BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

Gangolli: Submerged fishing nets worth Rs 30 lakh successfully retrieved from the sea ಗಂಗೊಳ್ಳಿ ಮಧ್ಯ ಸಮುದ್ರದಲ್ಲಿ ಯಶಸ್ವಿ ಕಾರ್ಯಾಚರಣೆ 30 ಲಕ್ಷ ರೂ. ಮೌಲ್ಯದ ಮೀನುಗಾರಿಕಾ ಬಲೆ ಹೊರತೆಗೆದ ಮೀನುಗಾರರ ತಂಡ..!


ಉಡುಪಿ,ಸೆಪ್ಟೆಂಬರ್ 01 : ಉಡುಪಿ ಜಿಲ್ಲೆಯ ಗಂಗೊಳ್ಳಿ ನದೀಮುಖ ಪ್ರದೇಶದಲ್ಲಿ ಕಳೆದ ಆಗಸ್ಟ್ 26 ರಂದು ‘ಶ್ರೀ ಬಾಲಾಂಜನೇಯ’ ದೋಣಿಯೊಂದಿಗೆ ಸಮುದ್ರದಲ್ಲಿ ಮುಳುಗಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಾರಿಕಾ ಬಲೆಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.

ಕಾಂಚನಗಂಗಾ ದೋಣಿಯ ಮಾಲೀಕ ಚಂದ್ರ ಖಾರ್ವಿ ಅವರ ಮಾಹಿತಿಯ ಮೇರೆಗೆ, ಗಂಗೊಳ್ಳಿಯ ದಿನೇಶ್ ಖಾರ್ವಿ ಅವರು 34 ಮೀನುಗಾರರೊಂದಿಗೆ ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ ಪರ್ಸೀನ್  ದೋಣಿಯಲ್ಲಿ ತೆರಳಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆಗೆ ಹೊರಟ ಮೀನುಗಾರರ ತಂಡವು ಸೋಮವಾರ ಸಂಜೆ 4 ಗಂಟೆಯವರೆಗೆ ಸಮುದ್ರದಲ್ಲೇ ಇದ್ದು ಶ್ರಮಿಸಿದೆ. ಅಂತಿಮವಾಗಿ ಸುಮಾರು 700 ವಾರ ಉದ್ದದ, ಅಂದಾಜು 30 ಲಕ್ಷ ರೂ. ಮೌಲ್ಯದ ಮುಳುಗಿದ್ದ ಮೀನುಗಾರಿಕಾ ಬಲೆಯನ್ನು ಸುರಕ್ಷಿತವಾಗಿ ದಡಕ್ಕೆ ತಂದು ಸಂಬಂಧಪಟ್ಟ ದೋಣಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!