆಯ ಮುಖೇನ ಸಂಘನಿಕೇತನಕ್ಕೆ ತಂದರು.

ಈ ಮೆರವಣಿಗೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಮಹಾನಗರ ಮಾನ್ಯ ಸಂಘಚಾಲಕ್ ಡಾ. ಸತೀಶ್ ರಾವ್ ಹಾಗೂ ಆರ್‌ಎಸ್‌ಎಸ್ ವಿಭಾಗ ಪ್ರಚಾರಕರಾದ ಸುರೇಶ್ ಜಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್‌ನ ಉಪಾಧ್ಯಕ್ಷ ಕೆ. ರಘುವೀರ್ ಕಾಮತ್, ಕಾರ್ಯದರ್ಶಿ ಗಜಾನನ ಪೈ, ಸೇವಾ ಭಾರತಿ ಪ್ರಮುಖ ವಿನೋದ್ ಶೆಣೈ, ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಆನಂದ ಪಾಂಗಳ, ಕೆ. ಪದ್ಮನಾಭ, ಸ್ಮಿತಾ ಎಂ, ಪ್ರಧಾನ ಕಾರ್ಯದರ್ಶಿ ಜಿ. ಸುರೇಶ್ ವಿ. ಕಾಮತ್, ಕೋಶಾಧಿಕಾರಿ ರಂಗನಾಥ್ ಹಾಗೂ ಜೊತೆ ಕಾರ್ಯದರ್ಶಿಗಳಾದ ನಂದನ್ ಮಲ್ಯ, ಜೀವನರಾಜ್ ಶೆಣೈ, ಗಣೇಶ್ ಪ್ರಸಾದ್ ಮತ್ತು ಪೂರ್ಣಿಮಾ ಶೆಣೈ ಮತ್ತಿತರರು ಉಪಸ್ಥಿತರಿದ್ದರು.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!