BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮದಿನ: ಬಿಕರ್ನಕಟ್ಟೆ ಬಾಲ ಯೇಸು ಮಂದಿರದಲ್ಲಿ ವಿಶೇಷ ಪ್ರಾರ್ಥನೆ



ಮಂಗಳೂರು, ಸೆಪ್ಟೆಂಬರ್ 17 : ದೇಶದ ಪ್ರಧಾನಿ  ನರೇಂದ್ರ ಮೋದಿಯವರ 76ನೇ ಜನ್ಮದಿನದ ಪ್ರಯುಕ್ತ, ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಬಾಲ ಯೇಸು (Infant Jesus) ಮಂದಿರದಲ್ಲಿ ಕ್ರೈಸ್ತ ಬಾಂಧವರ ಸಮ್ಮುಖದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವಿಶೇಷ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿಯವರ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಶಕ್ತಿ ಮತ್ತು ದೈವಿಕ ಮಾರ್ಗದರ್ಶನಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಅವರ ದೀರ್ಘಾಯುಷ್ಯದ ಸಂಕೇತವಾಗಿ ಮಂದಿರದ ಆವರಣದಲ್ಲಿ 76 ಮೇಣದಬತ್ತಿಗಳನ್ನು ಬೆಳಗಿಸಲಾಯಿತು.

ಅಭಿವೃದ್ಧಿಪರ ರಾಷ್ಟ್ರ ನಿರ್ಮಾಣ ಮತ್ತು ಜನಕಲ್ಯಾಣದ ಯೋಜನೆಗಳನ್ನು ಇನ್ನಷ್ಟು ಸಮರ್ಥವಾಗಿ ಮುನ್ನಡೆಸಲು ಅವರಿಗೆ ಭಗವಂತನ ಅನುಗ್ರಹ ಸದಾ ಲಭಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.

ಈ ಪ್ರಾರ್ಥನಾ ಸಭೆಯಲ್ಲಿ ಜೆಸಲ್ ಡಿಸೋಜಾ, ಗ್ಲೆನ್ ವಿಶಾಲ್ ಡಿಸಿಲ್ವಾ, ಜೋಯ್ಸನ್ ಡಿಸೋಜಾ, ಟೀನಾ ಪಿರೇರಾ, ಉದಯ್ ಡಿಸೋಜಾ, ಅಜಿತ್ ಡಿಸಿಲ್ವಾ, ಸುನೀಲ್ ರೊಡ್ರಿಗಸ್ ಹಾಗೂ ರೋಶನ್ ರೆನೊಲ್ಡ್ ಸೇರಿದಂತೆ ಹಲವಾರು ಗಣ್ಯರು ಮತ್ತು ಕ್ರೈಸ್ತ ಸಮುದಾಯದ ಸದಸ್ಯರು ಪಾಲ್ಗೊಂಡಿದ್ದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!