BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Madikeri : In a Bid to Save Daughter, Mother Jumps Into Deep Lake and Both Drown ಮಡಿಕೇರಿ: ಮಗಳನ್ನು ರಕ್ಷಿಸಲು ಹೋಗಿ ಕೆರೆಗೆ ಹಾರಿ ಪ್ರಾಣಬಿಟ್ಟ ತಾಯಿ; ದುರ್ಮರಣ


ಮಡಿಕೇರಿ,ಸೆಪ್ಟೆಂಬರ್ 02: ಮಗಳನ್ನು ಕಾಪಾಡಲು ಹೋಗಿ ಈಜಲು ಬಾರದಿದ್ದರೂ ತಾಯಿಯೂ ಕೆರೆಗೆ ಹಾರಿ ಇಬ್ಬರೂ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಡಿಕೇರಿ ತಾಲೂಕಿನಲ್ಲಿ ನಡೆದಿದೆ.

ಪ್ರಿಯಾಂಕಾ ಕೆರೆಗೆ ಹಾರಿದ ತಕ್ಷಣ ಆಕೆಯನ್ನು ತಡೆಯಲು ತಾಯಿ ಪ್ರೇಮ ಕೂಡ ಆಕೆಯ ಹಿಂದೆ ಓಡಿದ್ದಾರೆ. ಆದರೆ ಅವರು ಕೆರೆಯ ಹತ್ತಿರ ತಲುಪುವಷ್ಟರಲ್ಲೇ ಪ್ರಿಯಾಂಕಾ ಕೆರೆಗೆ ಹಾರಿದ್ದಾಳೆ. ಮಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂದು ಹಂಬಲಿಸಿದ ತಾಯಿ ಪ್ರೇಮ, ತಮಗೆ ಈಜಲು ಬಾರದಿದ್ದರೂ ಯೋಚಿಸದೆ ಕೆರೆಗೆ ಹಾರಿದ್ದಾರೆ. ಆದರೆ ಕೆರೆ ಸುಮಾರು 15 ರಿಂದ 20 ಅಡಿ ಆಳವಿದ್ದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳೀಯರು ಅವರನ್ನು ರಕ್ಷಿಸಲು ಹಪಹಪಿಸಿದರೂ, ಕೆರೆಯ ಆಳ ಹೆಚ್ಚಿದ್ದ ಕಾರಣ ಸಾಧ್ಯವಾಗಿಲ್ಲ. ಸೋಮವಾರ ಕತ್ತಲೆಯಾದ ಕಾರಣ ಶೋಧನಾ ಕಾರ್ಯಾಚರಣೆ ವಿಳಂಬವಾಗಿತ್ತು. ಮಂಗಳವಾರ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಭಾಗಮಂಡಲ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಹರಸಾಹಸಪಟ್ಟು ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!