ಮಂಗಳೂರು, ಸೆಪ್ಟೆಂಬರ್ 15: ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ ನಡೆಯುತ್ತಿರುವುದು ಜನತೆಯಲ್ಲಿ ನಿರೀಕ್ಷೆಯನ್ನು ಮೂಡಿಸಿದೆ. ಆದರೆ ಕಾರ್ಪೊರೇಟ್ ಪರ ನೀತಿಗಳು ಮುಂದುವರಿದರೆ ಈ ಸಭೆ ಕೇವಲ ಒಂದು ರಾಜಕೀಯ ಗಿಮಿಕ್ ಆಗಿ ಮುಗಿದುಹೋಗಲಿದೆ ಎಂದು ಸಿಪಿಐಎಂ ಕರಾವಳಿ ಜಿಲ್ಲೆಯ ಜನಸಮುದಾಯಗಳ ಪರವಾಗಿ ಎಚ್ಚರಿಸಿದೆ.
ಕರಾವಳಿ ಜಿಲ್ಲೆಗಳು ಉದ್ಯಮಶೀಲ ಮತ್ತು ವಿದ್ಯಾವಂತ ಜನರ ನೆಲೆಯಾಗಿದ್ದರೂ, ಇಲ್ಲಿನ ಯುವಜನರು ಉದ್ಯೋಗಾವಕಾಶಗಳ ಕೊರತೆಯಿಂದ ಹೊರರಾಜ್ಯ ಹಾಗೂ ವಿದೇಶಗಳಿಗೆ ವಲಸೆ ಹೋಗುವಂತಾಗಿದೆ. ಮತ್ತೊಂದೆಡೆ ಹೊರಗಿನವರ ಒಳವಲಾಸೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಸಾಮಾಜಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಸರಕಾರ ರೂಪಿಸುತ್ತಿರುವ ಪಿ.ಪಿ.ಪಿ (PPP) ಮಾದರಿಯು ಕಾರ್ಪೊರೇಟ್ ಬಂಡವಾಳದಾರರಿಗೆ ಲಾಭ ತರುವಂತಿದ್ದು, ಸ್ಥಳೀಯರಿಗೆ ಮತ್ತು ಜನಸಾಮಾನ್ಯರಿಗೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೈಗಾರಿಕಾ ಮಾಲಿನ್ಯದಿಂದ ಪರಿಸರವೂ ಹಾಳಾಗುತ್ತಿದೆ.
ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಮತ್ತು ಕೃಷಿ-ಮೀನುಗಾರಿಕಾ ಆಧಾರಿತ ಉದ್ಯೋಗ ಸೃಷ್ಟಿಗೆ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನೀತಿ ರೂಪುಗೊಳ್ಳಬೇಕು. ಕೇವಲ ಭಾಷೆ-ಸಂಸ್ಕೃತಿಯ ಒಂದೆರಡು ಘೋಷಣೆಗಳಿಗೆ ಸೀಮಿತವಾಗದೆ, ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 18 ರಂದು ಬೆಳಿಗ್ಗೆ 9:30 ಗಂಟೆಗೆ ನಾಗುರಿ ಜಂಕ್ಷನ್‌ನಿಂದ ಸಚಿವ ಸಂಪುಟ ಸಭೆ ನಡೆಯುವ ಪಡೀಲಿನ ಪ್ರಜಾಸೌಧದವರೆಗೆ ಬೃಹತ್ ಮೆರವಣಿಗೆ ನಡೆಸಿ, ಸಚಿವ ಸಂಪುಟಕ್ಕೆ ಮನವಿ/ಆಗ್ರಹ ಪತ್ರ ಸಲ್ಲಿಸಲಾಗುವುದು ಎಂದು ಸಿಪಿಐಎಂ ಪ್ರಕಟಣೆಯಲ್ಲಿ ತಿಳಿಸಿದೆ.
1. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆ, ನಿಮ್ಹಾನ್ಸ್ ನರರೋಗದ ಆಸ್ಪತ್ರೆಯ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸುವುದು, ಕರಾವಳಿಯ ನೂತನ ತಾಲೂಕುಗಳಿಗೆ ನಿಯಮದಂತೆ ತಾಲೂಕು ಆಸ್ಪತ್ರೆಗಳನ್ನು ಮಂಜೂರು ಮಾಡುವುದು, ಪುತ್ತೂರಿನಲ್ಲಿ ಸ್ಥಾಪಿಸುವುದಾಗಿ ಘೋಷಿಸಿರುವ ಸರಕಾರಿ ಮೆಡಿಕಲ್ ಕಾಲೇಜ್ ಅನ್ನು ತಕ್ಷಣ ಕರ‍್ಯಗತಗೊಳಿಸುವುದು, ಪಿಪಿಪಿ ಮಾದರಿಗೆ ಅವಕಾಶ ನೀಡದಿರುವುದು, ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಘೋಷಿಸುವುದು, ಉತ್ತರ ಕನ್ನಡ ಜಿಲ್ಲೆಗೆ ಸರಕಾರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಒದಗಿಸುವುದು.
2. ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕರಾವಳಿ ಪ್ರವಾಸೋದ್ಯಮ ನೀತಿಯಲ್ಲಿ ದೊಡ್ಡ ಉದ್ಯಮಿಗಳನ್ನು ಒಳಗೊಳ್ಳುವ ಪಿ.ಪಿ.ಪಿ ಮಾದರಿ ಕೈ ಬಿಡುವುದು, ಸ್ಥಳೀಯರನ್ನು ಒಳಗೊಳ್ಳುವ ಪಾಲುದಾರಿಕೆ ನೀತಿಯನ್ನು ರೂಪಿಸುವುದು, ಕರಾವಳಿಯ ಪರಿಸರ, ಜನಸಂಸ್ಕೃತಿಗೆ ಧಕ್ಕೆಯಾಗದಂತೆ, ಸ್ಥಳೀಯ ಯುವಜನರಿಗೆ ಉದ್ಯೋಗವಕಾಶ ದೊರಕುವಂತೆ ಪ್ರವಾಸೋದ್ಯಮ ನೀತಿ ರೂಪಿಸುವುದು. ಕ್ಯಾಸಿನೊ, ಜೂಜುಗಳಿಗೆ ಅವಕಾಶ ನೀಡದಿರುವುದು.
3. ಕರಾವಳಿಯ ಕೃಷಿಗಳಾದ ಅಡಿಕೆ, ತೆಂಗು, ರಬ್ಬರ್ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಆದ್ಯತೆ ನೀಡುವುದು.
4. ಮೀನುಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದು. ಕೇರಳ ಮಾದರಿಯನ್ನು ಅನುಸರಿಸುವುದು. ಮಂಗಳೂರು ಮೀನುಗಾರಿಕಾ ಧಕ್ಕೆಯನ್ನು ಅಗತ್ಯಕ್ಕೆ ತಕ್ಕಂತೆ ವಿಸ್ತರಿಸುವುದು, ಮಂಗಳೂರು ದಕ್ಕೆ ಮಲ್ಪೆ ಸೇರಿದಂತೆ ಕರಾವಳಿಯ ಉದ್ದಕ್ಕೂ ಇರುವ ಮೀನುಗಾರಿಕಾ ಬಂದರುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು, ಆಧುನಿಕ ಗೊಳಿಸುವುದು. ಮಂಗಳೂರು ಅಳಿವೆ ಬಾಗಿಲಲ್ಲಿ ಹೂಳೆತ್ತುವುದು, ಅವಘಡಗಳನ್ನು ತಪ್ಪಿಸುವುದು. ನಾಡದೋಣಿ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಗಮನ ನೀಡುವುದು. ಮೀನುಗಾರಿಕೆ ಉತ್ಪನ್ನಗಳ ಕಿರು ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು. ನರ‍್ದಿಷ್ಟ ಯೋಜನೆ ರೂಪಿಸುವುದು.
