BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangalore new DCP ಮಂಗಳೂರಿಗೆ ಹೊಸ ಡಿಸಿಪಿ: ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಸ್ಯಾಮ್ ವರ್ಗೀಸ್ ನೇಮಕ


ಮಂಗಳೂರು,ಸೆಪ್ಟೆಂಬರ್ 07: ಸ್ಯಾಮ್ ವರ್ಗೀಸ್ IPS ಅವರನ್ನು ಮಂಗಳೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ನಿಯುಕ್ತಿಗೊಂಡಿದ್ದಾರೆ. ಕರ್ನಾಟಕ ಸರ್ಕಾರ ಸೋಮವಾರ  ಐಪಿಎಸ್ ಅಧಿಕಾರಿಗಳ ಹೊಸ ವರ್ಗಾವಣೆಯಲ್ಲಿ ಈ ಆದೇಶ ಮಾಡಿದೆ.  

ಬೆಂಗಳೂರಿನ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವರ್ಗೀಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ವರ್ಗಾಯಿಸಿ ನೇಮಿಸಲಾಗಿದೆ. ಮಂಗಳೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ಮಿಥುನ್ ಎಚ್.ಎನ್. ಅವರ ವರ್ಗಾವಣೆಯ ನಂತರ ಈ ಹುದ್ದೆ ಖಾಲಿ ಇತ್ತು. ಮಿಥುನ್ ಅವರನ್ನು ಇತ್ತೀಚೆಗೆ ಗದಗ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿತ್ತು.

ಇದೇ ವೇಳೆ ಬೆಂಗಳೂರಿನ ನೈರುತ್ಯ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಅನಿತಾ ಭೀಮಪ್ಪ ಹಡ್ಡಣ್ಣವರ್ ಅವರನ್ನು ವರ್ಗಾವಣೆ ಮಾಡಿದ್ದು, ವರ್ಗೀಸ್ ಅವರ ಬದಲಿಗೆ ಬೆಂಗಳೂರಿನ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿದೆ.

ಬೆಂಗಳೂರಿನಲ್ಲಿ, ಕೊಪ್ಪಳದಿಂದ ವರ್ಗಾವಣೆಗೊಂಡ ಬಳಿಕ postings ಗಾಗಿ ಕಾಯುತ್ತಿದ್ದ ರಾಮ್ ಎಲ್. ಅರಸಿದ್ಧಿ ಅವರನ್ನು ಬೆಂಗಳೂರು ನಗರದ ಗುಪ್ತಚರ (ಇಂಟೆಲಿಜೆನ್ಸ್) ಡಿಸಿಪಿಯಾಗಿ ನೇಮಿಸಲಾಗಿದೆ. ಹಾಗೆಯೇ, ಹುದ್ದೆಗಾಗಿ ಕಾಯುತ್ತಿದ್ದ ಲಕ್ಷ್ಮಿ ಗಣೇಶ್ ಕೆ. ಅವರನ್ನು ಬೆಂಗಳೂರಿನ ನೈರುತ್ಯ ಡಿಸಿಪಿಯಾಗಿ ನೇಮಿಸಲಾಗಿದ್ದು, ಇವರು ಹಡ್ಡಣ್ಣವರ್ ಅವರ ಸ್ಥಾನವನ್ನು ತುಂಬಲಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!