BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Kasaragod ಕಾಸರಗೋಡು: ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಸಿಲುಕಿ 11 ವರ್ಷದ ಬಾಲಕ ದಾರುಣ ಸಾವು


ಕಾಸರಗೋಡು, ಸೆಪ್ಟೆಂಬರ್ 04 : ಅಂಗನವಾಡಿ ಮುಂಭಾಗದ ಧ್ವಜಸ್ತಂಭದ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿಕೊಂಡ ಪರಿಣಾಮ 11 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಕಾಸರಗೋಡು ಮಡಿಕೈ ಸಮೀಪದ ಕಾಞಿಪ್ಪೊಯಿಲ್ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. 

ರಾಜೇಶ್ (ಪಿಕಪ್ ಡ್ರೈವರ್) ಮತ್ತು ನೀತು (ಸೇಲ್ಸ್‌ವುಮನ್) ದಂಪತಿಯ ಏಕೈಕ ಪುತ್ರ ಅನೇಕ್ ಮೃತ ಬಾಲಕ. ಮುನ್ನು ರಸ್ತೆ ನಿವಾಸಿಯಾದ ಅನೇಕ್, ಕಾನಿರಪೊಯಿಲ್‌ನ ಸರಕಾರಿ ಹೈಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದನು. ಶಾಲೆಯಿಂದ ಬಂದ ಬಳಿಕ ಪ್ರತಿದಿನ ಅಂಗನವಾಡಿ ಬಳಿಯ ಬಯಲು ಜಾಗದಲ್ಲಿ ಆಟವಾಡಲು ಬರುತ್ತಿದ್ದ. ಆದರೆ ಘಟನೆ ನಡೆದ ಗುರುವಾರದಂದು ಆಟವಾಡಲು ಆತ ಒಬ್ಬನೇ ಬಂದಿದ್ದನೆಂದು ಚೆರಂತಾಲ ವಾರ್ಡ್‌ನ ಪಂಚಾಯತ್ ಸದಸ್ಯ ಬಾಲಕೃಷ್ಣನ್ ವಿ. ತಿಳಿಸಿದ್ದಾರೆ. ಧ್ವಜಸ್ತಂಭದ ಹಗ್ಗವನ್ನು ಹಿಡಿದುಕೊಂಡು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದ ಪರಿಣಾಮ ಹಗ್ಗವು ಕುತ್ತಿಗೆಗೆ ಬಿಗಿದುಕೊಂಡಿದೆ ಎಂದು ಪ್ರಾಥಮಿಕ ಅಂದಾಜಿಸಲಾಗಿದೆ. ಆ ಪ್ರದೇಶದಲ್ಲಿದ್ದ ಆಟೋ ಚಾಲಕರೊಬ್ಬರು ಇದನ್ನು ಗಮನಿಸಿ ಸ್ಥಳೀಯರ ಸಹಾಯದಿಂದ ಬಾಲಕನನ್ನು ಹಗ್ಗದಿಂದ ಬಿಡಿಸಿ ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲಿ ಬಾಲಕ ಮೃತಪಟ್ಟಿದ್ದನೆಂದು ವೈದ್ಯರು ಘೋಷಿಸಿದರು. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!