5. ಸರ‍್ವಜನಿಕ ರಂಗ ಸೇರಿದಂತೆ ಕೈಗಾರಿಕೆ, ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದು ಕಡ್ಡಾಯಗೊಳಿಸಬೇಕು. ಸರೋಜಿನಿ ಮಹಿಷಿ ವರದಿಯನ್ನು ಅಗತ್ಯ ಮರ‍್ಪಾಡುಗಳೊಂದಿಗೆ ಜಾರಿಗೊಳಿಸಬೇಕು, ಉದ್ಯೋಗವಕಾಶಗಳಲ್ಲಿ ಸ್ಥಳೀಯ ಯುವಜನತೆಯನ್ನು ಉದ್ದೇಶಪರ‍್ವಕ ಹೊರಗಿಡುವವರ ಮೇಲೆ ಕ್ರಮಗಳು ಜರುಗಬೇಕು.
6. ಕರಾವಳಿ ಜಿಲ್ಲೆಗಳಲ್ಲಿ ನಿರುದ್ಯೋಗ ಸಮಸ್ಯೆ ಭೀಕರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಒಂದರಲ್ಲೆ ಪ್ರತಿ ರ‍್ಷ ಕನಿಷ್ಟ 50,000 ವಿದ್ಯರ‍್ಥಿಗಳು ಉದ್ಯೋಗಾಂಕ್ಷಿಗಳಾಗಿ ರ‍್ಟಿಫಿಕೇಟ್ ಗಳೊಂದಿಗೆ ಹೊರ ಬರುತ್ತಾರೆ. ರ‍್ಹತೆ ಆಧಾರದ ಉದ್ಯೋಗ ಸಿಗದೆ ಪರಿತಪಿಸುತ್ತಾರೆ. ಕರಾವಳಿ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸಬಲ್ಲ ಉದ್ಯಮಗಳಿಗೆ ಆದ್ಯತೆ ನೀಡಬೇಕು.
7. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಉತ್ತರ ಭಾರತದಿಂದ ವಲಸೆ ತೀವ್ರಗೊಳ್ಳುತ್ತಿದೆ. ಉದ್ಯೋಗ, ವ್ಯಾಪಾರ, ಗುತ್ತಿಗೆ ಕ್ಷೇತ್ರಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹೋಪಾದಿಯಲ್ಲಿ ಈ ವಲಸೆ ನಡೆಯುತ್ತಿದೆ. ಹಾಗೆಯೆ ಕರಾವಳಿ ಜಿಲ್ಲೆಗಳ ವಿದ್ಯಾವಂತ ಯುವಜನತೆ ಉದ್ಯೋಗವಕಾಶದ ಕೊರತೆಯಿಂದ ದೊಡ್ಡ ಪ್ರಮಾಣದಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ, ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಅನಿಯಂತ್ರಿತ ಒಳ ಹಾಗು ಹೊರ ವಲಸೆ ಸಾಮಾಜಿಕ ಬಿಕ್ಕಟ್ಟಿಗೂ ಕಾರಣವಾಗುತ್ತಿದೆ. ಈ ಕುರಿತು ರಾಜ್ಯ ಸರಕಾರ ಸೂಕ್ತ ಆಧ್ಯಯನ, ನಿಯಂತ್ರಣಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ವಲಸೆ ಕರ‍್ಮಿಕರ ಮೇಲಿನ ಶೋಷಣೆ, ದರ‍್ಜನ್ಯ ತಡೆಗಟ್ಟಲು ನಿಯಮಗಳನ್ನು ರೂಪಿಸಬೇಕಿದೆ.
8. ಕರಾವಳಿ ಜಿಲ್ಲೆಗಳಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಅರಸಿಕೊಂಡು ಯುವಜನರು ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿದೇಶಗಳಿಗೆ ಹೋಗುತ್ತಾರೆ. ಕರಾವಳಿ ಜಿಲ್ಲೆಗಳ ರ‍್ಥಿಕತೆ, ರಾಜ್ಯದ ಬೊಕ್ಕಸಕ್ಕೆ ದೊಡ್ಡ ಕೊಡುಗೆ ನೀಡುತ್ತಾರೆ. ಈ ಅನಿವಾಸಿ ಕನ್ನಡಿಗರಿಗಾಗಿ ಕಲ್ಯಾಣ ಯೋಜನೆಯನ್ನು ಆದಷ್ಟು ಬೇಗ ಜಾರಿಗೆ ತರಬೇಕು, ಆ ನಿಟ್ಟಿನಲ್ಲಿ ಕೇರಳ ಮಾದರಿಯನ್ನು ಅನುಸರಿಸಬೇಕು.
9. ಮರಳು ಹಾಗು ಕೆಂಪು ಕಲ್ಲು ಹೇರಳವಾಗಿ ಲಭ್ಯ ಇದ್ದರೂ, ಸ್ಪಷ್ಟವಾದ ಗಣಿಗಾರಿಕೆ ನೀತಿ ಇಲ್ಲದಿರುವುದರಿಂದ ಮರಳು ಹಾಗು ಕೆಂಪು ಕಲ್ಲು ದರ ತೀರಾ ದುಬಾರಿಯಾಗಿದೆ. ಇದು ಜನಸಾಮಾನ್ಯರ ಮನೆ ಕಟ್ಟುವ ಕನಸಿಗೂ ಅಡ್ಡಿಯಾಗಿದ್ದು, ನರ‍್ಮಾಣ ಕರ‍್ಮಿಕರು ಸೇರಿದಂತೆ ನರ‍್ಮಾಣ ವಲಯದಲ್ಲಿ ಸಂಕಷ್ಟಗಳಿಗೆ ಕಾರಣವಾಗಿದೆ. ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿ ಸರಳೀಕೃತ ಮರಳು, ಕೆಂಪು ಕಲ್ಲು ಗಣಿಗಾರಿಕೆ ನೀತಿ ಜಾರಿಗೆ ತರಬೇಕು. ಮರಳು ಹಾಗು ಕೆಂಪು ಕಲ್ಲು ದರ ನಿಗದಿಯನ್ನು ಜಿಲ್ಲಾಡಳಿತಗಳೆ ಮಾಡುವಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು.
10. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಸತಿ ಯೋಜನೆಗಳು ಜಾರಿಯಾಗದೆ ಎರಡು ದಶಕಗಳು ಕಳೆದಿವೆ. ಉಳಿದೆರಡು ಜಿಲ್ಲೆಗಳ ಸಮಸ್ಯೆಯೂ ಇದೇ ಆಗಿದೆ. ಮಂಗಳೂರು ನಗರ ಸೇರಿದಂತೆ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ನೂರಾರು ವಸತಿ ರಹಿತರು ಮನೆ ನಿವೇಶನ ಹಾಗು ವಸತಿ ಯೋಜನೆಗಾಗಿ ಅಸಹಾಯಕತೆಯಿಂದ ಕಾಯುತ್ತಿದ್ದಾರೆ. ಈ ಕುರಿತು ತಕ್ಷಣವೇ ಕ್ರಮಗಳು ಜರುಗಬೇಕು, ಸಮರೋಪಾದಿಯಲ್ಲಿ ಮನೆ ನಿವೇಶನ ವಿತರಣೆ, ವಸತಿ ಯೋಜನೆ ಜಾರಿಗೊಳಿಸಬೇಕು.
11. ಖಾಸಗಿ ಶಿಕ್ಷಣ ಸಂಸ್ಥೆಗಳ ಏಕಸ್ವಾಮ್ಯ ಇಡೀ ಶಿಕ್ಷಣ ವ್ಯವಸ್ಥೆಯನ್ನು ದುಬಾರಿಗೊಳಿಸಿದೆ. ಎಸ್ ಎಸ್ ಎಲ್ ಸಿ ತರುವಾಯ ಆಯ್ಕೆಯ ಶಿಕ್ಷಣ ಬಹುತೇಕ ವಿದ್ಯರ‍್ಥಿಗಳ ಪಾಲಿಗೆ ಅಸಾಧ್ಯ ಆಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ಪಿಯು, ಪದವಿ ಕಾಲೇಜು, ವೃತ್ತಿಪರ ಕಾಲೇಜುಗಳನ್ನು ಸ್ಥಾಪಿಸುವ ಅಗತ್ಯ ಇದೆ. ಸರಕಾರಿ ಕಾಲೇಜುಗಳಲ್ಲಿ ಖಾಸಗಿ ಕಾಲೇಜುಗಳಲ್ಲಿ ದೊರಕುವ ಕರ‍್ಸ್ ಗಳು, ಪದವಿಗಳು ಲಭ್ಯ ಇರುವಂತೆ ನೋಡಿಕೊಳ್ಳಬೇಕಿದೆ. ಹೊಸದಾಗಿ ಖಾಸಗಿ ವಿ ವಿ ಗಳಿಗೆ ಅವಕಾಶ ನೀಡಬಾರದು. ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಬೇಕು, ತಾಲೂಕು ಮಟ್ಟದಲ್ಲಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ಸ್ಥಾಪಿಸಬೇಕು.
12. ತುಳು ಭಾಷೆಯ ಮಾನ್ಯತೆಗೆ ಸಂಬಂಧಿಸಿ ಜನತೆಯ ಬೇಡಿಕೆ ಈಡೇರಿಸಬೇಕು.
13. ಕರಾವಳಿಯ ಹೆದ್ದಾರಿಗಳಲ್ಲಿ ಟೋಲ್ ಗೇಟ್‌ಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಇದು ಹೆದ್ದಾರಿ ಪ್ರಯಾಣವನ್ನು ದುಬಾರಿಯಾಗಿಸಿದೆ. ಸ್ಥಳೀಯರು ಹೆಚ್ಚು ಭಾದಿತರಾಗುತ್ತಿದ್ದಾರೆ. ಬಹುತೇಕ ಟೋಲ್ ಬೂತ್ ಗಳು ಅಂತರದ ನಿಯಮಗಳನ್ನು ಉಲ್ಲಂಘಿಸಿ ಸ್ಥಾಪಿಸಲಾಗುತ್ತಿದೆ. ಈ ರೀತಿಯಲ್ಲಿ ಟೋಲ್ ಗೇಟ್ ಗಳನ್ನು ಸ್ಥಾಪಿಸುವದನ್ನು ತಡೆಯಬೇಕು, ಅಂತರದ ನಿಯಮಗಳು ಸಹಿತ ಎಲ್ಲಾ ನಿಯಮಗಳು ಪಾಲನೆ ಆಗುವುದನ್ನು ಖಾತರಿ ಪಡಿಸಬೇಕು.
14. ಕೊರಗ, ಮಲೆಕುಡಿಯ, ಕುಡುಬಿ ಸಹಿತ ಸಣ್ಣ ಪುಟ್ಟ ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ದಿಗೆ ಯೋಜನೆ ರೂಪಿಸಬೇಕು. ಅವರ ಸಂಸ್ಕೃತಿ, ಬದುಕು ರಕ್ಷಣೆಗೆ ಕ್ರಮಗಳು ಆಗಬೇಕು. ಅಳಿವಿನಂಚಿಗೆ ಸಾಗುತ್ತಿರುವ ಕೊರಗ ಸಮುದಾಯದ ಬೇಡಿಕೆಗಳ ಈಡೇರಿಕೆ, ಕಲ್ಯಾಣ ಯೋಜನೆ ತಕ್ಷಣವೆ ಜಾರಿಗೆ ಬರಬೇಕು. ಡಾ. ಮುಹಮ್ಮದ್ ಪೀರ್ ವರದಿ ಜಾರಿಯಾಗಬೇಕು, ಅರಣ್ಯ ಹಕ್ಕು ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಟಾನಕ್ಕೆ ತರಬೇಕು.
15. ಡಿ ಸಿ ಮನ್ನಾ ಭೂಮಿ ಸಹಿತ ದಲಿತ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಬೇಕು.
16. ಕಸ್ತೂರಿ ರಂಗನ್ ವರದಿಯ ಜಾರಿಗೆ ಕೇಂದ್ರ ಸರಕಾರ ಮುಂದಾಗಿರುವುದು ಪಶ್ಚಿಮ ಘಟ್ಟ, ಮಲೆನಾಡಿನ ನಿವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ರಾಜ್ಯ ಸರಕಾರ ಈ ಕುರಿತು ದೃಢ ನರ‍್ಧಾರ ಕೈಗೊಳ್ಳಬೇಕು.
17. ಮಂಗಳೂರು ನಗರ ಹಾಗು ಹೊರ ವಲಯದಲ್ಲಿ ಸಂಚಾರ ದಟ್ಟಣೆ ಬಹು ದೊಡ್ಡ ಸಮಸ್ಯೆಯಾಗಿದೆ. ವಾಹನ ಸಂಚಾರ ತ್ರಾಸದಾಯಕವಾಗಿದೆ. ಅಪಘಾತಗಳು ಹೆಚ್ಚುತ್ತಿವೆ. ವಾಹನ ದಟ್ಟಣೆ ನಿಭಾಯಿಸಲು ಮೇಲ್ಸೇತುವೆಗಳ ನರ‍್ಮಾಣ, ರಸ್ತೆಗಳ ಅಗಲೀಕರಣ, ರಿಂಗ್ ರೋಡ್ ಗಳ ನರ‍್ಮಾಣ, ಮೆಟ್ರೊ ರೈಲು ಯೋಜನೆಗಳನ್ನು ಕರ‍್ಯಗತಗೊಳಿಸುವುದು.
18. ಹೈಕೋರ್ಟ್ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವುದು.
19. ಕೋಮು ಸೌಹರ‍್ದತೆ, ಸಹಬಾಳ್ವೆ ಸಾಧ್ಯಗೊಳಿಸಲು ವಿಶೇಷ ಕರ‍್ಯಯೋಜನೆ ರೂಪಿಸುವುದು.
20. ಕರಾವಳಿಯ ನದಿ, ಸಮುದ್ರವನ್ನು ಕೈಗಾರಿಕಾ ಮಾಲಿನ್ಯದಿಂದ ರಕ್ಷಿಸುವುದು, ಸಂಸ್ಕರಿಸದೆ ತ್ಯಾಜ್ಯ ನೀರು ಹರಿಸುವುದು, ಸರಿಯಾದ ಪ್ರಮಾಣದ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸದಿರುವ ಉದ್ಯಮ, ಕೈಗಾರಿಕಾ ಘಟಕಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದು, ಬೈಕಂಪಾಡಿ ಕೈಗಾರಿಕಾ ವಲಯಕ್ಕೆ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದ ತ್ಯಾಜ್ಯ ಶುದ್ದೀಖರಣ ಘಟಕ ಸ್ಥಾಪಿಸುವುದು.
21. ಮೀನುಗಾರಿಕಾ ಉತ್ಪನ್ನಗಳ ಉದ್ಯಮಗಳು ಫಿಶ್ ಮಿಲ್‌ಗಳಿಗೆ ಪ್ರತ್ಯೇಕ ಕೈಗಾರಿಕಾ ವಲಯ ಸ್ಥಾಪಿಸುವುದು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್, ಯಾದವ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಜಯಂತಿ ಬಿ.ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಪ್ರಮೀಳಾ ಕೆ, ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.